ಸಾರಾಂಶ
ನಗರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರು ಅನಾರೋಗ್ಯಕ್ಕೆ ಒಳಗಾದ ವೇಳೆ ಪರಿಹಾರ ನೀಡುವ ಉದ್ದೇಶದಿಂದ ನಗರಸಭೆ ಪತ್ರಕರ್ತರ ಆರೋಗ್ಯ ನಿಧಿ ಯೋಜನೆ ಅನುಷ್ಠಾನಗೊಳಿಸಿದೆ. ಯೋಜನೆಗಾಗಿ ಕಳೆದ ಸಾಲಿನ ಆಯವ್ಯಯದಲ್ಲಿ 3 ಲಕ್ಷ ರು. ಹಣ ಮೀಸಲಿಡಲಾಗಿತ್ತು. ಮುಂಬರುವ 2025-26ನೇ ಸಾಲಿನ ಆಯವ್ಯಯದಲ್ಲಿ 5 ಲಕ್ಷ ರು. ಮೀಸಲಿಡಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಪತ್ರಕರ್ತರಿಗಾಗಿ ನಗರಸಭೆ ಅನುಷ್ಠಾನಗೊಳಿಸಿರುವ ಆರೋಗ್ಯ ನಿಧಿ ಯೋಜನೆ ಅನುದಾನವನ್ನು 3 ಲಕ್ಷದಿಂದ 5 ಲಕ್ಷ ರು.ಗಳಿಗೆ ಹೆಚ್ಚಿಸುವಂತೆ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಹಾಗೂ ಆಯುಕ್ತೆ ಯು.ಪಿ.ಪಂಪಶ್ರೀ ಅವರಿಗೆ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮನವಿ ಸಲ್ಲಿಸಲಾಯಿತು.ನಗರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರು ಅನಾರೋಗ್ಯಕ್ಕೆ ಒಳಗಾದ ವೇಳೆ ಪರಿಹಾರ ನೀಡುವ ಉದ್ದೇಶದಿಂದ ನಗರಸಭೆ ಪತ್ರಕರ್ತರ ಆರೋಗ್ಯ ನಿಧಿ ಯೋಜನೆ ಅನುಷ್ಠಾನಗೊಳಿಸಿದೆ. ಯೋಜನೆಗಾಗಿ ಕಳೆದ ಸಾಲಿನ ಆಯವ್ಯಯದಲ್ಲಿ 3 ಲಕ್ಷ ರು. ಹಣ ಮೀಸಲಿಡಲಾಗಿತ್ತು. ಮುಂಬರುವ 2025-26ನೇ ಸಾಲಿನ ಆಯವ್ಯಯದಲ್ಲಿ 5 ಲಕ್ಷ ರು. ಮೀಸಲಿಡಬೇಕು ಹಾಗೂ ಪರಿಹಾರ ವಿತರಣೆಗೆ ಇರುವ ನಿಬಂಧನೆಗಳನ್ನು ಸರಳಗೊಳಿಸುವಂತೆ ಮನವಿ ಮಾಡಲಾಯಿತು.
ಮನವಿ ಸ್ವೀಕರಿಸಿದ ಅಧ್ಯಕ್ಷ ಎಂ.ವಿ.ಪ್ರಕಾಶ್, ಮನವಿಗೆ ಸ್ಪಂದಿಸುವ ಭರವಸೆ ನೀಡಿದರು. ಈ ವೇಳೆ ನಗರಸಭೆ ಉಪಾಧ್ಯಕ್ಷ ಅರುಣ್ ಕುಮಾರ್, ಮಾಜಿ ಅಧ್ಯಕ್ಷ ಎಚ್. ಎಸ್.ಮಂಜು, ಲೆಕ್ಕ ಅಧೀಕ್ಷಕ ಮಂಜುನಾಥ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ನವೀನ್ ಕುಮಾರ್, ರಾಜ್ಯ ಕಾರ್ಯದರ್ಶಿ ಕೆರಗೋಡು ಸೋಮಶೇಖರ್, ಮಾಜಿ ಅಧ್ಯಕ್ಷರಾದ ಕೆ.ಸಿ.ಮಂಜುನಾಥ್, ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ್, ಖಜಾಂಚಿ ನಂಜುಂಡಸ್ವಾಮಿ, ಬಾಲಕೃಷ್ಣ ಮತ್ತಿತರರಿದ್ದರು.