ಸಾರಾಂಶ
ಹಲವು ವರ್ಷಗಳ ಹೋರಾಟದ ನಂತರ ಅರಣ್ಯ ಅತಿಕ್ರಮಣದಾರರಿಗೆ ಅರಣ್ಯ ಭೂಮಿ ಹಕ್ಕು ಸಿಕ್ಕಿಲ್ಲ. ಈಗಿನ ಕಾನೂನಿನಲ್ಲಿ ಅರಣ್ಯ ಭೂಮಿ ಹಕ್ಕು ನೀಡಲು ಅಡ್ಡಿಯಾಗಿರುವ 75 ವರ್ಷ ಅಥವಾ ಮೂರು ತಲೆಮಾರಿನ ದಾಖಲೆ ನೀಡಬೇಕೆನ್ನುವ ಮಾನದಂಡ ತೆಗೆದು ಹಾಕಬೇಕು.
ಅಂಕೋಲಾ:
ಅರಣ್ಯ ಭೂಮಿ ಹಕ್ಕು ನೀಡಲು ಅಡ್ಡಿಯಾಗಿರುವ 75 ವರ್ಷ ಅಥವಾ ಮೂರು ತಲೆಮಾರಿನ ದಾಖಲೆ ನೀಡಬೇಕೆನ್ನುವ ಮಾನದಂಡ ತೆಗೆದು ಹಾಕಲು ಅಧಿವೇಶನದಲ್ಲಿ ಕೈಗೊಂಡ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಈ ನಿರ್ಣಯಕ್ಕೆ ಕೂಡಲೇ ಕೇಂದ್ರ ಸರ್ಕಾರ ಅಂಗೀಕಾರ ನೀಡುವಂತೆ ಲಕ್ಷಾಂತರ ರೈತರಿಂದ ಮನವಿ ಸಲ್ಲಿಸುವ ಅಭಿಯಾನವನ್ನು ಕರ್ನಾಟಕ ಪ್ರಾಂತ ರೈತ ಸಂಘ ಹಮ್ಮಿಕೊಂಡಿರುವುದಾಗಿ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳ ಹೋರಾಟದ ನಂತರ ಅರಣ್ಯ ಅತಿಕ್ರಮಣದಾರರಿಗೆ ಅರಣ್ಯ ಭೂಮಿ ಹಕ್ಕು ಸಿಕ್ಕಿಲ್ಲ. ಈಗಿನ ಕಾನೂನಿನಲ್ಲಿ ಅರಣ್ಯ ಭೂಮಿ ಹಕ್ಕು ನೀಡಲು ಅಡ್ಡಿಯಾಗಿರುವ 75 ವರ್ಷ ಅಥವಾ ಮೂರು ತಲೆಮಾರಿನ ದಾಖಲೆ ನೀಡಬೇಕೆನ್ನುವ ಮಾನದಂಡ ತೆಗೆದು ಹಾಕಲು ಕರ್ನಾಟಕ ಪ್ರಾಂತ ರೈತ ಸಂಘ ನಿರಂತರವಾಗಿ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಹೋರಾಟ ಮಾಡಿಕೊಂಡು ಬಂದಿದೆ. ನಮ್ಮ ಹೋರಾಟದ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಬೇಡಿಕೆಯ ಅರಿವಾಗಿ ಕಳೆದ ವಿಧಾನಸಭಾ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಂಡು 75 ವರ್ಷ ಮಾನದಂಡ ವಾಪಸ್ ಪಡೆಯಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ ಎಂದರು.
ಈ ನಿರ್ಣಯಕ್ಕೆ ಕೂಡಲೇ ಅಂಗೀಕಾರ ನೀಡಬೇಕೆಂದು ರಾಜ್ಯದ ಅರಣ್ಯ ಅತಿಕ್ರಮಣದಾರರಿಂದ ಪ್ರಧಾನಿಗಳಿಗೆ ಲಕ್ಷಾಂತರ ರೈತರಿಂದ ಮನವಿ ಸಲ್ಲಿಸುವ ಅಭಿಯಾನವನ್ನು ರೈತ ಸಂಘ ಹಮ್ಮಿಕೊಂಡಿದೆ. ಗ್ರಾಮಾಂತರ ಪ್ರದೇಶದಲ್ಲಿ ಸಭೆಗಳನ್ನು ನಡೆಸಿ ರೈತರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದು ನಾಯಕ ಹೇಳಿದ್ದಾರೆ.