ಹಣವಂತರು ಹೃದಯವಂತರಾಗಿ ಸೇವಾ ಗುಣ ಹೊಂದಬೇಕು: ವಿ.ಶ್ರೀನಿವಾಸಮೂರ್ತಿ

| Published : Nov 17 2024, 01:20 AM IST

ಹಣವಂತರು ಹೃದಯವಂತರಾಗಿ ಸೇವಾ ಗುಣ ಹೊಂದಬೇಕು: ವಿ.ಶ್ರೀನಿವಾಸಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾನವೀಯತೆಯ ತಳಹದಿ ಮೇಲೆ ರೋಟರಿ ಸಂಸ್ಥೆ ನಿರ್ಮಾಣವಾಗಿದೆ. ಪರಸ್ಪರ ಸಹಕಾರದಿಂದ ಉದ್ಯಮಶೀಲತೆಯನ್ನು ಉತ್ತೇಜಿಸ ಮೂಲಕ ಸಂಸ್ಥೆ ಪರಸ್ಪರ ಸಹಕಾರದೊಂದಿಗೆ ಸಮುದಾಯ ಸೇವೆಗೆ ಸಾಮೂಹಿಕವಾಗಿ ಒಗ್ಗೂಡುತ್ತದೆ. ರೋಟರಿ ಸದಸ್ಯ ತನಗೆ ಅರಿವಿಲ್ಲದಂತೆಯೇ ಸಮುದಾಯ ಸೇವಕನಾಗಿ ತನ್ನನ್ನು ತಾನು ಸಮರ್ಪಣೆ ಮಾಡಿಕೊಳ್ಳುತ್ತಾನೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹಣವಂತರು ಹೃದಯವಂತರಾಗಿ ಸಮಾಜದಿಂದ ಗಳಿಸಿದ್ದನ್ನು ಹಿಂತಿರುಗಿಸುವ ಸೇವಾ ಗುಣಗಳನ್ನು ಹೊಂದಬೇಕು ಎಂದು ಬೆಂಗಳೂರು ರೋಟರಿ ಸಂಸ್ಥೆ ಜಿಲ್ಲಾ ಗೌರ್‍ನರ್ ವಿ.ಶ್ರೀನಿವಾಸಮೂರ್ತಿ ಕರೆ ನೀಡಿದರು.

ಪಟ್ಟಣದ ಜಯನಗರ ಬಡಾವಣೆಯ ಆರ್.ಟಿ.ಓ ಮಲ್ಲಿಕಾರ್ಜುನ್ ಸಭಾಂಗಣದಲ್ಲಿ ನೂನವಾಗಿ ಆರಂಭಗೊಂಡ ರೋಟರಿ ಕ್ಲಬ್ ಆಪ್‌ ಕೆ.ಆರ್.ಪೇಟೆ ಘಟಕಕ್ಕೆ ಚಾಲನೆ ನೀಡಿ ಮಾತನಾಡಿ, ವಿಶ್ವದ ಯಾವುದೇ ಸ್ಥಳಲ್ಲಾದರೂ ಸರಿ ದೀನ ದುರ್ಬಲರ ಸೇವೆಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳುವುದು ರೋಟರಿ ಸದಸ್ಯನ ಆಶಯವಾಗಿದೆ ಎಂದರು.

ಮಾನವೀಯತೆಯ ತಳಹದಿ ಮೇಲೆ ರೋಟರಿ ಸಂಸ್ಥೆ ನಿರ್ಮಾಣವಾಗಿದೆ. ಪರಸ್ಪರ ಸಹಕಾರದಿಂದ ಉದ್ಯಮಶೀಲತೆಯನ್ನು ಉತ್ತೇಜಿಸ ಮೂಲಕ ಸಂಸ್ಥೆ ಪರಸ್ಪರ ಸಹಕಾರದೊಂದಿಗೆ ಸಮುದಾಯ ಸೇವೆಗೆ ಸಾಮೂಹಿಕವಾಗಿ ಒಗ್ಗೂಡುತ್ತದೆ. ರೋಟರಿ ಸದಸ್ಯ ತನಗೆ ಅರಿವಿಲ್ಲದಂತೆಯೇ ಸಮುದಾಯ ಸೇವಕನಾಗಿ ತನ್ನನ್ನು ತಾನು ಸಮರ್ಪಣೆ ಮಾಡಿಕೊಳ್ಳುತ್ತಾನೆ ಎಂದರು.

ಇದೇ ವೇಳೆ ರೋಟರಿ ಕ್ಲಬ್ ಆಫ್ ಕೆ.ಆರ್.ಪೇಟೆ ಘಟಕದ ನೂತನ ಅಧ್ಯಕ್ಷರಾಗಿ ಆರ್.ಟಿ.ಓ ಮಲ್ಲಿಕಾರ್ಜುನ್, ಕಾರ್ಯದರ್ಶಿಯಾಗಿ ರಂಗನಾಥ್, ಖಜಾಂಚಿಯಾಗಿ ಕೆ.ಎಂ.ಪ್ರಸನ್ನಕುಮಾರ್, ಕ್ಲಬ್ ಸೇವಾ ನಿರ್ದೇಕರಾಗಿ ಆರ್.ವಾಸು, ಜಯಕೀರ್ತಿ, ಎಂ.ಕೆ.ಹರಿಚರಣ ತಿಲಕ್, ಕೆ.ಆರ್.ನೀಲಕಂಠ, ಬಿ.ಎ.ಮಂಜುನಾಥ್, ಹೆಚ್.ಬಿ.ರಾಜಶೇಖರ್, ರಂಗಸ್ವಾಮಿ, ಕೆ.ಆರ್.ಯೋಗೇಶ್, ಜಿ.ಎಸ್.ಮಂಜು, ಸ್ವೀಕರಿಸುವ ಮೂಲಕ ಕ್ಲಬ್ ನ ಪದಾಧಿಕಾರಿಗಳಾಗಿ ಪದಗ್ರಹಣ ಮಾಡಿದರು.

ನೂತನ ಅಧ್ಯಕ್ಷ ಆರ್.ಟಿ.ಓ ಮಲ್ಲಿಕಾರ್ಜುನ್ ಮಾತನಾಡಿ, ತಮ್ಮ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ತಾಲೂಕಿನ ಜನರ ಸೇವೆಗೆ ತನ್ನನ್ನು ನಾನು ಸಮರ್ಪಿಸಿಕೊಂಡಿದ್ದೇನೆ. ರೋಟರಿ ಸಂಸ್ಥೆ ಗೌರವಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡುತ್ತೇನೆ ಎಂದರು.ಈ ವೇಳೆ ರೋಟರಿ ಕ್ಲಬ್ ಆಫ್ ಕೋಲಾರ ಲೇಕ್‌ಸೈಡ್ ಅಧ್ಯಕ್ಷ ರಾಮಕೃಷ್ಣೇಗೌಡ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ರೋಟರಿ ಕ್ಲಬ್ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್, ಸಹ ಗೌರ್‍ನರ್ ಸಯೀಕ್‌ ಅಹಮದ್, ಸಲಹೆಗಾರರಾದ ನರ್ಮದ ನಾರಾಯಣ್, ಕ್ಲಬ್‌ನ ಮುಖ್ಯಸ್ಥರಾದ ತಿರುಮುರುಗನ್, ಎಂ.ಎಸ್ ಗಿರಿಜಾ, ಗಾಯಿತ್ರಿ ಮಲ್ಲಿಕಾರ್ಜುನ್ ಸೇರಿದಂತೆ ಹಲವರು ಇದ್ದರು.