ಇಚ್ಛಾಶಕ್ತಿ ಇದ್ದಾಗ ಜನಪರ ಆಡಳಿತ ಸಾಧ್ಯ: ಗಂಟಿಹೊಳೆ

| Published : Jan 24 2025, 12:49 AM IST

ಸಾರಾಂಶ

ಇಲ್ಲಿನ ಉಪ್ಪುಂದ ಗ್ರಾ.ಪಂ. ನ ನೂತನ ಕಚೇರಿ ಕಟ್ಟಡವನ್ನು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಉದ್ಘಾಟಿಸಿದರು. ಈ ಸಂದರ್ಭ ವಿವಿಧ ಸಾಂಸ್ಕೃತಿಕ ವೈಭವ ನಡೆಯಿತು.

ಕನ್ನಡಪ್ರಭ ವಾರ್ತೆ ಬೈಂದೂರು

ಇಲ್ಲಿನ ಉಪ್ಪುಂದ ಗ್ರಾಪಂನ ನೂತನ ಕಚೇರಿ ಕಟ್ಟಡವನ್ನು ಶಾಸಕ ಗುರುರಾಜ್ ಗಂಟಿಹೊಳೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿ ಅವರು, ಆಡಳಿತ ವ್ಯವಸ್ಥೆಯಲ್ಲಿ ಇಚ್ಛಾಶಕ್ತಿ ಇದ್ದಾಗ ಉತ್ತಮ ಸೌಲಭ್ಯಗಳೊಂದಿಗೆ ಜನ ಪರ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದರು.

ಸರ್ಕಾರಿ ಶಾಲೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ವೈಭವ ವೇದಿಕೆಯಲ್ಲಿ ನಡೆಯಿತು.

ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಮಾತನಾಡಿ ಜನರ ಅನಗತ್ಯ ಕಚೇರಿಯ ಅಲೆದಾಟವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಉಪ್ಪುಂದ ಮಾದರಿ ಗ್ರಾಮ ಪಂಚಾಯಿತಿ ಮಾಡಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಗ್ರಾ.ಪಂ. ಅಧ್ಯಕ್ಷ ಮೋಹನ್ ಚಂದ್ರ ಅಧ್ಯಕ್ಷತೆ ವಹಿಸಿ, ಮಾತನಾಡಿ ಜನರಿಗೆ ತ್ವರಿತಗತಿಯ ಸೇವೆ ನೀಡಲು ಸಿಬ್ಬಂದಿ ಕೊರತೆ ಇದೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ಗ್ರಾ.ಪಂ.ವಿಶೇಷ ಪ್ರಯತ್ನಗಳನ್ನು ಮಾಡುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಮಾರ್ಗದರ್ಶಿ ಅಧಿಕಾರಿ ನಾಗೇಶ್ ನಾಯ್ಕ್, ಗ್ರಾ.ಪಂ. ಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ, ಸದಸ್ಯರಾದ ಸುಮಿತ್ರಾ, ರೇಷ್ಮಾ ಸಂದೇಶ ಭಟ್, ಬಾಬು ದೇವಾಡಿಗ, ಮಂಜಿ, ಶ್ರೀನಿವಾಸ, ವೀರಭದ್ರ, ದಿವಾಕರ್ ಶೆಟ್ಟಿ, ಸುಶೀಲ, ವೀಣಾ ಪೂಜಾರಿ, ಪ್ರೇಮಾ ದೇವಾಡಿಗ, ಮಂಜುನಾಥ ದೇವಾಡಿಗ, ನಾಗರಾಜ್ ಶೇಟ್ ಯು., ಲಕ್ಷ್ಮೀ, ಶ್ರೀಧರ್, ಪೂರ್ಣಿಮಾ, ನಾಗರಾಜ್ ಖಾರ್ವಿ, ಸುಪ್ರೀತಾ, ದುರ್ಗಮ್ಮ, ಜಗನ್ನಾಥ, ಬಾರಿನ ಗಿರಿಜಾ, ಮುರುಳೀಧರ್, ವಿನೋದ್ ರಾಜ್, ಶೇಖರ್ ಪೂಜಾರಿ, ಪ್ರಕಾಶ್ ಆಚಾರಿ, ಮಂಜಮ್ಮ, ಸುಪ್ರೀತಾ ಶೆಟ್ಟಿ, ಗಿರಿಜಾ ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುದರ್ಶನ ಎಸ್. ಸ್ವಾಗತಿಸಿದರು. ಕಾರ್ಯದರ್ಶಿ ಗಿರಿಜಾ ವಂದಿಸಿದರು. ರೇಖಾ ನಿರೂಪಿಸಿದರು.