ಮೂಡುಬಿದಿರೆ: ಇಂಟರ್ ನ್ಯಾಶನಲ್ ಸರ್ಕ್ಯೂಟ್ 2025 ರ ಅಂತಾರಾಷ್ಟ್ರೀಯ ಸೆಲೂನ್ 3- ಫೋಟೋ ಜರ್ನಲಿಸಂ ವಿಭಾಗದಲ್ಲಿ ಡಿಜಿ ಕ್ಲಬ್ ಗೋಲ್ಡ್ ಪ್ರಶಸ್ತಿಗೆ ಛಾಯಾಗ್ರಾಹಕ ರವಿ ಕೋಟ್ಯಾನ್ ಪಾತ್ರರಾಗಿದ್ದಾರೆ.ಮೂಡುಬಿದಿರೆಯಲ್ಲಿ ಸುಮಾರು 3 ದಶಕಗಳ ಕಾಲ ಫೋಟೋಗ್ರಫಿಯಲ್ಲಿ ಕಾರ್ಯನಿರ್ವಹಿಸಿದ ಮಾನಸ ಡಿಜಿಟಲ್‌ನ ರವಿ ಕೋಟ್ಯಾನ್‌ಗೆ ಈ ಬಾರಿ ಅಂತಾರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿಗಳು ಲಭಿಸಿವೆ.ವೇಣೂರು ಮಸ್ತಕಾಭಿಷೇಕ -2024ರ ಛಾಯಾಚಿತ್ರಕ್ಕಾಗಿ ಕ್ರೆಡೆನ್ಸ್, ಆಳ್ವಾಸ್ ಸಂಘಟಿಸಿದ ಸ್ಪೀಪಲ್ ಚೇಸ್ ವಾಟರ್ ಜಂಪ್ ಫೋಟೋ ಸಲ್ಲಿಕೆಗಾಗಿ ಕಲ್ಕಿ 2025 (ಡಿಜಿಟಲ್) ರ ಜ್ಯುಪಿಟರ್ ಸೊಸೈಟಿ ಆಫ್ ಫೋಟೋ ಗ್ರಫಿ (ಜೆಎಸ್ ಸಿ ಇಂಡಿಯಾ) ಮೆಡಲ್, ಡಿಜಿಟಲ್ ವಿಭಾಗದಲ್ಲಿ ಸಲ್ಲಿಸಿದ ಪ್ರಕೃತಿ ಚಿತ್ರಕ್ಕಾಗಿ ಹ್ಯಾಪ್ ಇಂಟರ್ ನ್ಯಾಶನಲ್ ಸ್ಯಾಲೊನ್ 2025 ಎಫ್ ಐ ಪಿ ರಿಬ್ಬನ್ ಮನ್ನಣೆ, ಆಳ್ವಾಸ್ ನಲ್ಲಿ ನಡೆದ ಹರ್ಡಲ್ಸ್ ನ ಚಿತ್ರ ಸಲ್ಲಿಕೆಗಾಗಿ ಜ್ಯೂರಿ ಚಾಯ್ಸ್ -ಕಲ್ಕಿ 2025 ಡಿಜಿಟಲ್‌ನ ಜೆಎಸ್ ಪಿ ವರ್ಲ್ಡ್ ವೈಡ್ ಗೌರವ ಮನ್ನಣೆ, ಕ್ರಿಯೇಟಿವ್ ಐಸ್ ಇಂಟರ್ ನ್ಯಾಶನಲ್ – ಸರ್ಕ್ಯೂಟ್ 2025 ಸ್ಪರ್ಧೆಯ ಫೋಟೋ ಟ್ರಾವೆಲ್ ವಿಭಾಗಕ್ಕೆ ಸಲ್ಲಿಸಿದ, ಚಿಕ್ಕಮಗಳೂರು ಉತ್ಸವದ ಮೆರವಣಿಗೆಯಲ್ಲಿ ಕಂಡ ರಾವಣನ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಿಜಿ ಕ್ಲಬ್ ಕಂಚಿನ ಪದಕ ಲಭಿಸಿದೆ. ಕಲ್ಕಿ 2025 (ಡಿಜಿಟಲ್ ) ಸ್ಯಾಲೊನ್ 3 ರಲ್ಲಿ -ಫೋಟೊ ಟ್ರಾವೆಲ್ ವಿಭಾಗಕ್ಕೆ ಸಲ್ಲಿಸಿದ ಚಿತ್ರ (ಪುತ್ತಿಗೆ ದೇವಳದ ಜೋಡು ಬಲಿ) ಛಾಯಾ ಚಿತ್ರ ಸರ್ಕ್ಯೂಟ್ ಮೆರಿಟ್ ಮನ್ನಣೆಗೆ ಪಾತ್ರವಾಗಿದೆ.
ಛಾಯಾಗ್ರಾಹಕ ರವಿ ಕೋಟ್ಯಾನ್‌ಗೆ ಅಂತಾರಾಷ್ಟ್ರೀಯ ಪ್ರಶಸ್ತಿ
ಮೂಡುಬಿದಿರೆಯಲ್ಲಿ ಸುಮಾರು 3 ದಶಕಗಳ ಕಾಲ ಫೋಟೋಗ್ರಫಿಯಲ್ಲಿ ಕಾರ್ಯನಿರ್ವಹಿಸಿದ ಮಾನಸ ಡಿಜಿಟಲ್‌ನ ರವಿ ಕೋಟ್ಯಾನ್‌ಗೆ ಡಿಜಿ ಕ್ಲಬ್ ಗೋಲ್ಡ್ ಪ್ರಶಸ್ತಿ ಲಭಿಸಿವೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.