ಅಂಗನವಾಡಿ ನೌಕರರನ್ನು ಕಾಯಂ ಮಾಡಿ

| Published : Dec 12 2024, 12:30 AM IST

ಸಾರಾಂಶ

ಗುಜರಾತ್ ಹೈ ಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರನ್ನು ವರ್ಗ-3 ಮತ್ತು 4 ನೌಕರರ ಎಂದು ಪರಿಗಣಿಸಿ ಅವರ ಸೇವೆಗಳನ್ನು ಕಾಯಂ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಈ ತಕ್ಷಣದಲ್ಲಿ ಕ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ನ ರಾಜ್ಯ ಅಧ್ಯಕ್ಷ ಎಸ್. ವರಲಕ್ಷ್ಮಿ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಗುಜರಾತ್ ಹೈ ಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರನ್ನು ವರ್ಗ-3 ಮತ್ತು 4 ನೌಕರರ ಎಂದು ಪರಿಗಣಿಸಿ ಅವರ ಸೇವೆಗಳನ್ನು ಕಾಯಂ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಈ ತಕ್ಷಣದಲ್ಲಿ ಕ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ನ ರಾಜ್ಯ ಅಧ್ಯಕ್ಷ ಎಸ್. ವರಲಕ್ಷ್ಮಿ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಅವರು ನಗರದ ವೀರಸೌಧದಲ್ಲಿ ಸಂಘಟಿಸಲಾಗಿದ್ದ ಅಂಗನವಾಡಿ ನೌಕರರ ಜಿಲ್ಲಾ ಸಮಾವೇಶ ಉದ್ಘಾಟಿಸಿ, ಉಪಧನ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಕನ್ನಡ ಅವತರಣಿಕೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಐಸಿಡಿಎಸ್ 50 ವರ್ಷ ಪೂರೈಸಿದೆ.ಅದರೆ ಈ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಇಲ್ಲ. ಸರ್ಕಾರ ಈ ತಕ್ಷಣವೇ ಪ್ರತ್ಯೇಕ ನಿರ್ದೇಶನಾಲಯ ಮಾಡುವಂತೆ ಒತ್ತಾಯಿಸಿದರು.

ಸಂಘದ ಜಿಲ್ಲಾ ಖಜಾಂಚಿ ಬಿ.ಎಸ್ ಅನುಸೂಯ ಅವರು ಮಾತನಾಡಿ ಶಿಕ್ಷಣ ಇಲಾಖೆ 4 ವರ್ಷ ಮೇಲ್ಪಟ್ಟ ಮಕ್ಕಳನ್ನು ಸ್ಥಳಾಂತರಿಸುವುದು ಸರಿಯಲ್ಲ., ಅಂಗನವಾಡಿ ಕೇಂದ್ರದಲ್ಲೆ ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರವಾಗಿಸಿರುವುದು ಸ್ವಾಗತಾರ್ಹ ಎಂದರು.

ಪ್ರಾಸ್ತವಿಕ ಮಾತುಗಳನ್ನು ಆಡಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು ಅವರು ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ನಮಗೆ ನೀಡಲಾದ ಅಶ್ವಾಸನೆಯಂತೆ ಗೌರವ ಧನವನ್ನು ಮಾಸಿಕ 15 ಸಾವಿರಕ್ಕೆ ಹೆಚ್ಚಿಸಬೇಕು. ಇಲಾಖೇತರ ಕೆಲಸಗಳಾದ ಬಿಎಲ್ ಒ ಇತರೆ ಕೆಲಸಗಳಿಂದ ಮುಕ್ತಿಗೊಳಿಸಬೇಕು ಎಂದರು. ಹಲವು ಬೇಡಿಕೆಗಳ ಆಧಾರದಲ್ಲಿ ಡಿಸೆಂಬರ್ 18 ರಂದು ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಸಮಾವೇಶದಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್, ಸಂಘ ಉಪಾಧ್ಯಕ್ಷ ಎಸ್. ಡಿ ಪಾರ್ವತಮ್ಮ, ಗುಬ್ಬಿ ಅನುಸೂಯ, ಸರೋಜ, ತುರುವೇಕರೆ ವಸಂತ, ಚಿ.ನಾ ಹಳ್ಳಿಯ ಪೂರ್ಣಮ್ಮ, ಕುಣಿಗಲ್ ನ ಇಂದ್ರಮ್ಮ, ತುಮಕೂರು ಗಂಗಮ್ಮ, ಜಬೀನಾ, ಗೌರಮ್ಮ, ಪಾವಗಡದ ಶಿವಗಂಗಮ್ಮ, ಸಿರಾ ಪಾರ್ವತಮ್ಮ ,ಕೊರಟಗೆರೆ ಆಧಿಲಕ್ಷ್ಮೀ, ವನಜಾಕ್ಷಿ ಮತ್ತಿತರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಘ ಜಿಲ್ಲಾಧ್ಯಕ್ಷರಾದ ಕಮಲಾ ಸರ್ಕಾರ ಅದೇಶದಂತೆ ಈ ಕೊಡಲೆ ಗ್ರಾಜ್ಯೂಯಿಟಿ ಹಣ ಬಿಡುಗಡೆ ಮಾಡಬೇಕು ಮತ್ತು ಇದನ್ನು ಎಲ್ಲಾರಿಗೂ ಅನ್ವಯಿಸಬೇಕು. ಕೇಂದ್ರ ಸರ್ಕಾರ ಯಾವುದೇ ಗೌರವ ಧನವನ್ನು 6-7 ವರ್ಷಗಳಿಂದ ಹೆಚ್ಚಿಸಿಲ್ಲ ಹಾಗಾಗಿ ಕನಿಷ್ಟ 26,000 ರೂ ಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.