ಕಾಲುಬಾಯಿ ರೋಗದ ಲಸಿಕೆ ಹಾಕಿಸಲು ಮನವಿ

| Published : Apr 03 2024, 01:37 AM IST

ಸಾರಾಂಶ

ಇಳಕಲ್ಲ: ಬೇಸಿಗೆಯಲ್ಲಿ ಆಕಳು, ಎತ್ತು ಮತ್ತು ಕರುಗಳಿಗೆ ಕಾಲುಬಾಯಿ ಬೇನೆಗೆ ತಪ್ಪದೆ ಲಸಿಕೆ ಹಾಕಿಸಬೇಕೆಂದು ತಾಪಂ ಇಒ ಮುರಳೀಧರ ದೇಶಪಾಂಡೆ ಮನವಿ ಮಾಡಿದ್ದಾರೆ.

ಇಳಕಲ್ಲ: ಬೇಸಿಗೆಯಲ್ಲಿ ಆಕಳು, ಎತ್ತು ಮತ್ತು ಕರುಗಳಿಗೆ ಕಾಲುಬಾಯಿ ಬೇನೆ ಬಂದಿರುವುದರಿಂದ ಸಾಕಷ್ಟು ತೊಂದರೆ ಆಗಿದೆ. ಅಲ್ಲದೆ, ಕೆಲ ಜಾನುವಾರು ಮೃತಪಟ್ಟಿವೆ. ಕಾರಣ ಮನೆಯಲ್ಲಿರುವ ದನಗಳಿಗೆ ಲಸಿಕೆ ಹಾಕಿಸಬೇಕೆಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ ರೈತರಲ್ಲಿ ಮನವಿ ಮಾಡಿದ್ದಾರೆ.

ತಾಲೂಕು ಪಶು ಆಸ್ಪತ್ರೆ ವೈದ್ಯಾಧಿಕಾರಿಗಳಿಂದ ಕಾಲುಬಾಯಿ ಬೇನೆ ವಿರುದ್ಧ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಏ.3,4ರಂದು ತಾಲೂಕಿನ ಎಲ್ಲ ರೈತರು ತಪ್ಪದೇ ದನಕರುಳಿಗೆ ಲಸಿಕೆ ಹಾಕಿಸಿ ಗೋವುಗಳನ್ನು ರಕ್ಷಿಸಬೇಕು ಎಂದು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.