ಸಾರಾಂಶ
ನೌಕಾನೆಲೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳೆರಡೂ ಪ್ರವಾಹ ಪರಿಸ್ಥಿತಿ ಆಗದಂತೆ ನೋಡಿಕೊಳ್ಳಲು ಕೈಜೋಡಿಸಬೇಕು
ಕಾರವಾರ: ಸೀಬರ್ಡ ನೌಕಾನೆಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚೆಂಡಿಯಾ, ಅರಗಾ, ತೋಡೂರು ಮತ್ತಿತರ ಪ್ರದೇಶದಲ್ಲಿ ಪ್ರತಿವರ್ಷ ಮೇಲಿಂದ ಮೇಲೆ ಪ್ರವಾಹ ಉಂಟಾಗುತ್ತಿರುವುದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಉಂಟಾಗಿರುವ ಸಮಸ್ಯೆ ಬಗ್ಗೆ ನೌಕಾನೆಲೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ. ಈಗ ಪ್ರವಾಹಕ್ಕೆ ಕಾರಣವಾದ ಹಳೆಯ ಸೇತುವೆಯನ್ನು ಒಡೆಯುವ ಕಾರ್ಯ ಆರಂಭವಾಗಿದೆ. ಈ ಕಾಮಗಾರಿ ಪೂರ್ತಿ ಆದಲ್ಲಿ ನೀರು ಹೊರಹೋಗಲಿದೆ. ನೌಕಾನೆಲೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳೆರಡೂ ಪ್ರವಾಹ ಪರಿಸ್ಥಿತಿ ಆಗದಂತೆ ನೋಡಿಕೊಳ್ಳಲು ಕೈಜೋಡಿಸಬೇಕು ಎಂದರು.ಪ್ರವಾಹದಿಂದ ಕುಸಿತವಾಗುವ ಮನೆ ಹಾಗೂ ಹಾನಿಗೊಳಗಾಗುವ ಮನೆಗೆ ಪರಿಹಾರದ ಮೊತ್ತವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಬೇಕು. ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡಿದ್ದಾಗಿ ಕಾಗೇರಿ ಹೇಳಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ, ನಾಗೇಶ ಕುರ್ಡೇಕರ ಇದ್ದರು.