ಶಾಶ್ವತ ಕುಡಿಯುವ ನೀರಿನ ಯೋಜನೆ ಶೀಘ್ರ ಪೂರ್ಣ

| Published : Oct 01 2024, 01:32 AM IST

ಸಾರಾಂಶ

ಮುಧೋಳ ಜನರ ಬಹುದಿನಗಳ ಬೇಡಿಕೆಗಳಾದ ಶಾಶ್ವತ ಕುಡಿಯುವ ನೀರಿನ ಯೋಜನೆ ಮತ್ತು ಒಳಚರಂಡಿ ಯೋಜನೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು. ಈ ಕುರಿತು ತಾವು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಮುಧೋಳ ಜನರ ಬಹುದಿನಗಳ ಬೇಡಿಕೆಗಳಾದ ಶಾಶ್ವತ ಕುಡಿಯುವ ನೀರಿನ ಯೋಜನೆ ಮತ್ತು ಒಳಚರಂಡಿ ಯೋಜನೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು. ಈ ಕುರಿತು ತಾವು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಸೋಮವಾರ ಮುಧೋಳ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಮುಧೋಳ ನಗರದ ವಿವಿಧ ಸಮುದಾಯಗಳಿಗೆ ಸಮುದಾಯ ಭವನಗಳ ನಿರ್ಮಾಣಕ್ಕೆ ನಿವೇಶನ ಮಂಜೂರಾತಿ ಮಾಡುವ ಕುರಿತು, ಘಟಪ್ರಭಾ ಪ್ರವಾಹದಿಂದ ಮುಳಗಡೆಯಾಗುವ ಕುಟುಂಬಗಳನ್ನು ಸ್ಥಳಾಂತರಗೊಳಿಸಿ ಅವರಿಗೆ ನಿವೇಶನ ಮತ್ತು ಶಾಶ್ವತ ಸೂರು ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ನಗರದ ಜನತೆಯು ಕುಡಿಯುವ ನೀರಿಗಾಗಿ ಯಾರು ಅಲೆದಾಡದಂತೆ ನೋಡಿಕೊಳ್ಳಬೇಕು. ಅವಶ್ಯತೆ ಇರುವಲ್ಲಿ ಕೊಳವೆ ಭಾವಿಗಳ ಮೂಲಕ ನೀರನ್ನು ಒದಗಿಸಬೇಕೆಂದು ಹೇಳಿ ಚರಂಡಿ, ರಸ್ತೆ, ವಿದ್ಯುತ್ ದೀಪ ಸೇರಿದಂತೆ ಇತರೆ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರದಿಂದ ಎಲ್ಲ ರೀತಿಯ ಅನುದಾನ ತರುವಲ್ಲಿ ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಭೆಯಲ್ಲಿದ್ದ ಸಚಿವ ತಿಮ್ಮಾಪೂರ ಹೇಳಿದರು. ಅಭಿವೃದ್ಧಿ ಕೆಲಸಗಳು ಬಂದಾಗ ಯಾರೂ ರಾಜಕೀಯ ಮಾಡಬಾರದು ಎಂದು ಉಪಸ್ಥಿತರಿದ್ದ ಸದಸ್ಯರುಗಳಿಗೆ ಸಚಿವರು ಕಿವಿಮಾತು ಹೇಳಿದರು.ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಉಪಾಧ್ಯಕ್ಷ ಮಹಿಬೂಬ ಬಾಗವಾನ ಮತ್ತು ಕಾಂಗ್ರೆಸ್ಸಿನ ಸದಸ್ಯರು, ಬಿಜೆಪಿಯ ಇಬ್ಬರು ಮಾತ್ರ ಸದಸ್ಯರು ಸಾಮಾನ್ಯ ಸಭೆಯಲ್ಲಿ ಇದ್ದರು.ಪೌರಾಯುಕ್ತ ಗೋಪಾಲ ಕಾಸೆ, ತಹಸೀಲ್ದಾರ್‌ ಮಹಾದೇವ ಸನಮೋರಿ, ನಗರಸಭೆಯ ಕಚೇರಿ ವ್ಯವಸ್ಥಾಪಕಿ ಭಾರತಿದೇವಿ ಜೋಶಿ ಸೇರಿದಂತೆ ಇತರೆ ಸಿಬ್ಬಂದಿಯವರು ಉಪಸ್ಥಿತರಿದ್ದರು.