ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದ ಲಾನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಪಿಇಟಿ ಟಾಪ್ ಸರ್ವ್ ಅಕಾಡೆಮಿಯ ಬಾಲಕ ಹಾಗೂ ಬಾಲಕಿಯರ ತಂಡ ಒಂದು ಚಿನ್ನ, 10 ಬೆಳ್ಳಿ ಸೇರಿ ಒಟ್ಟು 16 ಪದಕಗಳನ್ನು ಗಳಿಸಿದೆ.ಬಾಲಕಿಯರ ಸಿಂಗಲ್ಸ್‌ನಲ್ಲಿ ಉನ್ನತಿ ಮುರಳೀಧರ್ ಅವರು ಬೆಂಗಳೂರಿನ ಕಾಶ್ವಿ ವೆಂಕಟ ಅವರನ್ನು 6-2, 6-1 ಅಂತರದಲ್ಲಿ ಮಣಿಸಿ ಚಿನ್ನದ ಪದಕ ಪಡೆದಿದ್ದಾರೆ. ಬಾಲಕಿಯರ ಡಬಲ್ಸ್‌ನಲ್ಲಿ ಬಿ.ಎನ್.ಗ್ರಂಥನ ಎರಡು ಬೆಳ್ಳಿಯ ಪದಕ, ಬಾಲಕರ ಸಿಂಗಲ್ಸ್‌ನಲ್ಲಿ ವಚನ್ ಪ್ರಸಾದ್ ಅವರು ಬೆಂಗಳೂರಿನ ತನುಶ್ ವಿರುದ್ಧ ಗೆದ್ದು ಕಂಚಿನ ಪದಕ ಪಡೆದಿದ್ದಾರೆ.
ಬಾಲಕರ ಡಬಲ್ಸ್‌ನಲ್ಲಿ ಎರಡು ಬೆಳ್ಳಿಯ ಪದಕ ಪಡೆದಿದ್ದು, ಮಿನಿ ಒಲಿಂಪಿಕ್ಸ್ ಕ್ರೀಡೆಯಲ್ಲಿ ಮಂಡ್ಯ ಲಾನ್ ಟೆನ್ನಿಸ್ ತಂಡವು 16 ಪದಕದೊಂದಿಗೆ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.ಹಾಗೆಯೇ ಗುಲ್ಬರ್ಗಾದಲ್ಲಿ ನಡೆದ ಎಸ್‌ಜಿಎಫ್‌ಐ ಯು-17 ಮತ್ತು ಯು-14 ವರ್ಷದ ಬಾಲಕ ಹಾಗೂ ಬಾಲಕಿಯರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಮಂಡ್ಯ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕ್ರೀಡಾಪಟುಗಳಿಗೆ ಅಭಿನಂದನೆ:ಡಿಸೆಂಬರ್‌ನಲ್ಲಿ ರಾಜಸ್ಥಾನ ಹಾಗೂ ಹರಿಯಾಣದಲ್ಲಿ ನಡೆಯಲಿರುವ ನ್ಯಾಷನಲ್ ಸ್ಕೂಲ್ ಗೇಮ್‌ಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ಡಿ.ಮನೀಶ್, ವಚನ್ ಪ್ರಸಾದ್, ವಿ.ಎಂ. ಉನ್ನತಿ, ಎಂ.ಎನ್.ಮಧುಶ್ರೀ, ರಚನಾಗೌಡ, ಪಿ.ಲಿಖಿತ್, ಡಿ.ಯುಕ್ತಶ್ರೀ, ಎಸ್.ಜೀವಿತ್ ಹಾಗೂ ಮಿನಿ ಒಲಿಂಪಿಕ್ಸ್ ತಂಡದ ಉನ್ನತಿ ವಿ. ಮುರುಳಿಧರ್, ಬಿ.ಎನ್. ಗ್ರಂಥನ, ಅಮೈರಾ ಜಿ. ಆನಂದ್, ಡಿ.ಯುಕ್ತಶ್ರೀ, ಆರ್.ವಿ. ಮಿತ, ಎನ್.ರಚನ್, ವಚನ್ ಪ್ರಸಾದ್, ಧಾರ್ಮಿಕ ಎಂ.ಗೌಡ, ಆರ್ಯನ್ ಕವನಗೌಡ, ದುಶ್ಯಂತ್ ಹಾಗೂ ತಂಡದ ಕೋಚ್ ಎಂ.ಎಸ್.ಮಂಜುನಾಥ್, ತಂಡದ ಮ್ಯಾನೇಜರ್ ಸಮೀಕ್ಷ ಗುರುಆನಂದ್ ಅವರನ್ನು ಪಿ.ಇ.ಟಿ. ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್ ಅವರು ಅಭಿನಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))