ಸಾರಾಂಶ
ಬೇಲೂರು ಪುರಸಭೆ ವ್ಯಾಪ್ತಿಯ 9ನೇ ವಾರ್ಡ್ ವೈಕುಂಠ ಬೀದಿ ಸರ್ಕಾರಿ ಗೌರಮ್ಮ ದೇಗುಲ ಪಕ್ಕ ಇರುವ ಖಾಸಗಿ ನಿವೇಶನದಲ್ಲಿ ಗಿಡಗಂಟೆಗಳು ಬೆಳೆದು ತೀವ್ರ ತೊಂದರೆಯಾಗುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿ ಪುರಸಭೆ ಸದಸ್ಯ ಜಗದೀಶ್ ಪರಿಶೀಲನೆ ನಡೆಸಿದ್ದಾರೆ
ಕನ್ನಡಪ್ರಭ ವಾರ್ತೆ ಬೇಲೂರು
ಪುರಸಭೆ ವ್ಯಾಪ್ತಿಯ 9ನೇ ವಾರ್ಡ್ ವೈಕುಂಠ ಬೀದಿ ಸರ್ಕಾರಿ ಗೌರಮ್ಮ ದೇಗುಲ ಪಕ್ಕ ಇರುವ ಖಾಸಗಿ ನಿವೇಶನದಲ್ಲಿ ಗಿಡಗಂಟೆಗಳು ಬೆಳೆದು ತೀವ್ರ ತೊಂದರೆಯಾಗುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಪುರಸಭೆ ವಿರುದ್ಧ, ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ವಿಷಯ ತಿಳಿದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಪುರಸಭೆ ಸದಸ್ಯ ಜಗದೀಶ್ ಮಾತನಾಡಿ, ಇದು ಯಾರ ನಿವೇಶನ ಎಂಬುವುದು ನಮಗೆ ತಿಳಿದಿಲ್ಲ. ಸ್ಥಳೀಯರು ಇದು ಬ್ರಾಹ್ಮಣ ಮಹಾಸಭಾಕ್ಕೆ ದಾನವಾಗಿ ಮಲ್ಲಿಕಾರ್ಜುನ ಗ್ರೂಪ್ಸ್ ನೀಡಿದ್ದಾರೆಂದು ತಿಳಿಸಿದ್ದಾರೆ. ಆದರೆ ಇದು ಯಾರ ಹೆಸರಿನಲ್ಲಿ ಖಾತೆ ಇದೆ ಎಂದು ತಿಳಿಯುತ್ತಿಲ್ಲ. ಕೂಡಲೆ ಸ್ವಚ್ಛತೆ ಮಾಡಬೇಕು. ನನ್ನ ವಾರ್ಡ್ನಲ್ಲಿ ಡೆಂಘೀ ಮಲೇರಿಯಾ ಹೆಚ್ಚಾಗಿ ವ್ಯಾಪಿಸುತ್ತಿದೆ. ಇದರಿಂದ ಏನಾದರೂ ತೊಂದರೆಯಾದರೆ ನಾವು ನಿವೇಶನದ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ. ನಮ್ಮ ತಾಲೂಕಿನಲ್ಲಿ ಡೆಂಘೀ, ಮಲೇರಿಯಾ ಪ್ರಕರಣಗಳು ವ್ಯಾಪಿಸುತ್ತಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಇದರ ಬಗ್ಗೆ ಅಧಿಕಾರಿಗಳಿಗೆ ಹೆಚ್ಚಿನ ನಿಗಾ ವಹಿಸಲು ಸೂಚಿಸಬೇಕೆಂದು ಹೇಳಿದರು. ಈ ವೇಳೆ ಸ್ಥಳೀಯ ನಿವಾಸಿ ನಾಗರಾಜ್ ಇತರರು ಹಾಜರಿದ್ದರು.* ಹೇಳಿಕೆ-1ಪಟ್ಟಣದ ೨೩ ವಾರ್ಡ್‌ಗಳಲ್ಲಿ ಸ್ವಚ್ಛತೆಗಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜೊತೆಗೆ ನಮ್ಮ ಪೌರ ಕಾರ್ಮಿಕರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲ ನಿವೇಶನದ ಮಾಲೀಕರು ಈ ರೀತಿ ಗಿಡ ಗಂಟೆಗಳನ್ನು ತೆರವುಗೊಳಿಸದಿದ್ದರೆ ನಾವೇ ಸ್ವಚ್ಛತೆ ಮಾಡಿ ಅವರಿಗೆ ದಂಡ ಹಾಕಲಾಗುತ್ತದೆ.
-ಸುಜಯ್, ಪುರಸಭೆ ಮುಖ್ಯಾಧಿಕಾರಿ