ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಹಾಗೂ ಹೃದ್ರೋಗ ಸಮಸ್ಯೆಗಳು ಸಾಮಾನ್ಯ ಮಂದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರು ಹೆಚ್ಚು ಆರೋಗ್ಯದ ಕುರಿತು ಕಾಳಜಿ ಬೆಳೆಸುವ ಅಗತ್ಯವಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಹಾಗೂ ಹೃದ್ರೋಗ ಸಮಸ್ಯೆಗಳು ಸಾಮಾನ್ಯ ಮಂದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರು ಹೆಚ್ಚು ಆರೋಗ್ಯದ ಕುರಿತು ಕಾಳಜಿ ಬೆಳೆಸುವ ಅಗತ್ಯವಿದೆ. ಸಂಘ ಸಂಸ್ಥೆಗಳ ಮೂಲಕ ನಡೆಯುವ ಆರೋಗ್ಯ ಶಿಬಿರಗಳು ಮೂಲಕ ಸಾಕಷ್ಟು ಮಂದಿಗೆ ನೆರವಾಗುತ್ತಿರುವುದು ಸಂತೋಷದ ಬೆಳವಣಿಗೆ ಎಂದು ಉರ್ವ ಇಮ್ಮಾಕ್ಯುಲೇಟ್ ಕನ್ಸೆಪ್‌ಷನ್ ಚರ್ಚ್‌ನ ಪ್ರಧಾನ ಧರ್ಮಗುರು ಫಾ.ಬೆಂಜಮಿನ್ ಪಿಂಟೋ ಹೇಳಿದರು.ಅವರು ಭಾನುವಾರ ಉರ್ವ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಉರ್ವ ಇಮ್ಮಾಕ್ಯುಲೇಟ್ ಕನ್ಸೆಪ್‌ಷನ್ ಚರ್ಚ್ ಆಶ್ರಯದಲ್ಲಿ ಆರೋಗ್ಯ ಆಯೋಗ ಮತ್ತು ಯುವ ಆಯೋಗ ಆಯೋಜನೆಯಲ್ಲಿ ಫಾದರ್‌ಮುಲ್ಲರ್ ಆಸ್ಪತ್ರೆ ಕಂಕನಾಡಿ, ಎಜೆ ಆಸ್ಪತ್ರೆ ನುರಿತ ವೈದ್ಯರ ಮಾರ್ಗದರ್ಶನ ಮತ್ತು ಇಂಡಿಯನ್ ಕ್ಯಾನ್ಸರ್‌ಸೊಸೈಟಿ ವತಿಯಿಂದ ಜ್ಯುವೆಲ್ ಗ್ರೂಪ್ ನೇತೃತ್ವದಲ್ಲಿ 24ನೇ ಉಚಿತ ವೈದ್ಯಕೀಯ ತಪಾಸಣೆ, ಕ್ಯಾನ್ಸರ್ ಹಾಗೂ ದಂತ ತಪಾಸಣೆ ಮತ್ತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ ಮ್ಯಾಕ್ಸಿಂ ಕ್ಯಾಸ್ಟೋಲಿನೋ, ಆಯೋಗಗಳ ಕೋ ಆರ್ಡಿನೇಟರ್ ಗ್ಯಾಬ್ರಿಯಲ್ ಸಿಡ್ನಿ ಸಾರ್ತೊ, ಜ್ಯುವೆಲ್ ಗ್ರೂಪ್ ನ ಉಲ್ಲಾಸ್ ಫರ್ನಾಂಡೀಸ್, ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಅಲೋಶಿಯಸ್ ಡಿಸೋಜ ಮತ್ತಿತರರು ಇದ್ದರು.