ಸಾರಾಂಶ
ಅಪರಿಚಿತ ವ್ಯಕ್ತಿಗಳ ಬರುವ ಕರೆಗಳಿಂದ ಜನ ಜಾಗೃತರಾಗಿರಬೇಕು. ಯಾರಾದರೂ ವಂಚನೆ ಮಾಡಲು ಯತ್ನಿಸಿದರೆ 1930 ನಂಬರಿಗೆ ದೂರು ನೀಡಬೇಕು.
ಕನ್ನಡಪ್ರಭ ವಾರ್ತೆ ಕುಂದಗೋಳ
ಅಪರಿಚಿತ ವ್ಯಕ್ತಿಗಳ ಬರುವ ಕರೆಗಳಿಂದ ಜನ ಜಾಗೃತರಾಗಿರಬೇಕು. ಯಾರಾದರೂ ವಂಚನೆ ಮಾಡಲು ಯತ್ನಿಸಿದರೆ 1930 ನಂಬರಿಗೆ ದೂರು ನೀಡಬೇಕು ಎಂದು ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿಯ ನಿರ್ದೇಶಕ ಮುರುಳೀಧರ ಕೆ.ಎಸ್. ಹೇಳಿದರು.ಸೋಮವಾರ ಗಾಂಧಿ ಹಿಂದಿ ವಿದ್ಯಾಪೀಠದ ಎಫ್.ಕೆ. ಬಾಳಿಹಳ್ಳಿಮಠ ಎಚ್.ಪಿ.ಎಸ್. ಮತ್ತು ಅಜೈಲ್ ಐ ಟೆಕ್ ಸಹಯೋಗದಲ್ಲಿ ಏರ್ಪಡಿಸಿದ್ದ ಬಾಲ ಹಿಂದಿ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭದಲ್ಲಿ ಸೈಬರ್ ಅಪರಾಧ ಜಾಗೃತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಥಾಪಕ ಕಾರ್ಯದರ್ಶಿ ಎಫ್.ಕೆ. ಬಾಳಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ರಾಜು ಮಾವರಕರ, ಇಒ ಜಗದೀಶ ಕಮ್ಮಾರ, ಸಹಕಾರ ರತ್ನ ವಿಜೇತ ಅರವಿಂದ ಕಟಗಿ, ಎಂ.ಆರ್. ದೊಡಮನಿ, ಜಾಫರ್ ಕಣವಿ, ಅಲ್ಫಾನ್ಸ್ ಖತೀಬ್, ವಿ.ಎಂ. ಹಿರೇಮಠ, ಶಿವಾನಂದ ಯಲಿಗಾರ, ಕಸ್ತೂರಿ ಕುಂಬಾರ, ಗುರುಸ್ವಾಮಿ ಬಾಳಿಹಳ್ಳಿಮಠ, ಸಿ.ವಿ. ಪಾಟೀಲ ಮುಂತಾದವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಿರಿಯ ಹಿಂದಿ ಪ್ರಚಾರಕರಾದ ಎಸ್.ಎಸ್. ನಾಗಲೋಟಿ, ಉಮರ್ ಫಾರೂಕ್ ಹುಂಡೆಕಾರ, ಪ್ರದೀಪ ಧೋಂಗಡಿ ಅವರನ್ನು ಅತ್ತ್ಯುತ್ತಮ ಹಿಂದಿ ಪ್ರಚಾರಕರೆಂದು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿಂದಿ ಭಾಷೆಗಾಗಿ ಸೇವೆ ಸಲ್ಲಿಸಿದ ಅನುಭಾವಿ ಜಿ.ಬಿ. ಎಂ.ಸಿ. ಪಾಟೀಲ, ಬಸವರಾಜ ತೆಳಗಿನಮನಿ, ಮಾಧುರಿ ಕುಂಬಾರ, ಲಕ್ಷ್ಮೀ ಕುಂಬಾರ, ಮಂಜುಳಾ ಭೋವಿ, ರೇಖಾ ಸುರೇಬಾನ್, ಮಂಜುಳಾ ಪಾಟೀಲ, ವಿನಾಯಕ ಕಾಕಡೆ ಅವರನ್ನು ಸನ್ಮಾನಿಸಲಾಯಿತು. ಶಾರದಾ ನಂದೀಮಠ ಮತ್ತು ಎ.ಬಿ. ಕುಂಬಾರ ಅವರನ್ನು ಅತ್ತ್ಯುತ್ತಮ ಶಿಕ್ಷಕರೆಂದು ಸನ್ಮಾನಿಸಲಾಯಿತು.ಮಾನಸಿ ನರೇಗಲ್ಲ ಸ್ವಾಗತಿಸಿದರು. ಅಂಬಿಕಾ ಕುಲಕರ್ಣಿ ನಿರ್ವಹಿಸಿದರು. ಮಹಾಂತೇಶ ಪಾಟೀಲ ವಂದಿಸಿದರು. ಬಳಿಕ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.