ದ್ವಾರಸಮುದ್ರ ಕೆರೆಗೆ ಶಾಶ್ವತ ನೀರು ಪೂರೈಕೆ

| Published : Aug 31 2024, 01:41 AM IST

ಸಾರಾಂಶ

ದ್ವಾರಸಮುದ್ರ ಕೆರೆ ಮುಂಗಾರು ಮಳೆ ಹಾಗೂ ಏತ ನೀರಾವರಿ ಯೋಜನೆಯಿಂದ ಮೈತುಂಬಿ ಹರಿಯುತ್ತಿರುವುದು ಸಂತೋಷದ ವಿಚಾರ. ಈ ವರ್ಷದಲ್ಲಿ ಕೆರೆ ಭರ್ತಿಯಾಗಿರುವುದರಿಂದ ಹಳೇಬೀಡು, ಮಾದೀಹಳ್ಳಿ ಜಾವಾಗಲ್ ಮೂರು ಹೋಬಳಿಯ ರೈತರ ಜೀವನಾಡಿಯಾಗಿದೆ ಎಂದು ಪುಷ್ಪಗಿರಿ ಮಹಾಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಈ ವರ್ಷದಲ್ಲಿ ಕೆರೆ ಭರ್ತಿಯಾಗಿರುವುದರಿಂದ ಹಳೇಬೀಡು, ಮಾದೀಹಳ್ಳಿ ಜಾವಾಗಲ್ ಮೂರು ಹೋಬಳಿಯ ರೈತರ ಜೀವನಾಡಿಯಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಐತಿಹಾಸಿಕ ದ್ವಾರಸಮುದ್ರ ಕೆರೆ ಮುಂಗಾರು ಮಳೆ ಹಾಗೂ ಏತ ನೀರಾವರಿ ಯೋಜನೆಯಿಂದ ಮೈತುಂಬಿ ಹರಿಯುತ್ತಿರುವುದು ಸಂತೋಷದ ವಿಚಾರ. ಈ ವರ್ಷದಲ್ಲಿ ಕೆರೆ ಭರ್ತಿಯಾಗಿರುವುದರಿಂದ ಹಳೇಬೀಡು, ಮಾದೀಹಳ್ಳಿ ಜಾವಾಗಲ್ ಮೂರು ಹೋಬಳಿಯ ರೈತರ ಜೀವನಾಡಿಯಾಗಿದೆ ಎಂದು ಪುಷ್ಪಗಿರಿ ಮಹಾಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಇಲ್ಲಿನ ದ್ವಾರಸಮುದ್ರ ಕೆರೆಗೆ ಹಳೇಬೀಡು ಮತ್ತು ಗೋಣಿಸೋಮನಹಳ್ಳಿ ಗ್ರಾಮ ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಬಾಗಿನ ಅರ್ಪಣೆ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡುತ್ತಾ, ೨೦೧೮ನೇ ಸಾಲಿನಲ್ಲಿ ರೈತರು ಮತ್ತು ಮಠಾಧೀಶರು ಹಾಗೂ ಜನಪರ ಸಂಘಗಳು ಹಾಗೂ ರಾಜಕೀಯ ಪಕ್ಷದ ಎಲ್ಲಾ ಮುಖಂಡರ ಹೋರಾಟಕ್ಕೆ ಇಂದು ಪ್ರತಿಫಲ ದೊರೆತಿದೆ. ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ ಕುಮಾರಸ್ವಾಮಿ ರಣಘಟ್ಟ ಯೋಜನೆಗೆ ೧೨೮ ಕೋಟಿ ಬಜೆಟ್ ಮಂಡನೆ ನೀಡಿದರು. ೨೦೨೦ರಲ್ಲಿ ಮಹಾಮಾರಿ ಕೊರೊನಾ ಲಾಕ್‌ಡೌನ್ ನೆಪದಲ್ಲಿ ಕೈಚೆಲ್ಲಿದರು. ನಂತರ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಮತ್ತೆ ಈ ಯೋಜನೆಗೆ ಚಾಲನೆ ನೀಡಿದರು. ರಣಘಟ್ಟ ಯೋಜನೆಯಲ್ಲಿ ೫ ಕಿ.ಮೀ. ಸುರಂಗ ಮಾರ್ಗದ ಕೆಲಸದಲ್ಲಿ ೩ ಕಿ.ಮೀ.ಕೆಲಸವಾಗಿದೆ. ಸಧ್ಯದಲ್ಲಿ ಕಾರ್ಯ ಮುಗಿದ ನಂತರ ಅಂತರ್ಜಲ ಹೆಚ್ಚುತ್ತದೆ.

ಬೋರ್‌ವೆಲ್ ಬಾವಿಗಳಲ್ಲಿ ಸಮೃದ್ಧಿಯಾಗಿ ನೀರು ಬರುತ್ತದೆ. ಇದರ ಫಲವಾಗಿ ಈ ಭಾಗದ ಸಾವಿರಾರು ಮಂದಿ ರೈತರು ನೆಮ್ಮದಿಯಿಂದ ಜೀವನ ನಡೆಸುತ್ತಾರೆ. ಆ ಸುದಿನ ಬೇಗ ಬರುತ್ತದೆ ಎಂಬುದು ನಮ್ಮ ಆಶಯವಾಗಿದೆ. ಈ ಯೋಜನೆಗೆ ಸಹಕರಿಸಿದ ಸ್ಥಳೀಯ ಶಾಸಕರು ಹಾಗೂ ಮಾಜಿ ಶಾಸಕರು, ಮಠಾಧಿಪತಿಗಳಿಗೆ, ರೈತ ಸಂಘ, ಹಾಗೂ ಮಾಧ್ಯಮದವರಿಗೆ ಅಭಿನಂದನೆ ಸಲ್ಲಿಸಿಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೋಳಗುಂದ ಕೇದಿಗೆ ಮಠದ ಶ್ರೀ ಜಯಚಂದ್ರಶೇಖರ ಸ್ವಾಮೀಜಿ ಮಾತನಾಡುತ್ತ, ಜಾವಗಲ್ ಕೆರೆಯಲ್ಲಿ ನೀರು ಇಲ್ಲದೆ ಜನತೆ ಕಷ್ಟಪಡುತ್ತಿದ್ದಾರೆ. ಇಂದಿನ ಸರ್ಕಾರ ಎತ್ತಿನಹೊಳೆ ಯೋಜನೆಯಿಂದ ನೀರಾವರಿ ಒದಗಿಸುವ ಕೆಲಸ ಮಾಡಬೇಕಂದು ತಿಳಿಸಿದರು. ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ. ಸುರೇಶ್, ಮಾಜಿ ಶಾಸಕ ಕೆ. ಎಸ್. ಲಿಂಗೇಶ್, ಹಳೇಬೀಡು ಮತ್ತು ಗೋಣಿಸೋಮನಹಳ್ಳಿ ಗ್ರಾ.ಪಂ. ಅಧ್ಯಕ್ಷರಾದ ನಿತ್ಯಾನಂದ, ಧರ್ಮಪ್ಪ, ಗ್ರಾ.ಪಂ.ಉಪಾಧ್ಯಕ್ಷೆ ರಶ್ಮಿ ವಿನಯ್, ಸಣ್ಣ ನೀರಾವರಿಯ ಎಂಜಿನಿಯರ್‌, ಸುಂದರರಾಜ್, ಎ.ಎಸ್.ಬಸವರಾಜ್, ಸೋಮಶೇಖರ್‌, ರೈತ ಸಂಘದ ಮುಖಂಡರು, ಎಲ್ಲಾ ಸಂಘಸಂಸ್ಥೆಗಳು, ಊರಿನ ನಾಗರಿಕರು ಹಾಜರಿದ್ದರು.