ಸಾರಾಂಶ
ನಗರದ ಮೊದಲ ರೈಲ್ವೆ ಗೇಟ್ ಬಳಿ ಬ್ಯಾರಿಕೇಡ್ ತೆಗೆದು ಟ್ರಾಫಿಕ್ ಸಿಗ್ನಲ್ ಅಳವಡಿಸಬೇಕು ಎಂದು ಒತ್ತಾಯಿಸಿ ಸಮಾಜ ಸೇವಕರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಮೊದಲ ರೈಲ್ವೆ ಗೇಟ್ ಬಳಿ ಬ್ಯಾರಿಕೇಡ್ ತೆಗೆದು ಟ್ರಾಫಿಕ್ ಸಿಗ್ನಲ್ ಅಳವಡಿಸಬೇಕು ಎಂದು ಒತ್ತಾಯಿಸಿ ಸಮಾಜ ಸೇವಕರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.2014 ರಿಂದ ಮೊದಲ ರೈಲ್ವೆ ಗೇಟ್ ಬಳಿ ಸಂಪರ್ಕ ರಸ್ತೆಯನ್ನು ಬ್ಯಾರಿಕೇಡ್‌ಗಳಿಂದ ನಿರ್ಬಂಧಿಸಲಾಗಿದೆ. ಇದರಿಂದಾಗಿ ದಕ್ಷಿಣ ಮತ್ತು ಉತ್ತರ ತಿಲಕವಾಡಿಯ ನಡುವಿನ ಸಂಪರ್ಕ ಕಡಿತಗೊಂಡಿದೆ. ಇದು ಸಾರ್ವಜನಿಕರು ಮತ್ತು ವಾಹನಗಳಿಗೆ ತೀರಾ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಬ್ಯಾರಿಕೇಡ್‌ಗಳನ್ನು ತೆಗೆದು ಹಾಕಿ ಸಿಗ್ನಲ್ ಅಳವಡಿಸಬೇಕು ಎಂದು ಒತ್ತಾಯಿಸಿದರು.ಕಳೆದ ಹನ್ನೊಂದು ವರ್ಷಗಳಿಂದ ನಾವು ಈ ವಿಷಯದ ಬಗ್ಗೆ ಸಂಭದಪಟ್ಟ ಅಧಿಕಾರಿಗಳಿಗೆ ಸಂಪರ್ಕಿಸುತ್ತಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ನಗರ ಪೊಲೀಸ್ ಆಯುಕ್ತರು ಆದಷ್ಟು ಬೇಗ ಸಿಗ್ನಲ್ ಅಳವಡಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ದೀಪಕ್ ಗವಂಡಲ್ಕರ್, ಮನೋಹರ ರೋಕಡೆ, ಅಜಿತ್ ನಾಯಕ ಮತ್ತು ಅನಂತ ಪಾಟೀಲ ಉಪಸ್ಥಿತರಿದ್ದರು.