ವಿಶೇಷಚೇತನರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕು: ಶಾಸಕ ಎಚ್.ಟಿ.ಮಂಜು

| Published : Mar 26 2025, 01:32 AM IST

ವಿಶೇಷಚೇತನರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕು: ಶಾಸಕ ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಅಂಗವೈಕಲ್ಯ ಶಾಪವಲ್ಲ. ದೈಹಿಕ ದೌರ್ಬಲ್ಯಗಳ ನಡುವೆಯೂ ವಿಶೇಷ ಚೇತನರು ತಮ್ಮ ಸಾಧನೆಗಳ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅಂಗವೈಕಲ್ಯ ಹೊಂದಿದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರ ಮೂರು ಚಕ್ರದ ವಾಹನವನ್ನು ನೀಡುತ್ತಿದೆ. ಇದರ ಸದುಪಯೋಗ ಪಡೆದು ಮುಖ್ಯ ವಾಹಿನಿಗೆ ಬರಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿಶೇಷಚೇತನರು ಸರ್ಕಾರದಿಂದ ಸಿಗುವ ಸೌಲಭ್ಯ ಬಳಸಿಕೊಂಡು ಇತರರಂತೆ ಬದುಕು ನಡೆಸಬೇಕು ಶಾಸಕ ಎಚ್.ಟಿ ಮಂಜು ಕರೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಕಾರ್ಯಾಲಯದ ಆವರಣದಲ್ಲಿ ತಾಪಂ ಅನಿಬಂಧಿತ ಅನುದಾನದಡಿಯಲ್ಲಿ ಅರ್ಹ ಫಲಾನುಭವಿ ವಿಶೇಷ ಚೇತನರಿಗೆ ವಿದ್ಯುತ್ ಚಾಲಿತ ಟಿ.ವಿ.ಎಸ್ ಜೂಪಿಟರ್ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿ, ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪುವುದು ಎಷ್ಟು ಮುಖ್ಯವೋ ಫಲಾನುಭವಿಗಳು ಅದರ ಸದ್ಬಳಕೆ ಮಾಡಿಕೊಂಡು ಪ್ರಗತಿ ಪಥದಲ್ಲಿ ಮುನ್ನಡೆಯುವುದು ಅಷ್ಟೇ ಮುಖ್ಯ ಎಂದರು.

ಅಂಗವೈಕಲ್ಯ ಶಾಪವಲ್ಲ. ದೈಹಿಕ ದೌರ್ಬಲ್ಯಗಳ ನಡುವೆಯೂ ವಿಶೇಷ ಚೇತನರು ತಮ್ಮ ಸಾಧನೆಗಳ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅಂಗವೈಕಲ್ಯ ಹೊಂದಿದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರ ಮೂರು ಚಕ್ರದ ವಾಹನವನ್ನು ನೀಡುತ್ತಿದೆ. ಇದರ ಸದುಪಯೋಗ ಪಡೆದು ಮುಖ್ಯ ವಾಹಿನಿಗೆ ಬರಬೇಕು ಎಂದರು.

ತಾಪಂಶೇ.05 ರ ಯೋಜನೆಯಡಿ ಇಂದು ತಾಲೂಕಿನ ಚಟ್ಟಂಗೆರೆ ಪ್ರದೀಪ್, ನೀತಿಮಂಗಲ ಚಲುವರಾಜ್, ನಾರಾಯಣಪುರ ಪುಟ್ಟಸ್ವಾಮಿ ಮತ್ತು ದೇವರಹಳ್ಳಿ ರಾಹುಲ್ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಫಲಾನುಭವಿಗಳಿಗೆ ಸವಲತ್ತು ದೊರಕಲಿದೆ ಎಂದರು.

ಸರ್ಕಾರದ ನೆರವಿನ ತ್ರಿಚಕ್ರ ವಾಹನದ ಸಹಾಯದಿಂದ ಫಲಾನುಭವಿಗಳು ಸಾಮಾನ್ಯ ಜನರಂತೆ ಓಡಾಡಲು ಅನುಕೂಲವಾಗಿದೆ. ಅಂಗವಿಕಲರ ಮೇಲೆ ನಮಗೆ ಕರುಣೆ ಇರಬಾರದು. ಬದಲಾಗಿ ನಾವು ಅವರಿಗೆ ಧೈರ್ಯ ತುಂಬುವ ಮೂಲಕ ಸ್ವಂತವಾಗಿ ದುಡಿಮೆ ಮಾಡುವ ಶಕ್ತಿ ನೀಡಬೇಕು. ಅವರಲ್ಲಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಕೆ.ಸುಷ್ಮ, ಸಹಾಯಕ ನಿರ್ದೇಶಕ ಡಾ.ಟಿ.ನರಸಿಂಹರಾಜು, ಯೋಜನಾಧಿಕಾರಿ ಶ್ರೀನಿವಾಸ್, ಪುರಸಭಾ ಸದಸ್ಯರಾದ ಗಿರೀಶ್, ದಿನೇಶ್, ಮಾಜಿ ಸದಸ್ಯರಾದ ಹೇಮಂತ್ ಕುಮಾರ್, ತಾಪಂ ಮಾಜಿ ಸದಸ್ಯ ಮಾಂಬಳ್ಳಿ ಅಶೋಕ್, ಜೆಡಿಎಸ್ ಮುಖಂಡ ಸಂತೆಬಾಚಹಳ್ಳಿ ರವಿ, ಶಾಸಕರ ಅಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಕುಮಾರಸ್ವಾಮಿ, ಧ್ರುವ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.