ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಆಧಾರ್ ಕಾರ್ಡ್ನಲ್ಲಿನ ಹೆಸರು, ವಿಳಾಸ, ಜನ್ಮದಿನಾಂಕ, ಮೊಬೈಲ್ ಸಂಖ್ಯೆ ಹಾಗೂ ಇತರೆ ವಿವರಗಳನ್ನು ಅಪ್ಡೇಟ್ ಮಾಡಿಸಿಕೊಳ್ಳಲು ಆಧಾರ್ ಕೇಂದ್ರಗಳಿಗೆ ಬರುವ ಜನತೆ ಸರ್ವರ್ ಸಮಸ್ಯೆಯಿಂದ ತೀವ್ರ ತೊಂದರೆಗೀಡಾಗುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಆಧಾರ್ ಕಾರ್ಡ್ನಲ್ಲಿನ ಹೆಸರು, ವಿಳಾಸ, ಜನ್ಮದಿನಾಂಕ, ಮೊಬೈಲ್ ಸಂಖ್ಯೆ ಹಾಗೂ ಇತರೆ ವಿವರಗಳನ್ನು ಅಪ್ಡೇಟ್ ಮಾಡಿಸಿಕೊಳ್ಳಲು ಆಧಾರ್ ಕೇಂದ್ರಗಳಿಗೆ ಬರುವ ಜನತೆ ಸರ್ವರ್ ಸಮಸ್ಯೆಯಿಂದ ತೀವ್ರ ತೊಂದರೆಗೀಡಾಗುತ್ತಿದ್ದಾರೆ.ನಿಧಾನ ಗತಿಯಲ್ಲಿ ಸರ್ವರ್ ಕೆಲಸ ಮಾಡುವುದು ಮತ್ತು ಆಗಾಗ್ಗೆ ಸಂಪರ್ಕ ಕಡಿತಗೊಳ್ಳುತ್ತಿರುವುದರಿಂದ ನವೀಕರಣ ಕಾರ್ಯ ವಿಳಂಬವಾಗುತ್ತಿದೆ. ಬೆಳಗ್ಗೆಯಿಂದಲೇ ಸರದಿಯಲ್ಲಿ ಜನತೆ ನಿಂತರೂ ಗಂಟಗಟ್ಟಲೆ ಕಾಯುವಂತಾಗಿದೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಉದ್ಯೋಗ ಬಿಟ್ಟು ನವೀಕರಣಕ್ಕೆ ಸರದಿಯಲ್ಲಿ ನಿಲ್ಲುವಂತಾಗಿದೆ. ಆಧಾರ್ ವಿವರಗಳಲ್ಲಿನ ತಿದ್ದುಪಡಿ, ನವೀಕರಣ ಬ್ಯಾಂಕ್ ವ್ಯವಹಾರಗಳು, ಸರ್ಕಾರಿ ಯೋಜನೆಗಳ ಸೌಲಭ್ಯ ಹಾಗೂ ವಿವಿಧ ದಾಖಲೆಗಳ ದೃಢೀಕರಣಕ್ಕೆ ಅತ್ಯಗತ್ಯವಾಗಿದ್ದರಿಂದ ಸಾರ್ವಜನಿಕರು ಅನಿವಾರ್ಯವಾಗಿ ಆಧಾರ್ ಕೇಂದ್ರದತ್ತ ದೌಡಾಯಿಸುತ್ತಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದ ನಿಗದಿತ ಅವಧಿಯಲ್ಲಿ ಕಾರ್ಯಗಳಾಗುತ್ತಿಲ್ಲವೆಂದು ಜನತೆ ಹಿಡಿಶಾಪ ಹಾಕುವಂತಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಸರ್ವರ್ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ ಆಧಾರ್ ಕೇಂದ್ರಗಳ ಕಾರ್ಯನಿರ್ವಹಣೆ ಸುಗಮಗೊಳಿಸಬೇಕು. ಸಾರ್ವಜನಿಕರು ಅನಗತ್ಯವಾಗಿ ಹೆಚ್ಚು ಸಮಯ ಕಾಯುವ ಪರಿಸ್ಥಿತಿ ನಿವಾರಿಸಲು ಕ್ರಮ ಕೈಗೊಳ್ಳಬೇಕೆಂದು ಜನತೆ ಒತ್ತಾಯಿಸಿದ್ದಾರೆ.------ಸರ್ವರ್ ಸಮಸ್ಯೆಯಿಂದ ಮುಂಜಾನೆಯಿಂದ ಸಂಜೆಯವರೆಗೂ ಕಾಯ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದ ಉದ್ಯೋಗ ಸರಿಯಾಗಿ ಮಾಡಲಾಗುತ್ತಿಲ್ಲ.
ವಿಶ್ವನಾಥ ಬೋಕರೆ