ಶ್ರದ್ಧೆ, ಶ್ರಮದಿಂದ ವ್ಯಕ್ತಿತ್ವ ಸಮೃದ್ಧ: ರಾಮನಗೌಡ

| Published : Jan 19 2024, 01:46 AM IST

ಸಾರಾಂಶ

ನಗರದ ವಿ.ಭ.ದರಬಾರ ಮಹಾವಿದ್ಯಾಲಯದಲ್ಲಿ ಪಿಯು ವಿದ್ಯಾರ್ಥಿಗಳಿಗೆ ಶುಭಕೋರುವ ಕಾರ್ಯಕ್ರಮದಲ್ಲಿ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಹೇಳಿಕೆ.

ಕನ್ನಡಪ್ರಭ ವಾರ್ತೆ ವಿಜಯಪುರ

ವಿದ್ಯಾರ್ಥಿಗಳು ಓದಿನ ಮೇಲೆ ಶ್ರದ್ಧೆ, ಬದುಕಿನಲ್ಲಿ ಶಿಸ್ತು ಹಾಗೂ ಶ್ರಮ ಪಡುವ ಮೂಲಕ ಯಶಸ್ಸು ಕಂಡುಕೊಳ್ಳಬೇಕು. ಶ್ರದ್ಧೆ, ಶಿಸ್ತು, ಶ್ರಮದಿಂದ ವ್ಯಕ್ತಿತ್ವ ಸಮೃದ್ಧವಾಗಿ ರೂಪುಗೊಳ್ಳುತ್ತದೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಹೇಳಿದರು.

ನಗರದ ವಿ.ಭ.ದರಬಾರ ಮಹಾವಿದ್ಯಾಲಯದಲ್ಲಿ ಪಿಯು ವಿದ್ಯಾರ್ಥಿಗಳಿಗೆ ಶುಭಕೋರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಶಸ್ಸು ಸುಲಭವಾಗಿ ದೊರಕುವುದಿಲ್ಲ. ಸುದೀರ್ಘವಾದ ತಪಸ್ಸಿನಂತಹ ಪ್ರಯತ್ನದಿಂದ ಯಶಸ್ಸು ಎಂಬ ಫಲ ದೊರಕುತ್ತದೆ ಎಂದರು. ಬಡವನಾಗಿ ಜನಿಸುವುದು ತಪ್ಪಲ್ಲ. ಆದರೆ, ಬಡವನಾಗಿ ಸಾಯುವುದು ತಪ್ಪು, ಹೀಗಾಗಿ ಸಾತ್ವಿಕ ಭಾವ, ಸಂಸ್ಕಾರಗಳಿಂದ ಕೂಡಿದ ಜೀವನವನ್ನು ನಡೆಸಿ ಎಂದರು.

ಡಿಡಿಪಿಯು ಡಾ.ಸಿ.ಕೆ.ಹೊಸಮನಿ ಮಾತನಾಡಿ, ಪ್ರಯತ್ನಶೀಲರಾಗಿ ಉತ್ತಮ ಫಲಿತಾಂಶದೊಂದಿಗೆ ಉತ್ತಮ ಬದುಕನ್ನು ಕಟ್ಟಿಕೊಳಿ, ಅಂಕಗಳಿಕೆಯ ಜೊತೆಗೆ ಜ್ಞಾನ ಸಂಪಾದನೆಯೂ ಅತ್ಯಂತ ಅಗತ್ಯ, ಜ್ಞಾನ ಯಾರೂ ಕಸಿದುಕೊಳ್ಳಲಾರದ ದಿವ್ಯ ಸಂಪತ್ತು ಎಂದು ತಿಳಿಸಿದರು.

ವಿದ್ಯಾವರ್ದಕ ಸಂಘದ ಸಮನ್ವಯಾಧಿಕಾರಿ ಡಾ.ವಿನಾಯಕ ಬಿ.ಗ್ರಾಮಪುರೋಹಿತ ಮಾತನಾಡಿದರು. ಆಡಳಿತ ಮಂಡಳಿ ನಿರ್ದೇಶಕ ವಿಶಾಲ ದರಬಾರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಎಸ್.ಎಸ್.ಗೌರಿ, ನಾಗರಾಜ ಎ, ಬಿ.ಎಚ್.ಕುಲಕರ್ಣಿ, ಕೆ.ಡಿ.ಚವ್ಹಾಣ, ಆನಂದ ಸಂಗೋಗಿ, ವೈ.ಎಚ್.ಗಣೇಶ, ವಿದ್ಯಾರ್ಥಿ ಪರಿಷತ್ ಪ್ರಧಾನ ಕಾರ್ಯದರ್ಶಿ ಕುಮಾರ ಸೋಮನಾಥ ಸಾಲೋಟಗಿ ಮುಂತಾದವರು ಇದ್ದರು.

ಪ್ರಾಚಾರ್ಯ ಟಿ.ಆರ್.ಕುಲಕರ್ಣಿ ಸ್ವಾಗತಿಸಿದರು. ಡಾ.ವೇದನಿಧಿ ಆಚಾರ್ಯ ಕುಲಕರ್ಣಿ ನಿರೂಪಿಸಿದರು. ಎ.ಎಸ್.ಕುಲಕರ್ಣಿ ವಾರ್ಷಿಕ ವರದಿ ವಾಚಿಸಿದರು. ಸಂಜೀವ ಕುಲಕರ್ಣಿ ಕ್ರೀಡಾ ವರದಿ ವಾಚಿಸಿದರು. ಗುರುರಾಜ ಕುಲಕರ್ಣಿ ಅತಿಥಿಗಳನ್ನು ಪರಿಚಯಿಸಿದರು.