ಭೂಮಿ ಮಹತ್ವವನ್ನು ಜನರಿಗೆ ಜಾಗೃತಿ ಮೂಲಕ ಅರಿವು ಮೂಡಿಸಬೇಕಿದೆ: ಎಂ.ಡಿ.ರೂಪ

| Published : Apr 23 2025, 12:37 AM IST

ಭೂಮಿ ಮಹತ್ವವನ್ನು ಜನರಿಗೆ ಜಾಗೃತಿ ಮೂಲಕ ಅರಿವು ಮೂಡಿಸಬೇಕಿದೆ: ಎಂ.ಡಿ.ರೂಪ
Share this Article
  • FB
  • TW
  • Linkdin
  • Email

ಸಾರಾಂಶ

1970 ರಿಂದ ಏ.22ರಂದು ವಿಶ್ವ ಭೂಮಿ ದಿನವನ್ನು ಆಚರಿಸಲಾಗುತ್ತಿದೆ. ಇಲ್ಲಿಗೆ 55 ವರ್ಷಗಳು ಕಳೆದರೂ ಭೂಮಿ ಬಗ್ಗೆ ಯಾರು ಕಾಳಜಿ ವಹಿಸುತ್ತಿಲ್ಲ. ಜನರು ಭೂಮಿ ಮೇಲಿನ ಪರಿಸರವನ್ನು ನಾಶ ಮಾಡುತ್ತಲೇ ಬಂದಿದ್ದಾರೆ. ವಿಶ್ವದಲ್ಲಿ ಮನುಷ್ಯ, ಪ್ರಾಣಿ, ಪಕ್ಷಿ ಸಂಕುಲ ಬದುಕಲು ಪರಿಸರವೇ ಕಾರಣವಾಗಿದೆ. ಭೂಮಿ ಮಹತ್ವವನ್ನು ಜನರಿಗೆ ಜಾಗೃತಿ ಮೂಲಕ ಅರಿವು ಮೂಡಿಸಬೇಕಿದೆ.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ತಾಲೂಕು ಕೃಷಿಕ ಸಮಾಜ ಭವನದ ಕಚೇರಿ ಆವರಣದಲ್ಲಿ ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸೇರಿದಂತೆ ಇತರೆ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಎಂ.ಡಿ.ರೂಪ ಚಾಲನೆ ನೀಡಿ ಮಾತನಾಡಿ, 1970 ರಿಂದ ಏ.22ರಂದು ವಿಶ್ವ ಭೂಮಿ ದಿನವನ್ನು ಆಚರಿಸಲಾಗುತ್ತಿದೆ. ಇಲ್ಲಿಗೆ 55 ವರ್ಷಗಳು ಕಳೆದರೂ ಭೂಮಿ ಬಗ್ಗೆ ಯಾರು ಕಾಳಜಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜನರು ಭೂಮಿ ಮೇಲಿನ ಪರಿಸರವನ್ನು ನಾಶ ಮಾಡುತ್ತಲೇ ಬಂದಿದ್ದಾರೆ. ವಿಶ್ವದಲ್ಲಿ ಮನುಷ್ಯ, ಪ್ರಾಣಿ, ಪಕ್ಷಿ ಸಂಕುಲ ಬದುಕಲು ಪರಿಸರವೇ ಕಾರಣವಾಗಿದೆ. ಭೂಮಿ ಮಹತ್ವವನ್ನು ಜನರಿಗೆ ಜಾಗೃತಿ ಮೂಲಕ ಅರಿವು ಮೂಡಿಸಬೇಕಿದೆ ಎಂದರು.

ನ್ಯಾಯಾಧೀಶರಾದ ಹನುಮಂತರಾಯಪ್ಪ ಹಾಗೂ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಕುರಿತು ಮಾತನಾಡಿದರು. ಕೃಷಿ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಕೆ. ಕೆಂಚೇಗೌಡ ಕೃಷಿ ಭೂಮಿ ಮಹತ್ವ ಕುರಿತು ಉಪನ್ಯಾಸ ನೀಡಿದರು.

ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಪವನ್‌ಗೌಡ, ಕೃಷಿಕ ಸಮಾಜದ ಅಧ್ಯಕ್ಷ ಬಾಲಕೃಷ್ಣ ಸೇರಿದಂತೆ ಇತರು ಉಪಸ್ಥಿತರಿದ್ದರು.

ಆಶಯ್ ಜಿ.ಮಧು ಹುಟ್ಟುಹಬ್ಬ ಆಚರಣೆ

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ಸಮುದಾಯ ಭವನದಲ್ಲಿ ಭಾರತೀ ವಿದ್ಯಾಸಂಸ್ಥೆ ಸಿಇಒ ಆಶಯ್ ಜಿ.ಮಧು ಹುಟ್ಟುಹಬ್ಬವನ್ನು ಟ್ರಸ್ಟ್‌ನ ಅಂಗ ಸಂಸ್ಥೆಗಳ ಮುಖ್ಯಸ್ಥರು, ಮುಖಂಡರು, ಮಾಜಿ ಸಂಸದ ದಿ.ಜಿ.ಮಾದೇಗೌಡ, ಮಧು ಮಾದೇಗೌಡರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಆಚರಿಸಿದರು.

ಇದಕ್ಕೂ ಮೊದಲು ಮನೆ ದೇವರು ಶ್ರೀಕಾರ್ಕಹಳ್ಳಿ ಬಸವೇಶ್ವರಸ್ವಾಮಿ, ಚಾಂಷುಗರ್ಸ್ ಕಾರ್ಖಾನೆ ಆವರಣದ ಶ್ರೀ ಚಾಮುಂಡೇಶ್ವರಿ ದೇವಾಲಯದ ಮತ್ತು ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಆಶಯ್ ಜಿ.ಮಧು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಬಳಿಕ ಅಭಿಮಾನಿಗಳು, ಮುಖಂಡರು ಬೃಹತ್ ಹಾರ ಹಾಕಿ ಅಭಿನಂದಿಸಿದರು.

ಬಳಿಕ ಆಶಯ್ ಜಿ.ಮಧು ಮಾತನಾಡಿ, ನನ್ನ ತಾತ ದಿ.ಜಿ.ಮಾದೇಗೌಡ ಮತ್ತು ನನ್ನ ತಂದೆ ಮಧು ಅವರ ಅಭಿಮಾನಿಗಳು ನನ್ನ ಹುಟ್ಟುಹಬ್ಬವನ್ನು ಆಚರಿಸಿದ್ದು ಅಭಿಮಾನಿಗಳ ಪ್ರೀತಿಗೆ ಋಣಿಯಾಗಿರುತ್ತೇನೆ. ನಿಮ್ಮಗಳ ಸೇವೆಗೆ ನಾನು ಸದಾ ಸಿದ್ದನಿದ್ದೇನೆ ಎಂದರು.

ಈ ವೇಳೆ ತಾಪಂ ಮಾಜಿ ಸದಸ್ಯರಾದ ಬಿ.ಗಿರೀಶ್, ಭರತೇಶ್, ಮುಖಂಡರಾದ ಆರ್.ಸಿದ್ದಪ್ಪ, ಮದ್ದೂರು ಅವಿನಾಶ್, ವಿನಯ್ ಹೊನ್ನೇಗೌಡ, ಕಾರ್ಕಹಳ್ಳಿ ಸ್ವರೂಪ್, ಕಳ್ಳಿಮೆಳ್ಳೆದೊಡ್ಡಿ ಪ್ರಸನ್ನಕುಮಾರ್, ಮಿಥುನ್, ಪ್ರಮೋದ್, ನಿಖಿಲ್, ಗೋಪನಹಳ್ಳಿ ಜಗದೀಶ್, ಕೆ.ಟಿ. ಪುಟ್ಟಸ್ವಾಮಿ, ಸುನೀಲ್ ಕುಮಾರ್ ಸೇರಿದಂತೆ ಭಾರತೀ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಗಳ ಪ್ರಾಂಶುಪಾಲರು, ಸಿಬ್ಬಂದಿ ಪಾಲ್ಗೊಂಡಿದ್ದರು.