ತರೀಕೆರೆಸಮಸ್ಯೆಗಳು ನಿವಾರಣೆಯಾಗಲು ಪ್ರಜಾಸೇವಾ ಆಂದೋಲನದ ಉಪಯೋಗ ಸಾರ್ವಜನಿಕರು ಪಡೆಯಬೇಕು. ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.
ಹುಣಸಘಟ್ಟದಲ್ಲಿ ಅಮೃತಾಪುರ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆ
ಕನ್ನಡಪ್ರಭ ವಾರ್ತೆ ತರೀಕೆರೆಸಮಸ್ಯೆಗಳು ನಿವಾರಣೆಯಾಗಲು ಪ್ರಜಾಸೇವಾ ಆಂದೋಲನದ ಉಪಯೋಗ ಸಾರ್ವಜನಿಕರು ಪಡೆಯಬೇಕು. ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.
ಶನಿವಾರ ಹುಣಸಘಟ್ಟದಲ್ಲಿ ಅಮೃತಾಪುರ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಉದ್ಘಾಟಿಸಿ ಮಾತನಾಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಡೀ ರಾಜ್ಯದಲ್ಲಿ ಪ್ರತಿ ಶನಿವಾರ ಪ್ರಜಾಸೇವಾ ಆಂದೋಲನ ನಡೆಸಬೇಕೆಂದು ಆದೇಶಿ ಸಿದ್ದಾರೆ. ಪ್ರಜಾಸೇವಾ ಆಂದೋಲನವನ್ನು ಪಂಚಾಯಿತಿ ಮಟ್ಟದಲ್ಲೂ ನಡೆಸಲಾಗುವುದು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇರುತ್ತಾರೆ. ಅವರಿಗೆ ಅರ್ಜಿ ಸಲ್ಲಿಸಿದರೆ ಪ್ರತಿ ಬುಧವಾರ ಅರ್ಜಿಗಳ ಬಗ್ಗೆ ಚರ್ಚೆ ನಡೆಯುತ್ತದೆ ಎಂದು ಹೇಳಿದರು.ತಾಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಕೆರೆಗಳಿಗೆ ನೀರು ತುಂಬಿಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದ ಅವರು ಈರುಳ್ಳಿ ಅಲುಗೆಡ್ಡೆ ಇತ್ಯಾದಿ ಎಲ್ಲಾ ಬೆಳೆಗಳನ್ನು ಬೆಳೆಯಬಹುದು, ಮುಂದಿನ ವರ್ಷ 4 ತಿಂಗಳ ಕಾಲ ನೀರು ಖಂಡಿತ ಬರುತ್ತದೆ ಎಲ್ಲರೂ ಸಹಕರಿಸಬೇಕು ಎಂದರು.
ತಹಸೀಲ್ದಾರ್ ರಶ್ಮಿ ಎಚ್.ಜಿ. ಮಾತನಾಡಿ ಅಧಿಕಾರಿಗಳು ಒಂದು ಕಡೆ ಸೇರಬೇಕು. ಜನರ ಸಮಸ್ಯೆ ಆಲಿಸಬೇಕು. ಪ್ರತಿ ಶನಿವಾರ ಪ್ರಜಾಸೇವಾ ಆಂದೋಲನ ಆಯೋಜಿಸಲಾಗುತ್ತಿದೆ. ಗ್ರಾಮಸ್ಥರು ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದರು.ಉಪ ವಿಭಾಗಾಧಿಕಾರಿ ಎನ್.ವಿ.ನಟೇಶ್, ಅಜ್ಜಂಪುರ ತಹಸೀಲ್ದಾರ್ ವಿನಾಯಕ ಸಾಗರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ದೇವೇಂದ್ರಪ್ಪ, ಅಜ್ಜಂಪುರ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ಸಿಡಿಪಿಒ ಚರಣ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಎಚ್.ಎ. ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.
-3ಕೆಟಿಆರ್.ಕೆ.6ಃ
ತರೀಕೆರೆಯ ಹುಣಸಘಟ್ಟದಲ್ಲಿ ನಡೆದ ಅಮೃತಾಪುರ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಉಪ ವಿಭಾಗಾಧಿಕಾರಿ ಎನ್.ವಿ.ನಟೇಶ್, ತಹಸೀಲ್ದಾರ್ ರಶ್ಮಿ ಎಚ್.ಜಿ. ಅಜ್ಜಂಪುರ ತಹಸೀಲ್ದಾರ್ ವಿನಾಯಕಸಾಗರ್, ತಾಪಂ ಇ.ಒ.ಡಾ.ಆರ್.ದೇವೇಂದ್ರಪ್ಪ ಮತ್ತಿತರರು ಇದ್ದರು.