ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿಸ್ವಾರ್ಥದ ನೆಲೆಗಟ್ಟಿನಲ್ಲಿ ‘ಆರೋಗ್ಯ ಕ್ರಾಂತಿ’ ಮಾಡಲು ಮುಂದಾಗಿರುವ ಸಮಾಜಮುಖಿ ಡಾಕ್ಟರ್ ಡಾ. ಫಾರುಖ ಅಹ್ಮದ್ ಮನೂರ ಕಾಯಕಜೀವಿಯಾಗಿ, ಸಾಮಾಜಿಕ ಕಳಕಳಿಯೊಂದಿಗೆ ವೈದ್ಯ ವೃತ್ತಿಯ ಘನತೆ ಗೌರವ ಎತ್ತಿ ಹಿಡಿದಿದ್ದಾರೆ ಎಂದು ಕಲಬುರಗಿ ದಕ್ಷೀಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹೇಳಿದ್ದಾರೆ.ಕಲಬುರಗಿ ನಗರದ ರಿಂಗ್ ರಸ್ತೆಯಲ್ಲಿರುವ ಮನ್ನೂರ ಸುಪರ್ ಸ್ಪೇಷಾಲಿಟಿ ಆಸ್ಪತ್ರೆಯ ಸಭಾಂಗಣದಲ್ಲಿ ಆಸ್ಪತ್ರೆಯ 3ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಟಿಬಿ ಮುಕ್ತ ಭಾರತ ನಿರ್ಮಾಣದ ಭಾಗವಾಗಿ 500 ಕ್ಷಯ ಪೀಡಿತರನ್ನು ದತ್ತು ಪಡೆದಿರುವ ಕಲಬುರಗಿಯ ಮಣೂರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಫಾರೂಕ್ ಅಹ್ಮದ್ ಮಣೂರ್ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸನ್ಮಾನಿಸಿದರು. ಕಲ್ಯಾಣ ಕರ್ನಾಟಕ ಭಾಗದಿಂದ ಡಾ. ಫಾರೂಕ್ ಮಣೂರ್ ಹೀಗೆ ರಾಜ್ಯಪಾಲರಿಂದ ಸನ್ಮಾನ ಸ್ವೀಕರಿಸಿದ ಏಕೈಕ ವೈದ್ಯರಾಗಿದ್ದಾರೆ ಎಂದರು.
ಗಂಭೀರ ಸ್ವರೂಪದ ಅನಾರೋಗ್ಯ ಪ್ರಕರಣಗಳಲ್ಲಿ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ನೀಡುವುದರ ಜೊತೆಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವುದೇ ಆಸ್ಪತ್ರೆಯ ವೈಶಿಷ್ಟತೆ. ಬೇಸಿಗೆ ಅವಧಿಯಲ್ಲಿ ಕಲಬುರಗಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಅರವಟಿಗೆಗಳನ್ನು ಅಳವಡಿಸಿ ಆ ಮೂಲಕ ಸಾರ್ವಜನಿಕರಿಗೆ ಶುದ್ಧ ಕುಡಿವ ನೀರು ಪೂರೈಸುವ ಕೆಲಸವನ್ನು ಡಾ.ಫಾರೂಕ್ ಮಣೂರ್ ಮಾಡಿದ್ದಾರೆ. ಜೊತೆಗೆ, ಬೀದಿ ಬದಿ ವ್ಯಾಪಾರಿಗಳಿಗೆ ಮಳೆ ಮತ್ತು ಬಿಸಿಲಿನಿಂದ ಆಸರೆ ದೊರೆಯಲು ಕೊಡೆ ವ್ಯವಸ್ಥೆ , ಟ್ರಾಫಿಕ್ ಪೊಲಿಸರಿಗೆ ಹೆಲ್ಮೆಟ್ ವಿತರಣೆ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆಂದು ಸೇವೆಗಳನ್ನು ಪಟ್ಟಿ ಮಾಡಿದರು.ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೇಟಿ ಬಚಾವೊ ಬೇಟಿ ಪಡಾವೋ ಯೋಜನೆಗೆ ಓಗೊಟ್ಟು ಮಣೂರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಫಾರೂಕ್ 200 ಹೆಣ್ಣು ಮಕ್ಕಳಿಗೆ ಈ ಯೋಜನೆಯ ಲಾಭ ತಲುಪಿಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಹೆಣ್ಣು ಮಗುವಿನ ಹೆಸರಿಗೆ ಯೋಜನೆಯ ಅಡಿಯಲ್ಲಿ ಬ್ಯಾಂಕ್ ಖಾತೆ ತೆರೆದು ಭರವಸೆ ಮೂಡಿಸುವ ಪ್ರಮಾಣದ ಠೇವಣಿ ಇಡುವ ಕೆಲಸವನ್ನು ಡಾ.ಫಾರೂಕ್ ಮಾಡುತ್ತಿದ್ದಾರೆ. ಈವರೆಗೆ 200 ಹೆಣ್ಣು ಮಕ್ಕಳ ಹೆಸರಿನಲ್ಲಿ ಹೀಗೆ ಬ್ಯಾಂಕ್ ಖಾತೆ ತೆರೆದು ಆ ಮಕ್ಕಳ ಹೆಸರಿನಲ್ಲಿ ಇಡಗಂಟು ಇಟ್ಟಿದ್ದಾರೆ ಡಾ. ಫಾರುಕ್ ಅಹ್ಮದ ಮನ್ನೂರ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ನಂತರ ಮನ್ನೂರ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಅಹ್ಮದ ಮನ್ನೂರ ಮಾತನಾಡಿ, ಬಡವರಿಂದ ಹಿಡಿದು ಎಲ್ಲ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೇವೆಗಳನ್ನು ಲಭಿಸುವಂತೆ ಮಾಡುವ ಮೆಡಿಕಲ್ ಹಬ್ ನಿರ್ಮಾಣ ತಮ್ಮ ಪ್ರಾಮಾಣಿಕ ಕನಸಾಗಿದೆ ಈ ನಿಟ್ಟಿನಲ್ಲಿ ಈಗಾಗಲೇ ಅರ್ಧ ದಾರಿ ಕ್ರಮಿಸಲಾಗಿದ್ದು, ಈ ಭಾಗದ ಬಹಳಷ್ಟು ಜನರು ಈಗ ಚಿಕಿತ್ಸೆಗಾಗಿ ಸೊಲ್ಲಾಪುರ, ಹೈದರಾಬಾದ್ ಕಡೆಗೆ ಮುಖ ಮಾಡುವುದು ಕಡಿಮೆಯಾಗಿದೆ. ನಮ್ಮ ಮೆಡಿಕಲ್ ಹಬ್ ಕನಸು ಸಾಕಾರಗೊಂಡ ಬಳಿಕ ನಮ್ಮಲ್ಲಿಯೇ ಎಲ್ಲ ರೀತಿಯ ಆರೋಗ್ಯ ಸೇವೆಗಳು ಬಿಲ್‍ಕುಲ್ ಕೈಗೆಟುಕುವ ದರದಲ್ಲಿ ಒದಗಿಸುವುದು ನಮ್ಮ ಕನಸಾಗಿದೆ ಎಂದರು.ಮಣೂರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‍ನಲ್ಲಿ ನಾವು ವಿಶ್ವದರ್ಜೆಯ ಚಿಕಿತ್ಸಾ ಕ್ರಮಗಳನ್ನು ಜನರಿಗೆ ಒದಗಿಸುತ್ತಿದ್ದೇವೆ. ನುರಿತ ತಜ್ಞ ವೈದ್ಯರು ನಮ್ಮಲ್ಲಿದ್ದಾರೆ ಎಂಬುದು ನಮ್ಮ ಪಾಲಿನ ಹೆಮ್ಮೆ. ವಿಶ್ವದರ್ಜೆಯ ಚಿಕಿತ್ಸೆ ಒದಗಿಸುತ್ತಿದ್ದರೂ ವೈದ್ಯಕೀಯ ಸೇವಾ-ಸಿದ್ಧಾಂತಗಳಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ, ಜನರಿಗೆ ಕೈಗೆಟಕುವ ದರಗಳಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದ್ದೇವೆ.
ಡಾ.ಫಾರೂಕ್ ಅಹ್ಮದ್ ಮಣೂರ್, ವ್ಯವಸ್ಥಾಪಕ ನಿರ್ದೇಶಕರು