ಉಡುಪಿ: ಶತಮಾನ ಎನ್ನುವುದು ಅತ್ಯಂತ ಮಹತ್ವದ ಕಾಲಘಟ್ಟ. ಆದರೆ ಶತಮಾನದ ನಂತರವೂ ಒಬ್ಬ ವ್ಯಕ್ತಿಯಿಂದ ಇತರರು ಪ್ರೇರಣೆ ಪಡೆಯಲು ಸಾಧ್ಯವಿದೆ ಎಂದರೆ ಅದು ಅವರ ಜೀವನದ ಸಾಧನೆಗೆ ಹಿಡಿದ ಕನ್ನಡಿ. ಗುಜ್ಜಾಡಿ ನರಸಿಂಹ ನಾಯಕ್, ಅವರು ಕೇವಲ ಚಿನ್ನದ ವ್ಯಾಪಾರ ಅಷ್ಟೇ ಮಾಡದೆ, ಸಮಾಜಮುಖಿಯಾಗಿ ಚಿನ್ನದಂತಹ ಜೀವನ ನಡೆಸಿದ್ದರು ಎಂದು ಆರ್‌.ಎಸ್‌.ಎಸ್. ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.ಅವರು ಶನಿವಾರ, ಸ್ವರ್ಣೋದ್ಯಮಿ ದಿವಂಗತ ಗುಜ್ಜಾಡಿ ನರಸಿಂಹ ನಾಯಕ್ ಅವರ ಜನ್ಮಶತಮಾನೋತ್ಸವದ ನೆನಪಿನಲ್ಲಿ ಗುಜ್ಜಾಡಿ ನರಸಿಂಹ ನಾಯಕ್ ಅವರ ನೆನಪುಗಳು ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು‌.​ಲೆಕ್ಕಪರಿಶೋಧಕ ಕೆ. ಉಲ್ಲಾಸ್ ಕಾಮತ್ ಮಾತನಾಡಿದರು, ವಿಶ್ವ ಹಿಂದೂ ಪರಿಷತ್ತಿನ ಎಂ.ಎನ್. ನಾಗರಾಜ್ ಹಾಗೂ ಎಒಜೆ ಮೀಡಿಯಾದ ಸುಮೇಶ್ ವಧೇರಾ ಇದ್ದರು.​ನಗರಸಭೆಯ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ್ ನಾಯಕ್ ನಿರೂಪಿಸಿದರು. ಪುಸ್ತಕದ ಲೇಖಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಗುಜ್ಜಾಡಿ ರಾಮದಾಸ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.