ಕುಷ್ಟಗಿ ತಾಲೂಕಿಗೆ ಶೇ. 57.47 ಫಲಿತಾಂಶ

| Published : May 10 2024, 01:30 AM IST

ಸಾರಾಂಶ

ಗುರುವಾರ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. 2677 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ತಾಲೂಕು ಶೇ.57.47 ಪ್ರತಿಶತ ಪಡೆದುಕೊಂಡಿದೆ.

ಕನ್ನಡಪ್ರಭವಾರ್ತೆ ಕುಷ್ಟಗಿ

ಗುರುವಾರ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. 2677 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ತಾಲೂಕು ಶೇ.57.47 ಪ್ರತಿಶತ ಪಡೆದುಕೊಂಡಿದೆ.

ತಾಲೂಕಿನ ತಳವಗೇರಾ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ 77 ವಿದ್ಯಾರ್ಥಿಗಳ ಪೈಕಿ 76 ವಿದ್ಯಾರ್ಥಿಗಳು ಪಾಸಾಗಿದ್ದು, ಇದರಲ್ಲಿ ತಾಲೂಕಿಗೆ ಪ್ರಥಮಸ್ಥಾನದಲ್ಲಿ ದಿವ್ಯಾ ನಾಯಕ 611 (97.76) ಸುಸ್ಮಿತಾ ವಾಲಿಕಾರ 611 (97.76), ದ್ವಿತೀಯ ಅಪೇಕ್ಷಾ ಅಂಗಡಿ 609 ತೃತೀಯ (97.44) ಸಾತ್ವೀಕ ಗುಡಿಸಾಗರ 606 (96.96) ಚತುರ್ಥ ವೈಷ್ಣವಿ ದೇಸಾಯಿ 604 (96.64) ಅಂಕ ಪಡೆದಿದ್ದಾರೆ.

ಶ್ರೀ ಗುರು ಚನ್ನಬಸವೇಶ್ವರ ಪ್ರೌಢಶಾಲೆಯಲ್ಲಿ 43 ವಿದ್ಯಾರ್ಥಿಗಳ ಪೈಕಿ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಪ್ರಥಮ ಸ್ಥಾನದಲ್ಲಿ ಮಧು ಪಟ್ಟಣಶೆಟ್ಟಿ (95.68) ದ್ವಿತೀಯ ಸ್ಥಾನದಲ್ಲಿ ಸುಮೇರಾ ತಬಸುಂ (95.2) ಅಂಕ ಗಳಿಸಿದ್ದಾರೆ.ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 264 ವಿದ್ಯಾರ್ಥಿಗಳ ಪೈಕಿ 118 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರಥಮ ಸ್ಥಾನದಲ್ಲಿ ಶಶಿಧರ ಕಾಳಗಿ (ಶೇ.88.8), ದ್ವಿತೀಯ ಸ್ಥಾನ ಮಹ್ಮದ ತೌಫಿಕ್ ಯಲಬುರ್ಗಿ (ಶೇ.83.36) ಹರ್ಷಿತಾ ಕಾಳಗಿ (83.04) ತೃತೀಯ ಸ್ಥಾನ ಪಡೆದಿದ್ದಾರೆ.

ಕ್ಯಾದಿಗುಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ 50 ವಿದ್ಯಾರ್ಥಿಗಳ ಪೈಕಿ 26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಪ್ರಥಮ ಸ್ಥಾನ ದೇವಮ್ಮ ಬೆಲೇರಿ (ಶೇ. 82), ದ್ವಿತೀಯ ಸ್ಥಾನ ದೇವರಡ್ಡಿ ಮುಂದಿನಮನಿ (ಶೇ.75) ಲಕ್ಷ್ಮೀಬಾಯಿ (ಶೇ.75) ಪ್ರತಿಶತ ಪಡೆದುಕೊಂಡಿದ್ದಾರೆ.

ಪಟ್ಟಣದ ಕ್ರೈಸ್ತ ದಿ ಕಿಂಗ್ ಶಾಲೆಯಲ್ಲಿ 102 ವಿದ್ಯಾರ್ಥಿಗಳ ಪೈಕಿ 85 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪಟ್ಟಣದ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ 42 ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕುಷ್ಟಗಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ 234 ವಿದ್ಯಾರ್ಥಿನಿಯರ ಪೈಕಿ 111 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ತಾಲೂಕಿನ ಮುದೇನೂರು ಪ್ರೌಢಶಾಲೆಯಲ್ಲಿ 83 ವಿದ್ಯಾರ್ಥಿಗಳ ಪೈಕಿ 46 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಜುಮಲಾಪೂರ ಪ್ರೌಢಶಾಲೆಯಲ್ಲಿ 73 ವಿದ್ಯಾರ್ಥಿಗಳ ಪೈಕಿ 29 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತಾವರಗೇರಾ ಬಾಲಕರ ಪ್ರೌಢಶಾಲೆ 40 ವಿದ್ಯಾರ್ಥಿಗಳ ಪೈಕಿ 4 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಬಿವಿಟಿ ಮೆಮೋರಿಯಲ್ ಪ್ರೌಢಶಾಲೆ 13 ವಿದ್ಯಾರ್ಥಿಗಳ ಪೈಕಿ ಎಲ್ಲರೂ ಅನುತ್ತೀರ್ಣರಾಗಿದ್ದು ಶೂನ್ಯ ಫಲಿತಾಂಶ ಕಂಡಿದೆ. ಬುತ್ತಿಬಸವೇಶ್ವರ ಪ್ರೌಢಶಾಲೆ 19 ವಿದ್ಯಾರ್ಥಿಗಳ ಪೈಕಿ 9 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಿರಗುಂಪಿ ಶಾಲೆಯಲ್ಲಿ 81 ವಿದ್ಯಾರ್ಥಿಗಳ ಪೈಕಿ 57 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.