ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟವು ನೌಕರರ ಭವಿಷ್ಯ ನಿಧಿ ಸಂಸ್ಥೆಯ ಅಡಿಯಲ್ಲಿ ಕಡ್ಡಾಯ ವ್ಯಾಪ್ತಿಗೆ ಒಳಪಡುವ ನೌಕರರ ವೇತನ ಮಿತಿಯನ್ನು ತಿಂಗಳಿಗೆ 15,000 ರಿಂದ 25,000 ಕ್ಕೆ ಹೆಚ್ಚಿಸಿ ಅನುಮೋದನೆ ನೀಡಿದ್ದು, ಇದರಿಂದ ದೇಶಾದ್ಯಂತ 51 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಡ್ಡಾಯ ವ್ಯಾಪ್ತಿಗೆ ತರುವ ನಿರೀಕ್ಷೆ ಹೊಂದಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಾದೇಶಿಕ ಪಿಎಫ್ ಆಯುಕ್ತ ಎಂ. ಸುಬ್ರಹ್ಮಣ್ಯಂ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟವು ನೌಕರರ ಭವಿಷ್ಯ ನಿಧಿ ಸಂಸ್ಥೆಯ ಅಡಿಯಲ್ಲಿ ಕಡ್ಡಾಯ ವ್ಯಾಪ್ತಿಗೆ ಒಳಪಡುವ ನೌಕರರ ವೇತನ ಮಿತಿಯನ್ನು ತಿಂಗಳಿಗೆ ₹15,000 ರಿಂದ ₹25,000 ಕ್ಕೆ ಹೆಚ್ಚಿಸಿ ಅನುಮೋದನೆ ನೀಡಿದ್ದು, ಇದರಿಂದ ದೇಶಾದ್ಯಂತ 51 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಡ್ಡಾಯ ವ್ಯಾಪ್ತಿಗೆ ತರುವ ನಿರೀಕ್ಷೆ ಹೊಂದಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಾದೇಶಿಕ ಪಿಎಫ್ ಆಯುಕ್ತ ಎಂ. ಸುಬ್ರಹ್ಮಣ್ಯಂ ತಿಳಿಸಿದ್ದಾರೆ.ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ ತಿಂಗಳಿಗೆ ₹15,000 ಕ್ಕಿಂತ ಹೆಚ್ಚಿನ ವೇತನದೊಂದಿಗೆ ಸೇವೆಗೆ ಸೇರುವ ಹೊಸ ಉದ್ಯೋಗಿಗೆ ಸ್ವಯಂಚಾಲಿತವಾಗಿ ಇ.ಪಿ.ಎಫ್ ಚೌಕಟ್ಟಿನ ವ್ಯಾಪ್ತಿಯಿಂದ ಹೊರಗುಳಿದಿದ್ದರು. ಇವರಿಗೆ ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮಾ ರಕ್ಷಣೆಯ ಲಾಭ ಸಿಗುತ್ತಿರಲಿಲ್ಲ. ಇದನ್ನು ಮನಗಂಡ ಕೇಂದ್ರ ಸರ್ಕಾರ ಕಾರ್ಮಿಕರ ವೇತನ ಮಿತಿ ಹೆಚ್ಚಿಸಿ ಅನುಮೋದನೆ ನೀಡಿದ್ದು, ಸೆ.17 ರಿಂದ ವೇತನ ಪರಿಷ್ಕರಣೆ ಜಾರಿಗೆ ಬಂದಿದೆ ಎಂದರು.ಇದೀಗ ಕಾರ್ಮಿಕರ ಪಿ.ಎಫ್ ವೇಜಸ್ ವೇತನ ಮಿತಿ ₹25,000 ಕ್ಕೆ ಹೆಚ್ಚಿಸಿರುವುದರಿಂದ ₹15,000 ರಿಂದ ₹25,000 ರವರೆಗಿನ ವೇತನ ಶ್ರೇಣಿಯಲ್ಲಿರುವ ಉದ್ಯೋಗಿಗಳು ಶಾಸನಬದ್ಧ ಸಾಮಾಜಿಕ ಭದ್ರತಾ ವ್ಯಾಪ್ತಿಗೆ ಒಳಪಡಲಿದ್ದಾರೆ. ಇವರಿಗೆ ನಿಬಂಧನೆಗಳ ಪ್ರಕಾರ ಭವಿಷ್ಯ ನಿಧಿ ಉಳಿತಾಯ, ನೌಕರರ ಪಿಂಚಣಿ ಯೋಜನೆ (EPS) ಅಡಿಯಲ್ಲಿ ಪಿಂಚಣಿ ಮತ್ತು ನೌಕರರ ಠೇವಣಿ ಆಧಾರಿತ ವಿಮಾ ಯೋಜನೆ ಅಡಿಯಲ್ಲಿ ವಿಮಾ ರಕ್ಷಣೆ ಪಡೆಯಲಿದ್ದಾರೆ ಎಂದು ಎಂ. ಸುಬ್ರಹ್ಮಣ್ಯಂ ಮಾಹಿತಿ ನೀಡಿದರು. ವೇತನ ಮಿತಿಯನ್ನು ಕೊನೆಯದಾಗಿ 2014ರ ಸೆಪ್ಟೆಂಬರ್‌ನಲ್ಲಿ ಪರಿಷ್ಕರಿಸಿ ವೇತನವನ್ನೂ ₹15,000 ಕ್ಕೆ ಏರಿಸಲಾಗಿತ್ತು. ಪ್ರಸ್ತುತ ಪರಿಷ್ಕರಣೆಯು ಅಂದಿನಿಂದ ವೇತನ ಮತ್ತು ಔಪಚಾರಿಕ ಉದ್ಯೋಗದಲ್ಲಿ ಆಗಿರುವ ಬೆಳವಣಿಗೆಗೆ ಅನುಗುಣವಾಗಿ ಇದೀಗ ವೇತನ ಪರಿಷ್ಕಣೆ ಮಾಡಲಾಗಿದೆ. ಸರ್ಕಾರಕ್ಕೆ ಇದರಿಂದ ತಗಲುವ ವಾರ್ಷಿಕ ವೆಚ್ಚವು ಸುಮಾರು ₹11,339 ಕೋಟಿ ಎಂದು ಅಂದಾಜಿಸಲಾಗಿದೆ. ಐದು ವರ್ಷಗಳ ಅವಧಿಯಲ್ಲಿ ಅಂದಾಜು ವೆಚ್ಚವು ಸುಮಾರು ₹56,696 ಕೋಟಿ ಆಗಲಿದೆ ಎಂದರುಇಪಿಎಫ್‌ಓ ಪ್ರಸ್ತುತ ಸುಮಾರು 7.68 ಲಕ್ಷ ಸಂಸ್ಥೆಗಳಲ್ಲಿನ 7.98 ಕೋಟಿ ಸದಸ್ಯರಿಗೆ ಹಾಗೂ EPS ಅಡಿಯಲ್ಲಿ ಸುಮಾರು 82 ಲಕ್ಷ ಪಿಂಚಣಿದಾರರಿಗೆ ಸೇವೆ ನೀಡುತ್ತಿದೆ. ಕಲಬುರಗಿಯ ಪ್ರಾದೇಶಿಕ ಕಚೇರಿಯು ಕಲಬುರಗಿ, ವಿಜಯಪುರ, ಬೀದರ್ ಜಿಲ್ಲೆಗಳನ್ನು ಹಾಗೂ ಯಾದಗಿರಿ ಜಿಲ್ಲೆಯ ಶೋರಾಪುರ ಮತ್ತು ಶಹಾಪುರ ತಾಲೂಕುಗಳನ್ನು ಒಳಗೊಂಡಿದ್ದು, ವೇತನ ಮಿತಿ ಹೆಚ್ಚಳದಿಂದ ಪ್ರದೇಶದ ಹೆಚ್ಚಿನ ಸಂಖ್ಯೆಯ ಕಾರ್ಮಿಕರಿಗೆ ಖಚಿತವಾದ ಸಾಮಾಜಿಕ ಭದ್ರತೆ ಸಿಗಲಿದೆ. ಇದು ಉದ್ಯೋಗಿಗಳನ್ನು ಉಳಿಸಿಕೊಳ್ಳುವಿಕೆ ಮತ್ತು ದೀರ್ಘಕಾಲೀನ ನಿವೃತ್ತಿ ಭದ್ರತೆಗೂ ಸಹಕಾರಿಯಾಗಲಿದೆ ಎಂದು ಎಂ. ಸುಬ್ರಹ್ಮಣ್ಯಂ ಪ್ರಕಟಣೆಯಲ್ಲಿ ತಿಳಿಸಿದರು.
