ರಾಜಾ ಎಂದೇ ಗುರುತಿಸುತ್ತಿದ್ದ ಜನತೆ: ಗೌಡಪ್ಪಗೌಡ ಆಲ್ದಾಳ

| Published : Feb 27 2024, 01:32 AM IST

ರಾಜಾ ಎಂದೇ ಗುರುತಿಸುತ್ತಿದ್ದ ಜನತೆ: ಗೌಡಪ್ಪಗೌಡ ಆಲ್ದಾಳ
Share this Article
  • FB
  • TW
  • Linkdin
  • Email

ಸಾರಾಂಶ

ಶಹಾಪುರದಲ್ಲಿ ಕರ್ನಾಟಕ ವಾಲ್ಮೀಕಿ ನಾಯಕರ ಸಂಘದಿಂದ ಸುರಪುರ ಶಾಸಕ ಋಅಜಾ ವೆಂಕಟಪ್ಪ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶಹಾಪುರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸ್ಫರ್ಧಿಸಿ, ಶಾಸಕರಾಗಿ ಜನಸೇವೆಗೆ ಅಣಿಯಾದ ಅವರು ಅಧಿಕಾರದಲ್ಲಿರಲಿ, ಇಲ್ಲದಿರಲಿ ಅಲ್ಲಿನ ಜನ ಮಾತ್ರ ಅವರನ್ನು ರಾಜಾ ಎಂದೇ ಗುರುತಿಸುತ್ತಿದ್ದರು ಎಂದು ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ ಹೇಳಿದರು.

ನಗರದ ವಾಲ್ಮೀಕಿ ವೃತ್ತದಲ್ಲಿ ಕರ್ನಾಟಕ ವಾಲ್ಮೀಕಿ ನಾಯಕರ ಸಂಘದ ವತಿಯಿಂದ ಸುರಪುರ ಮತಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕರ ಅಕಾಲಿಕ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ಸಮಸ್ಯೆ ಹೇಳಿಕೊಂಡು ಬರುವ ಜನರ ಸಮಸ್ಯೆ ಬಗೆಹರಿಸದೆ ಹಿಂತಿರುಗಿ ಕಳುಹಿಸಿದ ಉದಾಹರಣೆಗಳಿಲ್ಲ. ಇಂಥಹ ಜನಪರ ನಾಯಕನನ್ನು ಕಳೆದುಕೊಂಡ ಜನತೆ ಅನಾಥರಾಗಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ, ಅವರ ಕುಟುಂಬಕ್ಕೆ ಮತ್ತು ಈ ನಾಡಿನ ಜನತೆಯ ದುಃಖ ತಡೆದುಕೊಳ್ಳುವ ಶಕ್ತಿ, ಆ ಭಗವಂತನು ಕರುಣಿಸಲೆಂದು ಪ್ರಾರ್ಥಿಸಿದರು.

ನಾಯಕರ ಅಗಲಿಕೆಯ ಸುದ್ದಿ ಕೇಳಿ ಕುಗ್ಗಿ ಹೋಗಿದ್ದ ಸುರಪುರದ ಜನತೆ, ಇಡೀ ನಗರವೇ ಭಾನುವಾರ, ಸೋಮವಾರವು ಬಿಕೋ ಎನ್ನುತ್ತಿತ್ತಲ್ಲದೆ, ಎಲ್ಲೆಡೆ ರಾಜಾ ವೆಂಕಟಪ್ಪ ನಾಯಕರ ಗುಣಗಾನವೇ ಕೇಳಿಬಂತು. ಅವರ ಅಕಾಲಿಕ ನಿಧನ ಸಗರನಾಡಿನ ಜನತೆಗೆ ಬರಗಾಲದಲ್ಲೂ ಬರಸಿಡಿಲು ಬಡಿದಂತಾಗಿದೆ.

ವಾಲ್ಮೀಕಿ ನಾಯಕರ ಸಂಘದ ಗೌರವಾಧ್ಯಕ್ಷ ರವಿ ಯಕ್ಷಿಂತಿ, ಹಿರಿಯ ನ್ಯಾಯವಾದಿ ಆರ್. ಚೆನ್ನಬಸ್ಸು ವನದುರ್ಗ, ತಾಲೂಕಾಧ್ಯಕ್ಷ ಮರೆಪ್ಪ ಪ್ಯಾಟಿ, ಕಾರ್ಯದರ್ಶಿ ಹಣಮಂತ್ರಾಯ ದೊರೆ, ಉಪ ತಹಸೀಲ್ದಾರ್ ಸಂಗಮೇಶ್, ಸಿದ್ದಣ್ಣ ಮಾನಸುಣಗಿ, ಶೇಖರ್ ದೊರೆ, ರಾಘವೇಂದ್ರ ಯಕ್ಷಿಂತಿ, ವಕೀಲ ಶರಣಪ್ಪ ಪ್ಯಾಟಿ, ಅಂಬರೀಶ್ ಇಟಗಿ ಇತರರಿದ್ದರು.