ಕಾಂಗ್ರೆಸ್ ಅಭ್ಯರ್ಥಿಗಳ ಜಯ - ಸಿದ್ದರಾಮಯ್ಯ ನಾಯಕತ್ವ ಮೆಚ್ಚಿದ ಜನರು : ಸಚಿವ ಶಿವರಾಜ ತಂಗಡಗಿ

| Published : Nov 24 2024, 01:48 AM IST / Updated: Nov 24 2024, 01:15 PM IST

ಕಾಂಗ್ರೆಸ್ ಅಭ್ಯರ್ಥಿಗಳ ಜಯ - ಸಿದ್ದರಾಮಯ್ಯ ನಾಯಕತ್ವ ಮೆಚ್ಚಿದ ಜನರು : ಸಚಿವ ಶಿವರಾಜ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ ಹಿನ್ನೆಲೆ ಇಲ್ಲಿನ ಬ್ಲಾಕ್‌ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ವಿಜಯೋತ್ಸವ ಆಚರಿಸಿದರು.

 ಕಾರಟಗಿ : ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ ಹಿನ್ನೆಲೆ ಇಲ್ಲಿನ ಬ್ಲಾಕ್‌ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ವಿಜಯೋತ್ಸವ ಆಚರಿಸಿದರು.

ನವಲಿ ವೃತ್ತದಲ್ಲಿ ಸೇರಿದ ಪಕ್ಷದ ಮುಖಂಡರು, ಕಾರ್ಯಕರ್ತರು, ಪುರಸಭೆ ಸದಸ್ಯರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿದರು

ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜನರು ಆಶೀರ್ವಾದ ಮಾಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರ ನಾಯಕತ್ವ ಮೆಚ್ಚಿಕೊಂಡಿದ್ದಾರೆ. ಈಗಲಾದರೂ, ಬಿಜೆಪಿಗರಿಗೆ ಅರ್ಥವಾಗಬೇಕು. ಅವರ ಸುಳ್ಳುಗಳಿಗೆ ಜನ ಮನ್ನಣೆ ನೀಡದೆ, ತಕ್ಕ‌ಪಾಠ ಕಲಿಸಿದ್ದಾರೆ. ಮೂರಕ್ಕೆ ಮೂರು ಕ್ಷೇತ್ರ ಗೆಲ್ಲುವುದಾಗಿ ನಾನು ಮೊದಲೇ ಹೇಳಿದ್ದೆ. ಜನರ ತೀರ್ಪು ನಮ್ಮ‌ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. 

ಮನುಷ್ಯತ್ವ ಹಾಗೂ ಮಾನವೀಯತೆ ಇದ್ದರೆ ಬಿಜೆಪಿಗರು ಇನ್ಮುಂದೆ ಧರ್ಮದ ಮೇಲೆ ರಾಜಕಾರಣ ಮಾಡಬಾರದು.‌ ಬಿಜೆಪಿಗರು ಜಿಲ್ಲೆಯಲ್ಲಿ 2019-20ರಲ್ಲಿ ವಕ್ಫ್ ಆಸ್ತಿ ಎಲ್ಲಿ? ಯಾವ ಆದೇಶ ಮಾಡಿದ್ದಾರೆ ಎಂಬ ದಾಖಲೆಗಳು ನನ್ನ ಬಳಿಯಿವೆ. ಆಗ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.ಮುಖಂಡರಾದ ಆರ್‌ಡಿಸಿಸಿ ಬ್ಯಾಂಕ್‌ ನಿದೇರ್ಶಕ ಶರಣೇಗೌಡ ಬೂದುಗುಂಪಾ, ಉದ್ಯಮಿ ಎನ್‌. ಬಸವಣ್ಣ, ಬೂದಿ ಗಿರಿಯಪ್ಪ, ಶರಣೇಗೌಡ ಕನಕಗಿರಿ, ಹುಲಿಹೈದರ್ ಹನುಮಂತ, ಅಮರೇಶ್ ಬರಗೂರು, ದೇವಪ್ಪ ಭಾವಿಕಟ್ಟಿ, ವಿರುಪಣ್ಣ ಕಲ್ಲೂರು, ಶರಣಪ್ಪ ಬೂದಗುಂಪಾ, ಬಸವ ಕೊಟೇಶ್ವರ್ ರಾವ್ ಸೇರಿ ಇತರರಿದ್ದರು.