ಸರ್ವಾಧ್ಯಕ್ಷರಾಗಿ ದಲಿತ ಸಾಹಿತಿ ಆಯ್ಕೆ ಮಾಡಲು ಮನವಿ

| Published : Oct 25 2024, 01:06 AM IST

ಸರ್ವಾಧ್ಯಕ್ಷರಾಗಿ ದಲಿತ ಸಾಹಿತಿ ಆಯ್ಕೆ ಮಾಡಲು ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮದಲ್ಲಿ ನವೆಂಬರ್ ತಿಂಗಳಲ್ಲಿ ಹಮ್ಮಿಕೊಂಡಿರುವ ಬಸವನಬಾಗೇವಾಡಿ ತಾಲೂಕಿನ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ದಲಿತ ಸಾಹಿತಿಯನ್ನು ಆಯ್ಕೆ ಮಾಡಬೇಕೆಂದು ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಅಧ್ಯಕ್ಷ ಮುತ್ತುರಾಜ್ ಬಾಗೇವಾಡಿ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ಇವಣಗಿ ಗ್ರಾಮದಲ್ಲಿ ನವೆಂಬರ್ ತಿಂಗಳಲ್ಲಿ ಹಮ್ಮಿಕೊಂಡಿರುವ ಬಸವನಬಾಗೇವಾಡಿ ತಾಲೂಕಿನ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ದಲಿತ ಸಾಹಿತಿಯನ್ನು ಆಯ್ಕೆ ಮಾಡಬೇಕೆಂದು ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಅಧ್ಯಕ್ಷ ಮುತ್ತುರಾಜ್ ಬಾಗೇವಾಡಿ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರಗೆ ಮನವಿ ಸಲ್ಲಿಸಿದರು.ಮನವಿಯಲ್ಲಿ ಸರ್ವರ ಬದುಕನ್ನು ಹಸನಾಗಿಸಿದ ಬಸವೇಶ್ವರ ಜನ್ಮ ಭೂಮಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಜರುಗುತ್ತಿದೆ. ಹಿಂದಿನ ಒಂಭತ್ತು ತಾಲೂಕು ಸಮ್ಮೇಳನದಲ್ಲಿ ವಿವಿಧ ಜನಾಂಗಕ್ಕೆ ಸೇರಿದ ಸಾಹಿತಿಗಳನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ತಾಲೂಕು ಸಮ್ಮೇಳನದಲ್ಲಿ ಒಮ್ಮೆಯೂ ದಲಿತ ಸಾಹಿತಿಯನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಲ್ಲ. ಈ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿಯಾದರೂ ದಲಿತ ಸಾಹಿತಿಯನ್ನು ಪರಿಗಣಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಬಸವೇಶ್ವರ ತತ್ವ ಮೈಗೂಡಿಸಿಕೊಂಡಿರುವ ನೀವು ದಲಿತ ಸಾಹಿತಿಯನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ವೈ.ಎಸ್.ಪಡಸಲಗಿ, ತಮ್ಮಣ್ಣ ಕಾನಾಗಡ್ಡಿ, ರಾಮಪ್ಪ ನನ್ನಿಕೇರಿ ಇದ್ದರು.