ಸಾರಾಂಶ
ಗೆಲುವು ಇತಿಹಾಸವನ್ನು ರಚಿಸಲು ಅತಿ ದೊಡ್ಡ ಮಾರ್ಗ, ಜೀವನದ ಅಧ್ಯಾಯ ಪುಟ ನಾವೇ ನಿರೂಪಿಸಬೇಕು. ಅದು ಅತ್ಯುತ್ತಮ ಜ್ಞಾನ ಹಾಗೂ ಕೌಶಲ್ಯಗಳಿಂದ ಸಾಧ್ಯ.
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜಿಎಂ ಇನ್ಸಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ನ ಮೊಟ್ಟ ಮೊದಲ ಶೈಕ್ಷಣಿಕ ತಂಡದ ವಿದ್ಯಾರ್ಥಿನಿ ಜೆ.ಕೆ.ಚಂದನಾ ರಾಜ್ಯದ ಔಷಧ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗಾಗಿ ಏರ್ಪಡಿಸುವ ಅರ್ಹತಾ ಪರೀಕ್ಷೆಯಲ್ಲಿ (ಪಿಜಿಸಿಇಟಿ) ಕರ್ನಾಟಕಕ್ಕೆ ಮೊದಲನೇ ಸ್ಥಾನ ಪಡೆದು ಕಾಲೇಜು, ಜಿಲ್ಲೆಗೆ ಕೀರ್ತಿ ತಂದಿದ್ದು, ಈ ವಿದ್ಯಾರ್ಥಿನಿಗೆ ಸನ್ಮಾನ ಕಾರ್ಯಕ್ರಮ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಜಿಎಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ಆರ್.ಶಂಕಪಾಲ್, ಮಾತನಾಡಿ, ಗೆಲವು ಇತಿಹಾಸವನ್ನು ರಚಿಸಲು ಅತಿ ದೊಡ್ಡ ಮಾರ್ಗ, ಜೀವನದ ಅಧ್ಯಾಯ ಪುಟ ನಾವೇ ನಿರೂಪಿಸಬೇಕು. ಅದು ಅತ್ಯುತ್ತಮ ಜ್ಞಾನ ಹಾಗೂ ಕೌಶಲ್ಯಗಳಿಂದ ಸಾಧ್ಯ ಎಂದರು.
ಜಿಎಂ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಗಿರೀಶ್ ಬೋಳಕಟ್ಟಿ ಮಾತನಾಡಿ, ವಿದ್ಯಾರ್ಥಿನಿ ಜೆ.ಕೆ.ಚಂದನಾರನ್ನು ಸುಭಾಷಿಸುತ್ತಾ ನಮ್ಮ ಕಾಲೇಜಿನ ಗೌರವನ್ನು ನೂರಷ್ಟು ಹೆಚ್ಚಿಸಿ ನನ್ನ ಮನಸ್ಸಿಗೆ ಹೇಳಲಾರದಷ್ಟು ಸಂತೋಷ ಒದಗಿಸಿದ್ದಾಳೆ. ಚಂದನ ಓದಿನಲ್ಲಿ ಅಷ್ಟೇ ಅಲ್ಲದೆ ಇತರೆ ಕಲಾ ಕೃತಿ ಕೌಶಲ್ಯಗಳನ್ನು ಹೊಂದಿರುವ ವಿದ್ಯಾರ್ಥಿನಿ ಅವಳ ಭವಿಷ್ಯ ಸುಗಮವಾಗಿರಲಿ ಎಂದು ಹಾರೈಸಿದರು.ಜಿ.ಎಂ.ಸಮೂಹದ ನಿರ್ವಹಣಾ ಪ್ರತಿನಿಧಿ ವೈ. ಯು.ಸುಭಾಷ್ ಚಂದ್ರ, ಜಿಎಂಐಟಿ ಕಾಲೇಜಿನ ತರಬೇತಿ ಮತ್ತು ನಿಯೋಜನೆ ಸಂಯೋಜಕ ಟಿ.ಆರ್.ತೇಜಸ್ವಿ ಕಟ್ಟಿಮನಿ, ಜಿ.ಎಂ.ಹಾಲಮ್ಮ ಪದವಿ ಕಾಲೇಜಿನ ಪ್ರಾಚಾರ್ಯೆ ಶ್ವೇತಾ ಮರಿಗೌಡರು, ಡಾ.ನಿರ್ಮಲ್ ಹಾವಣ್ಣವರ್, ಮೊಹಮ್ಮದ್ ಯೂಸುಫ್ ಮಲಿಕ್ ಧಮನಿ, ಎಚ್.ಆರ್.ಮಾಧುರಿ, ಮಹಮ್ಮದ್ ಯಾಸೀನ್ ಸೇರಿ ಇತರರು ಇದ್ದರು.