ವಿಕಲಚೇತನರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು: ಡಾ.ಕೆ.ವೈ.ಶ್ರೀನಿವಾಸ್

| Published : Dec 05 2024, 12:34 AM IST

ಸಾರಾಂಶ

ಆದರ್ಶ ಒಬ್ಬ ವಿಕಲಚೇತನ ವ್ಯಕ್ತಿ ಎಂದು ಅನ್ನಿಸುವುದಿಲ್ಲ. ಮನೆಗೆ ಬಂದ ಎಲ್ಲರನ್ನೂ ಬಹಳ ಆತ್ಮೀಯದಿಂದ ಮಾತನಾಡಿಸುತ್ತಾನೆ. ಸರಸ್ವತಿ ಅವರ ಸಹ ಸಮಾಜ ಸೇವೆ ಜೊತೆಗೆ ಅವರ ಮಗನಿಗೆ ಸರಿಯಾದ ಸಮಯಕ್ಕೆ ಊಟ, ತಿಂಡಿ, ಸ್ನಾನ ಎಲ್ಲವನ್ನು ಮಾಡಿಸುವ ಮೂಲಕ ಬಹಳ ಅಚ್ಚುಕಟ್ಟಾಗಿ ನೋಡಿಕೊಂಡು, ಸಾಕುತ್ತಿದ್ದಾರೆ ಇವರಿಬ್ಬರಿಗೂ ದೇವರು ಆಯಸ್ಸು ಆರೋಗ್ಯ ನೀಡಲಿ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವಿಕಲಚೇತನರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ವೈದ್ಯ ಡಾ.ಕೆ.ವೈ.ಶ್ರೀನಿವಾಸ್ ಸಲಹೆ ನೀಡಿದರು.

ಪಟ್ಟಣದ ಪಶ್ಚಿಮ ವಾಹಿನಿಯ ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ಅಧ್ಯಕ್ಷೆ ಎನ್.ಸರಸ್ವತಿ ಅವರ ಮನೆಯಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಮಾತನಾಡಿ, ಅಂಗವಿಕಲತೆ ಶಾಪವಲ್ಲ. ಅಂಗವಿಕಲರು ವಿಶ್ವದಲ್ಲಿ ಅನೇಕ ಸಾಧನೆ ಮಾಡಿದ್ದಾರೆ. ಅವರಂತೆ ಸಾಧನೆಯತ್ತ ವಿಕಲಚೇತನರು ಮುನ್ನಡೆಯಬೇಕು ಎಂದರು.

ಶ್ರೀರಂಗನಾಯಕಿ ಸಮಾಜ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಮಾತನಾಡಿ, ಆದರ್ಶ ಒಬ್ಬ ವಿಕಲಚೇತನ ವ್ಯಕ್ತಿ ಎಂದು ಅನ್ನಿಸುವುದಿಲ್ಲ. ಮನೆಗೆ ಬಂದ ಎಲ್ಲರನ್ನೂ ಬಹಳ ಆತ್ಮೀಯದಿಂದ ಮಾತನಾಡಿಸುತ್ತಾನೆ. ಸರಸ್ವತಿ ಅವರ ಸಹ ಸಮಾಜ ಸೇವೆ ಜೊತೆಗೆ ಅವರ ಮಗನಿಗೆ ಸರಿಯಾದ ಸಮಯಕ್ಕೆ ಊಟ, ತಿಂಡಿ, ಸ್ನಾನ ಎಲ್ಲವನ್ನು ಮಾಡಿಸುವ ಮೂಲಕ ಬಹಳ ಅಚ್ಚುಕಟ್ಟಾಗಿ ನೋಡಿಕೊಂಡು, ಸಾಕುತ್ತಿದ್ದಾರೆ ಇವರಿಬ್ಬರಿಗೂ ದೇವರು ಆಯಸ್ಸು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದರು.

ಸಮಾಜ ಸೇವಕಿ ಲಯನ್ ಎನ್.ಸರಸ್ವತಿ ಮಾತನಾಡಿ, ವೇದಿಕೆ ಸದಸ್ಯರು ನನ್ನ ಮಗನಿಗೆ ಅಭಿನಂದಿಸಿ ಗೌರವಿಸುತ್ತಿರುವುದು ಖುಷಿ ಕೊಟ್ಟಿದೆ. ಪ್ರಪಂಚದಾದ್ಯತ ನನ್ನ ಮಗನಂತ ಎಷ್ಟೋ ಮಂದಿ ವಿಕಲಚೇತನರಿದ್ದಾರೆ. ಸಮಾಜ ಅವರ ಬಗ್ಗೆ ಅನುಕಂಪ ತೋರುವ ಬದಲು ಅವಕಾಶ ಕಲ್ಪಿಸುವಂತಾಗಲಿ ಎಂದರು.

ಇದೇ ವೇಳೆ ಸಮಾನ ಮನಸ್ಕರು ವೇದಿಕೆ ಸದಸ್ಯರು ಭಾಗವಹಿಸಿ ಸರಸ್ವತಿ ಅವರ ಪುತ್ರ ಆದರ್ಶ ಅವರನ್ನ ಗೌರವಿಸಿ, ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಅನುಶ್ರೀ, ದೀಪಕ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್‌.ಜಯಶಂಕರ್, ಯೋಗ ಶಿಕ್ಷಕ ಕೆ.ಶೆಟ್ಟಹಳ್ಳಿ ಅಪ್ಪಾಜಿ, ಚಿಕ್ಕ ತಮ್ಮೆಗೌಡ, ಗಾಯಿತ್ರಿ, ಕಡತನಾಳು ಗೋಪಾಲ್, ಭಾಗ್ಯಮ್ಮ, ಚರೀಸ್, ಪರೀನ್ ಸೇರಿದಂತೆ ಇತರರು ಇದ್ದರು.