ಜನರಿಗೆ ಡಿಜಿಟಲ್ ಬ್ಯಾಂಕಿಂಗ್ ಅರಿವು ಅಗತ್ಯ

| Published : Aug 13 2025, 12:30 AM IST

ಸಾರಾಂಶ

ದಾಬಸ್‍ಪೇಟೆ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಿಮಾ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಜನರಿಗೆ ಡಿಜಿಟಲ್ ಬ್ಯಾಂಕಿಂಗ್ ಉಪಯೋಗ ಮತ್ತು ದುರುಪಯೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಲಹೆಗಾರ ಸಂಪತ್ ಕುಮಾರ್ ತಿಳಿಸಿದರು.

ದಾಬಸ್‍ಪೇಟೆ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಿಮಾ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಜನರಿಗೆ ಡಿಜಿಟಲ್ ಬ್ಯಾಂಕಿಂಗ್ ಉಪಯೋಗ ಮತ್ತು ದುರುಪಯೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಲಹೆಗಾರ ಸಂಪತ್ ಕುಮಾರ್ ತಿಳಿಸಿದರು.

ತ್ಯಾಮಗೊಂಡ್ಲು ಹೋಬಳಿಯ ಹಸಿರುವಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿಎಂ ಜೀವನಜ್ಯೋತಿ ವಿಮಾ ಯೋಜನೆ, ಪಿಎಂ ಸುರಕ್ಷಾ ವಿಮಾ ಯೋಜನೆಗಳಿಗೆ ಪ್ರತಿ ವರ್ಷ 460 ರುಪಾಯಿ ಹಾಗೂ 20 ರುಪಾಯಿ ಸಂದಾಯ ಮಾಡಿದರೆ, 2 ಲಕ್ಷ ವಿಮೆ ಅಕಾಲಿಕ ಮೃತರಾದರೆ ದೊರಕಲಿದೆ, ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ ಹಣ ತೊಂದರೆಯಾದಾಗ 1930 ಸಂಖ್ಯೆಗೆ ಕರೆಮಾಡಿ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ ಎಂದರು.

ಫಲಾನುಭವಿ ಕುಸುಮ ಮಾತನಾಡಿ, ನನ್ನ ಪತಿ ಮಾರಣಾಂತಿಕ ಕಾಯಿಲೆಯಿಂದ ನಿಧನರಾದರು. ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಯಿಂದ 2 ಲಕ್ಷ ವಿಮೆ ಪಡೆದು, ನನ್ನ ಮಗನ ಇಂಜಿನಿಯರಿಂಗ್ ಪದವಿ ಮಾಡಲು, ಈ ಹಣದಿಂದ ಶುಲ್ಕ ಪಾವತಿಸಿದ್ದೇನೆ ಎಂದರು.

ಸಂಜೀವಿನಿ ಒಕ್ಕೂಟದ ಸಮನ್ವಯಧಿಕಾರಿ ರಾಧ ಸ್ವಸಹಾಯ ಸಂಘದ ಮಹಿಳೆಯರಿಗೆ ಸ್ಥಳದಲ್ಲೇ ಯೋಜನೆಯ ವಿಮೆ ಪತ್ರಗಳನ್ನು ವಿತರಿಸಿ, ಮಾಹಿತಿ ತಿಳಿಸಿ, ಪಂಚಾಯತಿಯ ಪಶು ಸಖಿ ಮತ್ತು ಕೃಷಿ ಸಖಿ ಸಹಕಾರದಿಂದ ಮನೆ-ಮನೆಗೆ ಯೋಜನೆ ತಲುಪಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸಂಜೀವಿನಿ ಸಂಘದ ಪದಾಧಿಕಾರಿ ಆಶಾ, ಮುಖ್ಯಶಿಕ್ಷಕ ಪುಟ್ಟರಾಜು, ಅಂಗನವಾಡಿ ಶಿಕ್ಷಕಿ ಸಿದ್ದಗಂಗಮ್ಮ, ತ್ಯಾಮಗೊಂಡ್ಲು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ದಿನೇಶ್, ಶಿವಗಂಗೆ ಕೆನರಾ ಬ್ಯಾಂಕ್ ಸಿಬ್ಬಂದಿ ಬಸವರಾಜು ಇತರರಿದ್ದರು. ಪೋಟೋ 1 : ತ್ಯಾಮಗೊಂಡ್ಲು ಹೋಬಳಿಯ ಚಿಕ್ಕನಹಳ್ಳಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಲಹೆಗಾರ ಸಂಪತ್ ಕುಮಾರ್ ಮಾತನಾಡಿದರು.