ಸಾರಾಂಶ
ಸಿದ್ದೇಶ್ವರ ಸ್ವಾಮಿಗಳ ತತ್ವಾದರ್ಶವನ್ನು ಯುವ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಕೈ ಕೆಸರಾದಾಗ ಮಾತ್ರ ಬಾಯಿ ಮೊಸರಾಗುತ್ತದೆ ಎಂದರೆ ಆಗಲ್ಲ, ಅದನ್ನು ಪಾಲಿಸಬೇಕು.
ಹುಬ್ಬಳ್ಳಿ:
ತಂದೆ, ತಾಯಿ ಕಲಿಸುವ ಸಂಸ್ಕಾರ, ಗುರು ಹಿರಿಯರು ಕಲಿಸುವ ವಿದ್ಯೆ, ಸಮಾಜ ಕಲಿಸುವ ಬದುಕುವ ಕಲೆ ಉತ್ತಮವಾಗಿಯೇ ಇರುತ್ತವೆ. ಇವನ್ನೆಲ್ಲ ನಾವು ಯಾವ ರೀತಿ ಸ್ವೀಕರಿಸುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ರೂಪಗೊಳ್ಳುತ್ತದೆ ಎಂದು ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಮತ್ತು ಬಿಜೆಪಿ ರಾಜ್ಯ ಘಟಕದ ರೈತಮೋರ್ಚಾ ಕಾರ್ಯದರ್ಶಿ ಬಸವರಾಜ ಕುಂದಗೋಳಮಠ ಹೇಳಿದರು.ನಗರದ ಕನಕದಾಸ ಶಿಕ್ಷಣ ಸಮಿತಿಯ ಡಾ. ಬಿ.ಎಫ್. ದಂಡಿನ ಸಭಾಂಗಹಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ 2025-26ನೇ ಸಾಲಿನ ವಾರ್ಷಿಕ ಚಟುವಟಿಕೆಗಳು ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಸಿದ್ದೇಶ್ವರ ಸ್ವಾಮಿಗಳ ತತ್ವಾದರ್ಶವನ್ನು ಯುವ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಕೈ ಕೆಸರಾದಾಗ ಮಾತ್ರ ಬಾಯಿ ಮೊಸರಾಗುತ್ತದೆ ಎಂದರೆ ಆಗಲ್ಲ, ಅದನ್ನು ಪಾಲಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ರವೀಂದ್ರನಾಥ ದಂಡಿನ, ಪದವಿಗೆ ಬಂದಮೇಲೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನೀವು ಏನು ಆಗಬೇಕೆಂದಿದ್ದೀರಿ ಅದನ್ನು ಶ್ರಮದಿಂದ ಸಾಧಿಸಿ ತೋರಿಸಬೇಕು. ಮುಂದೆ ಯಾವುದೇ ಕ್ಷೇತ್ರದಲ್ಲಿ ನೀವು ಇದ್ದರೂ ಆ ಕ್ಷೇತ್ರದಲ್ಲಿ ಗಮನವಿಟ್ಟು ಸೇವೆ ಮಾಡಬೇಕು ಎಂದು ಹೇಳಿದರು.
ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಮಾಲತೇಶ ಶ್ಯಾಗೂಟಿ, ಪ್ರಾಚಾರ್ಯ ಡಾ. ಬಸವರಾಜ ಮಡ್ಲಿ, ಮಹದೇವ ಧರೆಣ್ಣನವರ, ಪ್ರಾಚಾರ್ಯ ಶರಣು ಅಣ್ಣಿಗೇರಿ ಸೇರಿದಂತೆ ಹಲವರಿದ್ದರು. ಪ್ರೊ. ಬೀರೇಶ ತಿರಕಪ್ಪನವರ ಸ್ವಾಗತಿಸಿದರು. ಡಾ. ಸವಿತಾ ಸಿದ್ದುನವರ ನಿರೂಪಿಸಿದರು. ಪ್ರೊ. ಗಾಯತ್ರಿ ಹೊಸಮನಿ (ರಾಮನಗೌಡ್ರ) ವಂದಿಸಿದರು.