ಸಾರಾಂಶ
ಹೊಳೆನರಸೀಪುರ: ತಾಲೂಕಿನಲ್ಲಿ ಶ್ರೀ ವರಸಿದ್ಧಿ ವಿನಾಯಕ ಚತುರ್ಥಿ ದಿನದಂದು ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಅನುಮತಿಗಾಗಿ ಪಟ್ಟಣ, ಗ್ರಾಮಾಂತರ ಹಾಗೂ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ. ಶ್ರೀ ಗಣೇಶ ಮೂರ್ತಿ ಪ್ರತಿಷ್ಟಾಪನೆಯ ಅನುಮತಿಗಾಗಿ ಈ ಕೆಳಕಂಡ ದಾಖಲಾತಿಗಳನ್ನು ನೀಡುವಂತೆ ಸೂಚಿಸಲಾಗಿದೆ. ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಂಬಂಧಿಸಿದಂತೆ ಆಯೋಜಿಸುವ ಕಾರ್ಯಕ್ರಮಗಳ ವಿವರದೊಂದಿಗೆ ಮನವಿ ಪತ್ರ, ಪ್ರತಿಷ್ಠಾಪನೆ ಮಾಡುವ ಸ್ಥಳದ ಮಾಲೀಕರ ಅನುಮತಿ ಪತ್ರ, ವಿದ್ಯುತ್ ಇಲಾಖೆಯಿಂದ ಅನುಮತಿ ಪತ್ರ, ಗ್ರಾಮ ಪಂಚಾಯಿತಿಯಿಂದ ಅನುಮತಿ ಪತ್ರ, ವಿಸರ್ಜನೆ ವೇಳೆಯಲ್ಲಿ ವಾಹನ ಬಳಕೆ ಮಾಡಿದಲ್ಲಿ ವಾಹನದ ವಿವರ (ಆರ್‌ಸಿ ಹಾಗೂ ವಿಮೆ ದಾಖಲಾತಿಯ ನಕಲು), ಕಾರ್ಯಕ್ರಮ ಆಯೋಜಕರ ಆಧಾರ್ ಕಾರ್ಡ್ ನಕಲು ಪ್ರತಿ, ಧ್ವನಿವರ್ಧಕ ಬಳಕೆ ಸಂಬಂಧ ವೃತ್ತ ನಿರೀಕ್ಷಕರು ಹೊಳೆನರಸೀಪುರ ವೃತ್ತ ಅವರಿಗೆ ಮನವಿ ಪತ್ರ ಸಲ್ಲಿಸಿದ ಸ್ವೀಕೃತಿ ಪತ್ರದೊಂದಿಗೆ ಮೇಲ್ಕಂಡ ಎಲ್ಲಾ ದಾಖಲಾತಿಗಳೊಂದಿಗೆ ಆಗಸ್ಟ್ ೨೫ರ ಸೋಮವಾರದ ಒಳಗೆ ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ಅನುಮತಿ ಪಡೆದು ಗಣೇಶ ಮೂರ್ತಿ ಪ್ರತಿಷ್ಟಾಪಿಸಲು ಪ್ರಕಟಣೆಯಲ್ಲಿ ಕೋರಿದೆ.