ಕಡೂರುಸಮಾಜದಲ್ಲಿ ಎಚ್ಐವಿ ಸೋಂಕಿತರನ್ನು ಕೀಳಾಗಿ ಕಾಣುವುದು ಸರಿಯಲ್ಲ. ಸಮಾಜದಲ್ಲಿ ಬದುಕುವ ಹಕ್ಕನ್ನು ಅವರು ಪಡೆದಿದ್ದಾರೆ ಅವರ ಬಗ್ಗೆ ಅನುಕಂಪ ಇರಬೇಕು ಎಂದು ಕಡೂರು ಜೆಎಂಎಫ್ ಸಿ ನ್ಯಾಯಾಲಯ ಹಿರಿಯ ನ್ಯಾಯಾಧೀಶ ಇರ್ಫಾನ್ ಹೇಳಿದರು.

ವಿಶ್ವಏಡ್ಸ್ ದಿನದ ಅಂಗವಾಗಿ ತಾಲೂಕು ಆರೋಗ್ಯ ಇಲಾಖೆಯಿಂಧ ಜಾಥಾ

ಕನ್ನಡಪ್ರಭ ವಾರ್ತೆ, ಕಡೂರು

ಸಮಾಜದಲ್ಲಿ ಎಚ್ಐವಿ ಸೋಂಕಿತರನ್ನು ಕೀಳಾಗಿ ಕಾಣುವುದು ಸರಿಯಲ್ಲ. ಸಮಾಜದಲ್ಲಿ ಬದುಕುವ ಹಕ್ಕನ್ನು ಅವರು ಪಡೆದಿದ್ದಾರೆ ಅವರ ಬಗ್ಗೆ ಅನುಕಂಪ ಇರಬೇಕು ಎಂದು ಕಡೂರು ಜೆಎಂಎಫ್ ಸಿ ನ್ಯಾಯಾಲಯ ಹಿರಿಯ ನ್ಯಾಯಾಧೀಶ ಇರ್ಫಾನ್ ಹೇಳಿದರು.

ಸೋಮವಾರ ವಿಶ್ವಏಡ್ಸ್ ದಿನದ ಅಂಗವಾಗಿ ತಾಲೂಕು ಆರೋಗ್ಯ ಇಲಾಖೆಯಿಂದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಎಚ್ಐವಿ/ ಏಡ್ಸ್ ದಿನದ ಅಂಗವಾಗಿ ನಡೆದ ಜಾಥಾಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಮಾತನಾಡಿದರು. ಸೋಂಕಿತರನ್ನು ದೂರ ಇಡುವುದರಿಂದ ಅವರಲ್ಲಿನ ಆತ್ಮಸ್ಥೈ ರ್ಯ ಕುಗ್ಗಿಸಿದಂತಾಗುತ್ತದೆ. ಸಾರ್ವಜನಿಕರ ಈ ನಡೆಯಿಂದ ಸೋಂಕಿತರು ರೋಗಕ್ಕಿಂತ ಹೆಚ್ಚಾಗಿ ಜನರ ನಿಂದನೆಯಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕಿ ತರನ್ನು ಯಾರೂ ಸಹ ದೂಷಿಸಬಾರದು. ಆಧುನಿಕ ವೈದ್ಯಕೀಯ ವಿಧಾನದಲ್ಲಿ ಅನೇಕ ಸಂಶೋಧನೆಗಳು ಈಗಾಗಲೆ ನಡೆದಿವೆ. ಸೋಂಕಿತರನ್ನು ಕೀಳಾಗಿ ಕಾಣದೆ ಅವರನ್ನು ಸಮಾಜ ಮುಖಿಯಾಗಿ-ಬೆಳೆಸಲು ಕೈಜೋಡಿಸುವ ಮೂಲಕ ನಾಗರಿಕ ಸಮಾಜದಲ್ಲಿ ಬದುಕಲು ಸಹಾಯ ಮಾಡಬೇಕು. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಇಂತಹ ಜಾಥಾಗಳ ಮೂಲಕ ಜನರನ್ನು ತಲುಪುವಂತಾಗಲಿ ಎಂದು ಆಶಿಸಿದರು. ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಎಚ್ಐವಿ ಎಂದರೆ ಮನುಷ್ಯನ ರೋಗ ನಿರೋಧಕ ಶಕ್ತಿ ಕಡಿಮೆ ಮಾಡುವ ವೈರಾಣು. ಈ ವೈರಾಣು ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕಡಿಮೆ ಮಾಡುತ್ತಾ ಹೋಗುತ್ತದೆ. ಹೀಗೆ ಅನೇಕ ರೋಗಗಳಿಗೆ ಒಳಗಾಗುವ ಸ್ಥಿತಿ ಏಡ್ಸ್ ಎನ್ನುತ್ತಾರೆ. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ದೂರವಿರುವುದು, ಪರೀಕ್ಷಿಸದೆ ರಕ್ತ ಪಡೆಯುವುದು., ಸಂಸ್ಕರಣೆ ಮಾಡಿದ ಸೂಜಿ, ಸಿರಂಜು ಬಳಸುವುದರಿಂದ ಎಚ್.ಐ.ವಿ ಸೋಂಕು ತಡೆಯ ಬಹುದು. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಆಪ್ತಮಿತ್ರ ಐಸಿಟಿಸಿ ಕೇಂದ್ರಗಳಲ್ಲಿ ಉಚಿತ ಪರೀಕ್ಷೆ ಮಾಡಲಾ ಗುತ್ತದೆ. ನಿಮ್ಮ ಎಲ್ಲ ಮಾಹಿತಿಯನ್ನು ಗುಪ್ತವಾಗಿ ಇಡಲಾಗುವುದು ಎಂದು ಮಾಹಿತಿ ನೀಡಿದರು. ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ತಹ ಖಲೀಲ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಚಂದಾ, ಡಾ. ಗುರುಮೂರ್ತಿ ಏಡ್ಸ್ ಕುರಿತು ಉಪಾನ್ಯಾಸ ನೀಡಿದರು. ಶರತ್ ಪ್ಯಾರಾ ಮೆಡಿಕಲ್ಸ್ ಮತ್ತು ಕಾಮಧೇನು ಕಾಲೇಜಿನ ವಿದ್ಯಾರ್ಥಿ ಗಳು ಮತ್ತು ಆರೋಗ್ಯ ಇಲಾಖೆ ಮಮತಾ ಸೇರಿದಂತೆ ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು. 1ಕೆಕೆಡಿಯು1.

ಕಡೂರು ತಾಲೂಕು ಆರೋಗ್ಯ ಇಲಾಖೆ ಆಯೋಜಿಸಿದ್ದ ‘ವಿಶ್ವಏಡ್ಸ್’ ದಿನದ ಅಂಗವಾಗಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಇರ್ಫಾನ್ ಮತ್ತು ತಹ ಖಲೀಲ್ ಜಾಥಕ್ಕೆ ಚಾಲನೆ ನೀಡಿದರು, ಡಾ.ಶ್ರೀನಿವಾಸ್, ಡಾ.ಚಂದಾ ಇದ್ದರು.