ಸಾರಾಂಶ
ಲಕ್ಷ್ಮೇಶ್ವರ: ಕಾಂಗ್ರೆಸ್ ಆಡಳಿತವನ್ನು ಜನರು ಮೆಚ್ಚಿದ್ದಾರೆ. ಕಾಂಗ್ರೆಸ್ ಸರ್ಕಾರದ ಜನಪರ ಕೆಲಸಕ್ಕೆ ರಾಜ್ಯದ ಜನತೆ ಬೆಂಬಲ ನೀಡಿದ್ದಾರೆ ಎಂದು ಪದ್ಮರಾಜ ಪಾಟೀಲ ಹೇಳಿದರು.
ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಜನತೆಗೆ ನೀಡಿರುವ ಗ್ಯಾರಂಟಿಗಳಿಗೆ ಮನಸೋತು ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಕಾಣಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಅವ್ಯವಹಾರಗಳಿಗೆ ಜನರು ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದಾರೆ. ಗ್ಯಾರಂಟಿಗಳಿಂದ ಜನರು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಇದನ್ನು ಬಿಜೆಪಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಆದ್ದರಿಂದ ಸುಳ್ಳು ಹೇಳುವ ಕಾರ್ಯ ಮಾಡುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ನಡಯವುದಿಲ್ಲ ಎಂದು ಹೇಳಿದರು.
ಈ ವೇಳೆ ಅಂಬರೀಷ ತೆಂಬದಮನಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಜನರ ನೋವುಗಳಿಗೆ ಸ್ಪಂದಿಸುವ ಕಾರ್ಯ ಮಾಡಿದೆ. ಕಾಂಗ್ರೆಸ್ ಜನಪರ ಆಡಳಿತಕ್ಕೆ ಜನರು ಬೆಂಬಲ ಸೂಚಿಸಿದ್ದಾರೆ. ಪಂಚ ಗ್ಯಾರಂಟಿಗಳು ರಾಜ್ಯದ ಜನರ ಕಷ್ಟ ದೂರ ಮಾಡಿದೆ, ಇದು ಕಾಂಗ್ರೆಸ್ ಪಕ್ಷಕ್ಕೆ ಜನರು ನೀಡಿದ ಅಭಯವಾಗಿದೆ ಎಂದು ಹೇಳಿದರು.ವಿಜಯೋತ್ಸವದಲ್ಲಿ ತಿಪ್ಪಣ್ಣ ಸಂಶಿ, ಚಾಯಪ್ಪ ಬಸಾಪೂರ, ಸೋಮಣ್ಣ ಬೆಟಗೇರಿ, ನಾಗರಾಜ ದೊಡ್ಡಮನಿ, ಅಪ್ಪಣ್ಣ ರಾಮಗೇರಿ, ಪ್ರಕಾಶ ಕೊಂಚಿಗೇರಿಮಠ, ಎಂ.ಎಂ. ಗಾಡಗೋಳಿ, ಕಿರಣ ನವಲೆ, ನೀಲಪ್ಪ ಪಡಗೇರಿ, ಮುದಕಣ್ಣ ಗದ್ದಿ, ಮಂಜುನಾಥ ಶೆರಸೂರಿ, ಯಲ್ಲಪ್ಪ ಸೂರಣಗಿ, ಅಫ್ಜಲ್ ರಿತ್ತಿ, ಸಿರಾಜ್ ಡಾಲಾಯತ್ ಸೇರಿದಂತೆ ಅನೇಕರು ಇದ್ದರು.