ಸಾರಾಂಶ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೊನ್ನಾಳಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಶೇ.50ರಷ್ಟು ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ರಾಮಚಂದ್ರಪ್ಪ ಹೊಸಮನೆ ಹೇಳಿದ್ದಾರೆ.
- ಸರ್ಕಾರಿ ಕಾಲೇಜಿಗೆ ಶೇ.50 ಫಲಿತಾಂಶ: ಪ್ರಾಚಾರ್ಯ ರಾಮಚಂದ್ರಪ್ಪ ಹೊಸಮನೆ ಮಾಹಿತಿ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೊನ್ನಾಳಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಶೇ.50ರಷ್ಟು ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ರಾಮಚಂದ್ರಪ್ಪ ಹೊಸಮನೆ ಹೇಳಿದರು.ಒಟ್ಟು 200 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 99 ವಿದ್ಯಾರ್ಥಿಗಳು ತೆರ್ಗಡೆಗೊಂಡಿದ್ದಾರೆ. 5 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, ಪ್ರಥಮ ದರ್ಜೆ 48, ದ್ವಿತೀಯ 36, ಪಾಸಾದವರು 10 ವಿದ್ಯಾರ್ಥಿಗಳು.
ವಿಜ್ಞಾನ ವಿಭಾಗಕ್ಕೆ ಶೇ.42.59 ಫಲಿತಾಂಶ ಬಂದಿದೆ. ವಿದ್ಯಾರ್ಥಿನಿ ಶಾಹಿದ 600ಕ್ಕೆ 502 ಶೇ.83.6., ತೃಪ್ತಿ 600ಕ್ಕೆ 497 ಶೇ.82.83ರಷ್ಟು ಅಂಕ ಪಡೆದಿದ್ದಾರೆ. ಕಲಾ ವಿಭಾಗಕ್ಕೆ ಶೇ.47.31 ಫಲಿತಾಂಶ ಬಂದಿದೆ. ಅತ್ಯುನ್ನತ ಶ್ರೇಣಿಯಲ್ಲಿ ಸಿ.ಕೋಮಲ 513.ಶೇ.85.50, ಎಸ್.ಎಚ್.ಸಂಜಯ 511. ಶೇ.85.16 ರಷ್ಟು ಅಂಕ ಪಡೆದಿದ್ದಾರೆ. ಶಿಕ್ಷಣ ವಿಭಾಗದಲ್ಲಿ ಟಿ.ಜಿ.ಮಲ್ಲಿಕಾರ್ಜನ 600ಕ್ಕೆ 513 ಶೇ.85.5. ವಾಣಿಜ್ಯ ವಿಭಾಗದಲ್ಲಿ ಬಿ.ಎನ್ ಗಣೇಶ್ 541 ಶೇ.90.16. ಕೆ.ಬಿ.ದರ್ಶನ 510 ಶೇ.85ರಷ್ಟು ಅಂಕಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.ಅರಬಗಟ್ಟೆ ಕಾಲೇಜು:
ಹೊನ್ನಾಳಿ ತಾಲೂಕಿನ ಅರಬಗಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜಿನನಲ್ಲಿ ಒಟ್ಟು 20 ವಿದ್ಯಾರ್ಥಿಗಳಲ್ಲಿ 14 ಪಾಸಾಗಿದ್ದು, 8 ಪ್ರಥಮ ದರ್ಜೆ,4 ದ್ವಿತೀಯ 2 ಪಾಸಾಗಿದ್ದಾರೆ ಎಂದು ಪ್ರಾಚಾರ್ಯ ಚಂದ್ರೇಗೌಡ ತಿಳಿಸಿದ್ದಾರೆ.ಸವಳಂಗ ಕಾಲೇಜು:
ನ್ಯಾಮತಿ ತಾಲೂಕಿನ ಸವಳಂಗ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗಕ್ಕೆ ಶೇ.42ರಷ್ಟು ಫಲಿತಾಂಶ ಬಂದಿದೆ. ಒಟ್ಟು 29ರಲ್ಲಿ 12 ಮಂದಿ ತೇರ್ಗಡೆಯಾಗಿದ್ದಾರೆ. ಪ್ರಥಮ ದರ್ಜೆ 4 ದ್ವಿತೀಯ ದರ್ಜೆ 3 ತೃತೀಯ ದರ್ಜೆ 5 ವಿದ್ಯಾಥಿಗಳು. ವಾಣಿಜ್ಯ ವಿಭಾಗಕ್ಕೆ ಶೇ.93ರಷ್ಟು ಫಲಿತಾಂಶ ಬಂದಿದ್ದು, ಒಟ್ಟು 14 ವಿದ್ಯಾರ್ಥಿಗಳಲ್ಲಿ 3 ಅತ್ಯುನ್ನತ 7 ಪ್ರಥಮ ದರ್ಜೆ, ದ್ವಿತೀಯ ದರ್ಜೆ 3, ತೃತೀಯ ದರ್ಜೆ 3 ಮಂದಿ ತೇರ್ಗಡೆಯಾಗಿದ್ದಾರೆ ಎಂದು ಪ್ರಾಚಾರ್ಯ ಕೋದಂಡ ತಿಳಿಸಿದ್ದಾರೆ.- - -
(ಬಾಕ್ಸ್) * ಬೆಳಗುತ್ತಿ ತೀರ್ಥಲಿಂಗೇಶ್ವರ ಕಾಲೇಜು ಫಲಿತಾಂಶನ್ಯಾಮತಿ ತಾಲೂಕಿನ ಬೆಳಗುತ್ತಿ ಶ್ರೀ ತೀರ್ಥಲಿಂಗೇಶ್ವರ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ಶೇ.54.84 ಫಲಿತಾಂಶ ಬಂದಿದೆ. ಒಟ್ಟು 35 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 3, ಪ್ರಥಮ 9, ದ್ವಿತೀಯ ದರ್ಜೆಯಲ್ಲಿ 4 ಮಂದಿ ಸಾಧನೆ ಮೆರೆದಿದ್ದಾರೆ. ಮಾಲತೇಶ್ 600ಕ್ಕೆ 553 ಅಂಕಗಳು, ಎಂ.ಶೀಲಾ 600ಕ್ಕೆ 528 ಅಂಕ ಗಳಿಸಿದ್ದಾರೆ ಎಂದು ಪ್ರಾಚಾರ್ಯ ನಾಗರತ್ನ ತಿಳಿಸಿದ್ದಾರೆ.
- - -