ಪಶು ಆಸ್ಪತ್ರೆ ಮಂಜೂರಾತಿಗೆ ಆಗ್ರಹಿಸಿ ಮನವಿ

| Published : Aug 31 2025, 02:00 AM IST

ಸಾರಾಂಶ

ಈಗಿನ ವ್ಯವಸ್ಥೆಯಲ್ಲಿ ಜಾನುವಾರುಗಳಿಗೆ ಆರೋಗ್ಯದ ಸಮಸ್ಯೆ ಎದುರಾದಾಗ ಅವುಗಳಿರುವ ಸ್ಥಳಗಳಿಂದ ಜಾನುವಾರು ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಗೆ ತೆಗೆದುಕೊಂಡು ಬರಬೇಕು

ರಾಣಿಬೆನ್ನೂರು: ನಗರಕ್ಕೆ ಎರಡನೇ ಪಶು ಆಸ್ಪತ್ರೆ ಮಂಜೂರಾತಿ ಮಾಡುವಂತೆ ಆಗ್ರಹಿಸಿ ತಾಲೂಕು ರೈತ ಸಂಘಟನೆ ಮತ್ತು ಸದೃಢ ಕರ್ನಾಟಕ ನಿರ್ಮಾಣ ವೇದಿಕೆಯ ಪದಾಧಿಕಾರಿಗಳು ಶನಿವಾರ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ನಗರದ ಕುರುಬಗೇರಿ ಓಣಿಯಲ್ಲಿ ಹೆಚ್ಚಿನ ರೈತಾಪಿ ವರ್ಗಗಳಿದ್ದು, ಜಾನುವಾರು ಸಾಕಾಣಿಕೆ ಜೀವನಕ್ಕೆ ಆಧಾರವಾಗಿದೆ. ಈಗಿನ ವ್ಯವಸ್ಥೆಯಲ್ಲಿ ಜಾನುವಾರುಗಳಿಗೆ ಆರೋಗ್ಯದ ಸಮಸ್ಯೆ ಎದುರಾದಾಗ ಅವುಗಳಿರುವ ಸ್ಥಳಗಳಿಂದ ಜಾನುವಾರು ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಗೆ ತೆಗೆದುಕೊಂಡು ಬರಬೇಕು. ಆದರೆ ನಗರದಲ್ಲಿನ ವಾಹನಗಳ ಸಂಚಾರ ದಟ್ಟಣೆ ಮತ್ತು ಅವುಗಳ ಜೋರಾದ ಶಬ್ದಕ್ಕೆ ಜಾನುವಾರುಗಳು ಹೆದರಿ ಮನಬಂದಂತೆ ಓಡಿ ಅಪಘಾತಕ್ಕೆ ತುತ್ತಾದ ಉದಾಹರಣೆಗಳಿವೆ. ಆದ್ದರಿಂದ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕುರುಬಗೇರಿ ಓಣಿಯಲ್ಲಿಯೇ ಸೂಕ್ತವಾದ ಜಾಗೆ ಪರಿಶೀಲಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರಕ್ಕೆ ಮತ್ತೊಂದು ಪಶು ಆಸ್ಪತ್ರೆ ಮಂಜೂರ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮಂಜುನಾಥ ಗುಡ್ಡಣ್ಣನವರ, ರಾಜೇಶ್ ಅಂಗಡಿ, ಮಂಜುನಾಥ ಸಂಭೋಜಿ, ನೀಲಪ್ಪ ಕಸವಾಳ, ರಾಘವೇಂದ್ರ ತ್ರಾಸದ, ಬಸವರಾಜ ಮೇಗಳಗೇರಿ, ತಿಪ್ಪೇಶ ಮತ್ತಿತರರಿದ್ದರು.