ಸಾರಾಂಶ
ಹಲವು ವರ್ಷಗಳಿಂದ ಸಮಾಜದ ಮುಖಂಡರ ನೇತೃತ್ವದಲ್ಲಿ ಮಡಿವಾಳ ಮಾಚೇದೇವರ ಟ್ರಸ್ಟ್ ನೋಂದಾವಣೆ ಮಾಡಿಸಿಕೊಂಡು ಸಮಾಜದ ಬಡ ಜನರ ಅಭಿವೃದ್ಧಿಯೊಂದಿಗೆ ಸಮಾಜದ ಸಂಘಟನೆ ಮಾಡಿಕೊಂಡು ಬರಲಾಗಿದೆ. ಸಮಾಜದ ಕುಟುಂಬದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಇತರೆ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮಡಿವಾಳ ಸಮುದಾಯ ಭವನ ನಿರ್ಮಾಣಕ್ಕೆ ಪಟ್ಟಣ ಪುರಸಭಾ ವ್ಯಾಪ್ತಿಯಲ್ಲಿ ನಿವೇಶನ ನೀಡುವಂತೆ ಮಡಿವಾಳ ಸಮಾಜದ ಮುಖಂಡರು ಮುಖ್ಯಾಧಿಕಾರಿ ಹಾಗೂ ಸದಸ್ಯರಿಗೆ ಮನವಿ ಪತ್ರ ನೀಡಿದರು.ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಎಂ.ಜೆ.ಸಂಜೀವಯ್ಯ ನೇತೃತ್ವದಲ್ಲಿ ಸಮಾಜದ ಪದಾಧಿಕಾರಿಗಳು ಪಟ್ಟಣದ ಪುರಸಭೆ ಕಚೇರಿಗೆ ಆಗಮಿಸಿ ಪುರಸಭೆ ಸದಸ್ಯರು ಹಾಗೂ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು.
ಹಲವು ವರ್ಷಗಳಿಂದ ಸಮಾಜದ ಮುಖಂಡರ ನೇತೃತ್ವದಲ್ಲಿ ಮಡಿವಾಳ ಮಾಚೇದೇವರ ಟ್ರಸ್ಟ್ ನೋಂದಾವಣೆ ಮಾಡಿಸಿಕೊಂಡು ಸಮಾಜದ ಬಡ ಜನರ ಅಭಿವೃದ್ಧಿಯೊಂದಿಗೆ ಸಮಾಜದ ಸಂಘಟನೆ ಮಾಡಿಕೊಂಡು ಬರಲಾಗಿದೆ. ಸಮಾಜದ ಕುಟುಂಬದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಇತರೆ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.ಸಮಾಜಮುಖಿ ಕಾರ್ಯಕ್ರಮಗಳ ರೂಪುರೇಷೆಗಳ ನಡೆಸಲು ಸ್ವಂತ ಕಟ್ಟಡದ ಸಮಾದಾಯ ಭವನದ ಅಗತ್ಯವಿದೆ. ಈಗಾಗಲೇ ತಹಸೀಲ್ದಾರ್ ಕಚೇರಿಗೂ ಮನವಿ ಮಾಡಿದ್ದು, ಪುರಸಭಾ ವ್ಯಾಪ್ತಿಯಲ್ಲಿ ನಮಗೆ ಒಂದು ನಿವೇಶನ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಪುರಸಭಾ ಮುಖ್ಯಾಧಿಕಾರಿ ರಾಜಣ್ಣ, ಪುರಸಭಾ ಸದಸ್ಯರಾದ ಎಸ್.ಪ್ರಕಾಶ್, ಗಂಜಾಂ ಶಿವು, ಎಸ್. ನಂದೀಶ್, ಕೃಷ್ಣಪ್ಪ, ನರಸಿಂಹೇಗೌಡ, ಚೈತ್ರ ಚಂದ್ರಶೇಖರ್ ಇತರರಿಗೆ, ಸಮಾಜ ಪ್ರಧಾನ ಕಾರ್ಯದರ್ಶಿ ಜಿ.ಎಸ್ ಮಂಜುನಾಥ್, ಗೌರವಾಧ್ಯಕ್ಷ ನಾರಾಯಣಪ್ಪ, ಉಪಾದ್ಯಕ್ಷ ಚಂದ್ರು, ಖಜಾಂಚಿ ಎಂ.ಪಿ ಉಮೇಶ್, ಜಯರಾಮು, ಎಲ್.ಎಸ್ ಪ್ರದೀಪ್‌ಕುಮಾರ, ಸುರೇಶ್, ಪ್ರಕಾಶ್, ಮಹೇಶ್, ದಾಸು, ಶ್ರೀಕಾಂತ್ ಇತರರು ಮನವಿ ಪತ್ರ ಸಲ್ಲಿಸಿದರು.