ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಸರ್ಕಾರಿ ಮಹಿಳಾ ಕಾಲೇಜಿನೊಳಗೆ ಉಚಿತ ಊಟ ಪೂರೈಸಲು ಕಾಲೇಜಿನ ಆಡಳಿತ ಮಂಡಳಿ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅನುಮತಿ ನೀಡಿದೆ.ಸಮಾಜ ಸೇವಕ,ಬಿಜೆಪಿ ಮುಖಂಡ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್.ಬಿ.ರೆಡ್ಡಿ ಕಾರ್ಯಕ್ರಮ ನಿಮಿತ್ತ ಚಿಕ್ಕಬಳ್ಳಾಪುರ ಸರ್ಕಾರಿ ಮಹಿಳಾ ಕಾಲೇಜಿಗೆ ತೆರಳಿದ್ದಾಗ ಬಹಳಷ್ಟು ವಿದ್ಯಾರ್ಥಿಗಳು ಊಟವಿಲ್ಲದೆ ಹಸಿವಿನಲ್ಲೆ ಪಾಠಪ್ರವಚನ ಕೇಳುತಿದ್ದಾರೆಂದು ಸಿಬ್ಬಂದಿಯಿಂದ ಕೇಳಿಬಂದ ಹಿನ್ನಲೆಯಲ್ಲಿ ಅಂದಿನಿಂದಲೆ ಕಾಲೇಜು ವಿದ್ಯಾರ್ಥಿನೀಯರಿಗೆ ಊಚಿತ ಊಟ ನೀಡಲು ಮುಂದಾಗಿದ್ದರು.
ಆಡಳಿತ ಮಂಡಳಿ ಅನುಮತಿಆದರೆ ಕಾಲೇಜಿನ ಆಡಳಿತ ಮಂಡಳಿ ಕಾಲೇಜಿನ ಒಳಗಡೆ ಊಟ ವಿತರಣೆಗೆ ಅನುಮತಿ ನೀಡಿರಲಿಲ್ಲ. ಆದರೂ ಟ್ರಸ್ಟ್ ಅನ್ನದಾಸೋಹ ಯೋಜನೆಯನ್ನು ಕಾಲೇಜ ಹೊರಭಾಗದಲ್ಲಿ ಮುಂದುವರೆಸಿ, ನಾಲ್ಕು ತಿಂಗಳು ಯಶಸ್ವಿಯಾಗಿ ಪೂರೈಸಿತ್ತು. ಆದರೆ ಈಗ ಆಡಳಿತ ಮಂಡಳಿ ಕಾಲೇಜಿನೊಳಗೆ ಊಟ ಹಂಚಿಕಗೆ ಅನುಮತಿ ನೀಡಿದೆ.
ಚಿಕ್ಕಬಳ್ಳಾಪುರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ನಗರದಿಂದ ನಗರ ಹೊರವಲಯದ ಪ್ಲೈ ಓವರ್ ಬಳಿಗೆ ತನ್ನ ಸ್ವಂತ ಕಟ್ಟಡಕ್ಕೆ ವರ್ಗಾವಣೆಯಾದ ಮೇಲೆ ಅಲ್ಲಿಗೆ ಬಸ್ ವ್ಯವಸ್ಥೆ ಇಲ್ಲದೆ, ಬಸ್ಟಾಂಡ್ ನಿಂದ ಸುಮಾರು ಒಂದು ಕಿಮೀ ನಡೆದುಕೊಂಡೆ ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳಬೇಕಾಗಿದೆ.ಗ್ರಾಮೀಣ ವಿದ್ಯಾರ್ಥಿನಿಯರೇ ಇಲ್ಲಿ ಹೆಚ್ಚಾಗಿದ್ದಾರೆ. ಬೆಳಿಗ್ಗೆ ಬೇಗನೆ ಕಾಲೇಜಿಗೆ ಆಗಮಿಸುವ ಕಾರಣ ತಿಂಡಿ ತಿನ್ನದೆಯೆ ಬರವುದುು ಸಾಮಾನ್ಯ.ಊಟಕ್ಕೆ ಅನುಮತಿ ನಿರಾಕರಣೆ
ಇದನ್ನು ಅರಿತ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಕೂಡಲೆ ತೀರ್ಮಾನ ಮಾಡಿ ಟ್ರಸ್ಟ್ ನಿಂದಲೆ ಪ್ರತಿದಿನ ಮಧ್ಯಾಹ್ನದ ಬಿಸಿಯೂಟ ಊಚಿತವಾಗಿ ಕೊಡಲು ನಿರ್ಧರಿಸಿತು. ಇದಕ್ಕಾಗಿ ಎಲ್ಲವೂ ತಯಾರಾಗಿತ್ತು. ಆದರೆ ಇನ್ನೇನು ಊಟ ನೀಡಬೇಕು ಅನ್ನೋ ದಿನ ಯೂ ಟರ್ನ್ ಹೊಡೆದ ಆಡಳಿತ ಮಂಡಳಿ, ಮಧ್ಯಾಹ್ನದ ಊಟ ನೀಡಲು ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಕಾಲೇಜು ಯೂನಿರ್ವಸಿಟಿ ಅನುಮತಿ ಕೊಟ್ಟಿಲ್ಲ ಎಂದು ತಡೆಯೊಡ್ಡಿತು.ಊಟ ಕೊಡಿ ಅಂತ ಪುಸಲಾಯಿಸಿದ್ದ ಕೆಲ ಉಪನ್ಯಾಸಕರು ನಾಪತ್ತೆಯಾಗಿಬಿಟ್ಟರು. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಟ್ರಸ್ಟ್ ಕಾಲೇಜು ಕಾಂಪೌಂಡ್ ಮುಂದೆ ಒಂದು ಟೆಂಟ್ ಹಾಕಿ ಜನವರಿ 6 ರಿಂದ ಊಟ ನೀಡಲು ಪ್ರಾರಂಭಿಸಿತು. ಹೀಗೆ ಹಲವಾರು ಸವಾಲುಗಳ ಮಧ್ಯೆ ಊಟ ನೀಡಲು ಪ್ರಾರಂಭಿಸಿದ ಮಧ್ಯಾಹ್ನ ಬಿಸಿಯೂಟ ಯೋಜನೆ ನಾಲ್ಕು ತಿಂಗಳು ಯಶಸ್ವಿಯಾಗಿ ನಡೆದಿದೆ. ಈಗ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ಊಟವನ್ನ ಕಾಲೇಜು ಒಳಗೆ ನೀಡವಂತೆ ಅನುಮತಿ ನೀಡಿದ್ದಾರೆ ಎಂದು ಟ್ರಸ್ಟ್‌ನ ಸಂದೀಪ್.ಬಿ.ರೆಡ್ಡಿ ತಿಳಿಸಿದರು.
ಉಪನ್ಯಾಸರಿ, ಸಿಬ್ಬಂದಿಗೂ ಊಟಕೆಲ ವಿದ್ಯಾರ್ಥಿನಿಯರಿಗೆ ಊಟ ಮಾಡಬೇಕೆಂದು ಆಸೆಯಾಗುತಿದ್ದರು ಹೊರಗಡೆ ಯಾರಾದರೂ ನೋಡುತ್ತಾರೆ ಅಂತ ಹಸಿದ ಹೊಟ್ಟೆಯಲ್ಲೆ ಮನೆ ಕಡೆ ಹೆಜ್ಜೆಹಾಕುತ್ತಿದ್ದರು. ಈಗ ಒಳಗಡೆ ಊಟ ನೀಡಲು ಪ್ರಾರಂಭಿಸಿದಾಗಿನಿಂದ ಎಲ್ಲರೂ ಖುಷಿಯಾಗಿ ಊಟ ಮಾಡಲು ಮುಂದಾಗಿದ್ದಾರೆ. ವಿದ್ಯಾರ್ಥಿನಿಯರ ಜತೆಗೆ ಉಪನ್ಯಾಸಕರು, ಸಿಬ್ಬಂದಿಯೂ ನೆಮ್ಮದಿಯಾಗಿ ಊಟ ಮಾಡಿ ತಮ್ಮ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸುತ್ತಿದ್ದಾರೆಂದು ಕಾಲೇಜಿನ ಉಪನ್ಯಾಸಕಿ ಗೀತಾ ತಿಳಿಸಿದರು.