ಸಾರಾಂಶ
ಮಸ್ಕಿ: ಪಟ್ಟಣದಲ್ಲಿ 30 ಸಾವಿರ ಜನರಿಗೆ ಕುಡಿಯುವ ನೀರು ಪೂರೈಸುವ 29 ಅಡಿ ನೀರು ಸಂಗ್ರಹದ ಕೆರೆ ಸಂಪೂರ್ಣ ಖಾಲಿಯಾಗಿದ್ದು, ಕುಡಿಯುವ ನೀರಿನ ಅಭಾವದ ಭೀತಿ ಉಂಟಾಗಿದೆ.
ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಅಭಾವ ಉಂಟಾದ ಹಿನ್ನೆಲೆಯಲ್ಲಿ 23 ವಾರ್ಡ್‌ಗಳ ಪೈಕಿ ಕೆಲವೊಂದು ವಾರ್ಡ್‌ಗಳಲ್ಲಿ ಈಗಾಗಲೇ ಬೋರ್ವೆಲ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ ಸುಮಾರು 10ಕ್ಕೂ ಅಧಿಕ ವಾರ್ಡ್‌ಗಳಲ್ಲಿ ನೀರಿನ ಅಭಾವ ಎದುರಾಗಿದೆ.ಪಟ್ಟಣದಲ್ಲಿ ವಾರ್ಡ್ ನಂಬರ್ ಗಾಂಧಿನಗರದ ಮೂರು ವಾರ್ಡ್ ಸೇರಿದಂತೆ ವಿವಿಧೆಡೆ ನೀರು ಸರಬರಾಜು ಮಾಡಲು 10 ಟ್ಯಾಂಕರ್‌ನಿಂದ ವಾರ್ಡ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ನೀರಿನ ಅಭಾವ ಉಂಟಾಗಿರುವುದರಿಂದ ಟ್ಯಾಂಕರ್ ನೀರಿಗಾಗಿ ಮಹಿಳೆಯರು ನಡುರಸ್ತೆಯಲ್ಲಿ ಬಿಂದಿಗೆ ಹಿಡಿದು ನೀರು ತುಂಬಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಆದರೆ ಒಂದೊಂದು ವಾರ್ಡ್‌ಗೆ 10 ಟ್ಯಾಂಕರ್ ನೀರು ಕೊಟ್ಟರೂ ಸಾಕಾಗದೇ ಕಿತ್ತಾಟ ನಡೆಸುವಂತಾಗಿದೆ. ಇದರಿಂದ ಮಸ್ಕಿ ಪುರಸಭೆಗೆ ತಲೆನೋವು ಆಗಿ ಪರಿಣಮಿಸಿದೆ.
ನೀರಿನ ಅಭಾವ ಉಂಟಾಗಿರುವುದರಿಂದ ವಿವಿಧೆಡೆ ಸುಮಾರು 14 ಬೋರ್‌ವೆಲ್‌ಗಳನ್ನು ಕೊರೆಸಲು ಪುರಸಭೆ ಕ್ರಮವಹಿಸಿದೆ.ಕುಡಿಯುವ ನೀರಿನ ಕೆರೆ ಖಾಲಿಯಾಗಿರುವುದರಿಂದ ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲು ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ. ಮಾ.5ರಿಂದ ಎಡನಾಲೆಗೆ ನೀರು ಹರಿಸುವುದರಿಂದ ಕೆರೆ ತುಂಬಿಸಲು ಸೂಚನೆ ನೀಡಲಾಗಿದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.