ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಬಾಗಲಕೋಟೆ ಮತಕ್ಷೇತ್ರದ ಎಲ್ಲ ಜನರಿಗೆ ವಿಶ್ವಾಸವಿದೆ. ನಿಶ್ಚಿತವಾಗಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ನಗರ ಆರಾಧ್ಯ ದೈವ ಮೋಟಗಿ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿ ನಂತರ 5, 6 ಮತ್ತು 9ನೇ ವಾರ್ಡ್‌ನಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ಮೂಲಕ ಪ್ರಚಾರ ಆರಂಭಿಸಿ ಮಾತನಾಡಿದರು. ನಾಮಪತ್ರ ಸಲ್ಲಿಸುವ ವೇಳೆ ಮೆರವಣಿಗೆ ನಡೆಸಿರುವುದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. ಬಾಗಲಕೋಟೆ ಅಭಿವೃದ್ಧಿಗಾಗಿ ಬಿಜೆಪಿ ಮುಖ್ಯ, ಅಭಿವೃದ್ಧಿ ಶೂನ್ಯ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಈ ಸಲ ಬಾಗಕೋಟೆ ಜನ ಬಿಜೆಪಿ ಗೆಲ್ಲಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಮನೆ ಮನೆ ಸಂಪರ್ಕ ಮಾಡಿ ಬಿಜೆಪಿಯ ಅಭಿವೃದ್ಧಿ ಕೆಲಸಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜನರು ಕೂಡ ಬುದ್ಧಿವಂತರಿದ್ದಾರೆ ಎಂದು ಹೇಳಿದರು.

ಡಾ.ದೇವರಾಜ ಪಾಟೀಲ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಹೊಂದಿದ ದೇಶವಾಗಿ ಬೆಳೆಯುತ್ತಿದೆ. ಡಾ.ವೀರಣ್ಣ ಚರಂತಿಮಠ ಅವರು ಶಾಸಕರಾಗಿದ್ದ ಅವಧಿಯಲ್ಲಿ ಬಾಗಲಕೋಟೆ ಅತಿ ಹೆಚ್ಚು ಅಭವೃದ್ಧಿ ಕಂಡಿದೆ,ಅವರ ಸೇವೆ ಬಾಗಲಕೋಟೆಗೆ ಅವಶ್ಯ ಎಂದರು.ಪಾದಯಾತ್ರೆಯಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಜು ನಾಯ್ಕರ, ರಾಜು ರೇವಣಕರ್, ಕುಮಾರ ಯಳ್ಳಿಗುತ್ತಿ, ಶಿವಾನಂದ ಟವಳಿ, ಯಲ್ಲಪ್ಪ ಬೇಂಡಿಗೇರಿ,ಕುಮಾರ ಯಳ್ಳಿಗುತ್ತಿ, ದುಂಡಪ್ಪ ಏಳಮ್ಮಿ, ಮುತ್ತು ಗರಸಂಗಿ, ಮಾನೇಶ ಅಂಬಿಗೇರ, ನಾಗರಾಜ ಕಟ್ಟಿಮನಿ, ಶಂಕರ ಸಗರ, ಪ್ರೇಮಾ ಅಂಬಿಗೇರ, ಶಶಿಕಲಾ ಮಜ್ಜಗಿ, ರೇಖಾ ಕಲಬುರಗಿ. ಸ್ಮೀತಾ ಪವಾರ, ಭಾಗ್ಯಶ್ರೀ ಹಂಡಿ ಶಾಂತಪ್ಪ ಬಾಡದ, ಶಂಕರ ಗಲಗ, ಶರಣಪ್ಪ ಕೆರೂರ, ಪರಶುರಾಮ ದಾವಣಗೇರಿ. ಸುರೇಶ ಮಜ್ಜಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.