ತಣ್ಣಗಾದ ಕೃಷ್ಣೆ, ನೆರೆ ಭಯದಿಂದ ಜನತೆ ಪಾರು

| Published : Aug 29 2025, 01:00 AM IST

ಸಾರಾಂಶ

ಮಹಾರಾಷ್ಟ್ರದಿಂದ ಬಿಡುಗಡೆಯಾಗುತ್ತಿರುವ ನೀರು ಹಾಗು ಮಳೆರಾಯನ ಅಬ್ಬರದಿಂದ ೨.೨ ಲಕ್ಷ ಕ್ಯುಸೆಕ್ ಹರಿವು ತಲುಪಿದ್ದ ಹಿಪ್ಪರಗಿ ಜಲಾಶಯಕ್ಕೆ ಗುರುವಾರ ೬೭,೫೮೦ ಕ್ಯುಸೆಕ್ ಒಳಹರಿವಿದ್ದು, ಜಲಾಶಯದಿಂದ ೬೬,೮೩೦ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ ಎಂದು ಎಸಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮಹಾರಾಷ್ಟçದಿಂದ ಬಿಡುಗಡೆಯಾಗುತ್ತಿರುವ ನೀರು ಹಾಗು ಮಳೆರಾಯನ ಅಬ್ಬರದಿಂದ ೨.೨ ಲಕ್ಷ ಕ್ಯುಸೆಕ್ ಹರಿವು ತಲುಪಿದ್ದ ಹಿಪ್ಪರಗಿ ಜಲಾಶಯಕ್ಕೆ ಗುರುವಾರ ೬೭,೫೮೦ ಕ್ಯುಸೆಕ್ ಒಳಹರಿವಿದ್ದು, ಜಲಾಶಯದಿಂದ ೬೬,೮೩೦ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ ಎಂದು ಎಸಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ. ಕೃಷ್ಣೆಯ ನೆರೆ ಭೀತಿಯಿಂದ ಭಯದಿಂದಿದ್ದ ಜನತೆ ನಿರಾಳಗೊಂಡಿದ್ದಾರೆ. ಇದರಿಂದ ನದಿ ಸುತ್ತಲಿನ ರಬಕವಿ ನಾಗರಿಕರು ಸೇರಿದಂತೆ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಈಗಾಗಲೇ ಘಟಪ್ರಭಾ ನದಿಯು ಇಳಿಮುಖ ಕಂಡಿದೆ. ಘಟಪ್ರಭಾ ನದಿ ನೀರಿನ ಮಟ್ಟವೂ ಗಣನೀಯವಾಗಿ ಇಳಿಕೆಯಾಗಿದ್ದು, ಘಟಪ್ರಭಾ ನದಿ ಸಂಪರ್ಕದ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.