ಕಾರ್ಕಳದ ಜನರು ಶಾಸಕರನ್ನು ಬಹಿಷ್ಕರಿಸಬೇಕು: ಮುನಿಯಾಲು

| Published : Sep 19 2024, 01:46 AM IST

ಕಾರ್ಕಳದ ಜನರು ಶಾಸಕರನ್ನು ಬಹಿಷ್ಕರಿಸಬೇಕು: ಮುನಿಯಾಲು
Share this Article
  • FB
  • TW
  • Linkdin
  • Email

ಸಾರಾಂಶ

ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವ ಶಾಸಕ ಸುನಿಲ್‌ ಕುಮಾರ್‌ ಅವರನ್ನು ಸಮಾಜ ಬಹಿಷ್ಕರಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯಕುಮಾರ್‌ ಶೆಟ್ಟಿ ಹೇಳಿದರು. ಬುಧವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ದಿನಕ್ಕೊಂದು ಸುಳ್ಳು ಹೇಳುತ್ತಾ, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವ ಶಾಸಕ ಸುನೀಲ್ ಕುಮಾರ್ ಅವರನ್ನು ಸಮಾಜ ಬಹಿಷ್ಕರಿಸಬೇಕು ಎಂದು ಕಾರ್ಕಳದ ಕಾಂಗ್ರೆಸ್ ನಾಯಕ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಕರೆ ನೀಡಿದ್ದಾರೆ.

ಬುಧವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರುಶುರಾಮ ವಿಗ್ರಹದ ನಿರ್ಮಾಣದಲ್ಲಿ, ನ್ಯಾಯಪೀಠವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಮೊದಲು ಕಂಚಿನ ಪ್ರತಿಮೆ ಎಂದು ಹೇಳಲಾಗಿತ್ತು, ಈಗ ಅದು ಹಿತ್ತಾಳೆಯ ಪ್ರತಿಮೆ ಎಂದು ನ್ಯಾಯಾಲಯಕ್ಕೆ ಸಮಜಾಯಿಸಿ ನೀಡುತ್ತಿದ್ದಾರೆ. ಇದನ್ನು ನ್ಯಾಯಾಲಯ ಕೂಡ ಆಕ್ಷೇಪಿಸಿದೆ. ಕಾರ್ಕಳದ ಶಾಸಕರ ಬಣ್ಣ ಬಯಲಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ರಮೇಶ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ವಿನಯ್ ಕಬ್ಯಾಡಿ ಉಪಸ್ಥಿತರಿದ್ದರು.

ಕಸ್ತೂರಿ ರಂಗನ್ ವರದಿ ವಿರುದ್ಧ ಪಾದಯಾತ್ರೆ: ಕಸ್ತೂರಿ ರಂಗನ್ ವರದಿಯ ಜಾರಿ ಬಗ್ಗೆ ರಾಜ್ಯ ಸರ್ಕಾರ ಈ ಹಿಂದೆ ಕಳುಹಿಸಿದ 5 ವರದಿಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಈಗ ಪುನಃ ವರದಿಯನ್ನು ಕೇಳಿದೆ. ಈ ವರದಿ ಜಾರಿಯಾದಲ್ಲಿ, ಕಾರ್ಕಳ ತಾಲೂಕಿನ ಸಾವಿರಾರು ಕೃಷಿಕರು, ಶ್ರಮಿಕರು, ಬಡ ಜನರ ಜೀವನ ದುಸ್ತರವಾಗುತ್ತದೆ. ಆದ್ದರಿಂದ ಜೀವತೆತ್ತಾದರೂ ಈ ವರದಿ ಜಾರಿಯಾಗಲು ಬಿಡುವುದಿಲ್ಲ. ಇದರ ವಿರುದ್ಧ ಶೀಘ್ರವೇ ಈದುವಿನಿಂದ ಸೋಮೇಶ್ವರದವರೆಗೆ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಹೇಳಿದರು.

ಈ ವರದಿ ವ್ಯಾಪ್ತಿಯ ಜನರನ್ನು ಒಕ್ಕಲೆಬ್ಬಿಸಬಾರದು, ಪ್ರಕೃತಿಯನ್ನು ಉಳಿಸಬೇಕು, ಆದರೆ ಈ ಪ್ರದೇಶದಲ್ಲಿ ಬೃಹತ್ ನಿರ್ಮಾಣಗಳಿಗೆ ಅವಕಾಶ ನೀಡಬಾರದು. ಆದ್ದರಿಂದ ಕಸ್ತೂರಿ ರಂಗನ್ ವರದಿಯನ್ನು ಪರಿಷ್ಕರಿಸಬೇಕು ಎಂದವರು ಹೇಳಿದರು.