ಸಾರಾಂಶ
ಕಮತಗಿ ಪಟ್ಟಣದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ 13ನೇ ಹೊಳೆ ಹುಚ್ಚೇಶ್ವರ ಶ್ರೀಗಳ 25ನೇ ವರ್ಷದ ಪಟ್ಟಾಧಿಕಾರದ ರಜತ ಮಹೋತ್ಸವ, ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ವಜ್ರ ಮಹೋತ್ಸವ, ಮಹಾರಥೋತ್ಸವ, ಕಮತಪುರ ಉತ್ಸವಕ್ಕೆ ಖ್ಯಾತ ಕಲಾವಿದರ ರಸಮಂಜರಿ, ಸಂಗೀತದೊಂದಿಗೆ ತೆರೆಬಿದ್ದಿತು.
ಕನ್ನಡಪ್ರಭ ವಾರ್ತೆ ಕಮತಗಿ
ಪಟ್ಟಣದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ 13ನೇ ಹೊಳೆ ಹುಚ್ಚೇಶ್ವರ ಶ್ರೀಗಳ 25ನೇ ವರ್ಷದ ಪಟ್ಟಾಧಿಕಾರದ ರಜತ ಮಹೋತ್ಸವ, ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ವಜ್ರ ಮಹೋತ್ಸವ, ಮಹಾರಥೋತ್ಸವ, ಕಮತಪುರ ಉತ್ಸವಕ್ಕೆ ಖ್ಯಾತ ಕಲಾವಿದರ ರಸಮಂಜರಿ, ಸಂಗೀತದೊಂದಿಗೆ ತೆರೆಬಿದ್ದಿತು.ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ವಜ್ರ ಮಹೋತ್ಸವ, ಲಿಂ.12ನೇ ಹುಚ್ಚೇಶ್ವರ ಶ್ರೀಗಳ ನೂತನ ಮಂಟಪ ಮತ್ತು ಅಮೃತ ಶಿಲಾಮೂರ್ತಿ ಅನಾವರಣ, 13ನೇ ಹುಚ್ಚೇಶ್ವರ ಶ್ರೀಗಳ ಪಲ್ಲಕ್ಕಿ ಮಹೋತ್ಸವ, ಪಟ್ಟಾಧಿಕಾರದ ರಜತ ಮಹೋತ್ಸವ, ಸಾಂಸ್ಕೃತಿಕ ಮೆರವಣಿಗೆ, ಮಹಾರಥೋತ್ಸವ, ಬಸವ ಪುರಾಣ ಮಂಗಲ, ಹುಚ್ಚೇಶ ಶ್ರೀ ಪ್ರಶಸ್ತಿ ಪ್ರದಾನ ಹೀಗೆ ಅನೇಕ ಕಾರ್ಯಕ್ರಮಯಶಿಸ್ವಿಯಾಗಿ ಜರುಗಿದವು. ಕಮತಪುರ ಉತ್ಸವದ ಕೊನೆಯ ದಿನವಾದ ಬುಧವಾರ ಚುಟು ಚುಟು ಖ್ಯಾತಿಯ ರವೀಂದ್ರ ಸೊರಗಾಂವಿ ತಂಡ ಮತ್ತು ಖ್ಯಾತ ಹಿನ್ನೆಲೆ ಗಾಯಕ ರಾಜೇಶ ಕೃಷ್ಣನ್, ಡಾ.ಶಮಿತಾ ಮಲ್ನಾಡ್ ತಂಡದ ತಾರಾ ಮಂಜರಿ ಕಾರ್ಯಕ್ರಮ ಸಂಗೀತ ರಸದೌತನ ನೀಡಿತು.
ಕಮತಗಿ-ಕೋಟೆಕಲ್ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಶ್ರೀ ಹುಚ್ಚೇಶ್ವರ ಸ್ವಾಮೀಜಿ ಸಾನಿಧ್ಯ ಮತ್ತು ನೇತೃತ್ವ ವಹಿಸಿದ್ದರು. ಕುಂದರಗಿ ಅಮರಸಿದ್ದೇಶ್ವರ ಸ್ವಾಮೀಜಿ, ಹುನಗುಂದ ಅಮರೇಶ್ವರ ದೇವರು, ಗುಳೇದಗುಡ್ಡ ಡಾ.ಶಿವರಶರಣ ದೇವರು, ಹಿರಿಯರಾದ ಯಲ್ಲಪ್ಪ ಮಜ್ಜಗಿ, ಹನುಮಂತ ಇಂಜಿನೇರಿ, ಪಪಂ ಅಧ್ಯಕ್ಷ ರಮೇಶ ಜಮಜಂಡಿ, ಹುಚ್ಚಪ್ಪ ಸಿಂಹಾಸನ, ಎಸ್.ಎಸ್. ಮಂಕಣಿ, ಗುರಲಿಂಗಪ್ಪ ಪಾಟೀಲ, ಮಹಾಂತೇಶ ಅಂಗಡಿ, ಶ್ರೀಕಾಂತ ಹಾಸಲಕರ, ಸಂಗಣ್ಣ ಮನ್ನಿಕೇರಿ, ಯಲ್ಲಪ್ಪ ವಡ್ಡರ, ಗಂಗಪ್ಪ ಭೂತಲ, ಬಸವರಾಜ ಕುಂಬಳಾವತಿ, ದೇವಿಪ್ರಸಾದ ನಿಂಬಲಗುಂದಿ, ಚಂದು ಕುರಿ, ಬಿ.ವಿ. ಬೀರಕಬ್ಬಿ, ಶಂಕರ ಬಡದಾನಿ, ಎಂ.ಎಂ. ಲಾಯದಗುಂದಿ, ಮಲ್ಲಿಕಾರ್ಜುನಪ್ಪ ಲಾಯದಗುಂದಿ, ಶ್ರೇಯಾಂಶ ಕೋಲ್ಹಾರ, ಕೆ.ಎಂ. ಮಾಡಗುಂಪ್ಪನವರ, ಜಿ.ಎಲ್. ವಾಲಿಕಾರ, ಹುಚ್ಚೇಶ ಲಾಯದಗುಂದಿ, ಮುತ್ತುರಾಜ ಬೆಲ್ಲದ, ಚನ್ನಪ್ಪ ಹಳ್ಳೂರ, ಜಿ.ಎಂ. ಶೆಟ್ಟರ ಇತರರು ಇದ್ದರು.