ಜನರ ಮುಖದಲ್ಲಿ ಮಂದಹಾಸ ಮೂಡಿಸುವ ಸ್ವಭಾವ ಉಳ್ಳವರು ಛಾಯಾಗ್ರಾಹಕರು

| Published : Aug 21 2024, 12:32 AM IST

ಜನರ ಮುಖದಲ್ಲಿ ಮಂದಹಾಸ ಮೂಡಿಸುವ ಸ್ವಭಾವ ಉಳ್ಳವರು ಛಾಯಾಗ್ರಾಹಕರು
Share this Article
  • FB
  • TW
  • Linkdin
  • Email

ಸಾರಾಂಶ

Photographers are the ones who bring smiles to people's faces

-ಹುಣಸಗಿಯಲ್ಲಿ ಯುಕೆಪಿ ಕ್ಯಾಂಪಿನ ಕಲ್ಯಾಣ ಮಂಟಪದಲ್ಲಿ ವಿಶ್ವ ಛಾಯಾ ಗ್ರಾಹಕರ ದಿನಾಚಾರಣೆ ಕಾರ್ಯಕ್ರಮ

----

ಕನ್ನಡಪ್ರಭ ವಾರ್ತೆ ಹುಣಸಗಿ

ನಾಡಿನ ಎಲ್ಲರ ಮುಖದಲ್ಲಿ ನಿತ್ಯವೂ ಮಂದಹಾಸ ಮೂಡುವಂತೆ ಮಾಡುವ ಸ್ವಭಾವ ಉಳ್ಳವರು ಛಾಯಾಗ್ರಾಹಕರು ಮಾತ್ರ ಎಂದು ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು.

ಯುಕೆಪಿ ಕ್ಯಾಂಪಿನ ಕಲ್ಯಾಣ ಮಂಟಪದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದಿಂದ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಾಹಕರ ದಿನಾಚಾರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಲವಾರು ಕಷ್ಟ-ನಷ್ಟಗಳ ಮಧ್ಯೆ ತಮ್ಮ ಜೀವನ ನಡೆಸುತ್ತಿದ್ದರೂ ಇತರರ ಒಳಿತನ್ನು ಛಾಯಾಗ್ರಾಹಕರು ಬಯಸುತ್ತಾರೆ ಎಂದು ತಮ್ಮದೇ ಕಥೆಗಳ ಮೂಲಕ ತಿಳಿಸಿದರು.

ಗುಳಬಾಳದ ರಾಮಲಿಂಗೇಶ್ವರ ಮಠದ ಪೀಠಾಧಿಪತಿ ಮರಿಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ಪ್ರತಿ ಕುಟುಂಬದ ನೆಮ್ಮದಿಯ ಕ್ಷಣಕ್ಕೆ ಸಾಕ್ಷಿಯಾಗುವ ಹಾಗೂ ನೂರಾರು ವರ್ಷಗಳ ಕಾಲ ಆ ನೆನಪನ್ನು ಹಚ್ಚಹಸಿರಾಗಿರುವಂತೆ ಮಾಡುವ ಛಾಯಾಗ್ರಾಹಕರನ್ನು ಪ್ರತಿಯೊಬ್ಬರು ತಮ್ಮ ಕುಟುಂಬದ ಸದಸ್ಯರಂತೆ ಕಾಣಬೇಕೆಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಪಟ್ಟಣ ಪಂಚಾಯಿತಿ ಸದಸ್ಯ ಸಿದ್ದು ಮುದಗಲ್ಲ, ಹಿರಿಯರಾದ ನಾಗಪ್ಪ ಅಡಿಕ್ಯಾಳ ಮತ್ತು ರಾಘವೇಂದ್ರ ಕಾಮನಟಗಿ ಮಾತನಾಡಿ, ಹಲವಾರು ವರ್ಷಗಳ ಬಳಿಕ ಹುಣಸಗಿಯಲ್ಲಿ ದೊಡ್ಡಮಟ್ಟದಲ್ಲಿ ಛಾಯಾಗ್ರಾಹಕರು ಕಾರ್ಯಕ್ರಮ ಆಯೋಜಿಸಿ, ತಾಲೂಕಿನ ಮಹತ್ವದ ತಾಣಗಳ ಕುರಿತು ವಿಡಿಯೋ ಬಿಡುಗಡೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಭೀಮಶೇನರಾವ್ ಕುಲಕರ್ಣಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ, ಮಹಾದೇವಿ ಬೇನಾಳಮಠ, ಗೋವಿಂದ ಕುಲಕರ್ಣಿ ಜಾಲಿಬೆಂಚಿ ಸೇರಿದಂತೆ ಇತರರು ಮಾತನಾಡಿದರು.

ಈ ವೇಳೆ ಹಿರಿಯ ಛಾಯಾಗ್ರಾಹಕ ಚಂದ್ರಶೇಖರ ಚಿತ್ತರಗಿ, ಖಾದರಸಾಬ ದ್ಯಾಮನಾಳ, ಶಶಿಕಾಂತ ಸುಣ್ಣದಳ್ಳಿ, ಅಯ್ಯಣ್ಣಗೌಡ ಬನ್ನಿಬಸವ, ಮಹಾದೇವಯ್ಯ ರಾಜನಕೋಳೂರು, ಶಿವರಾಯ ಪೂಜಾರಿ, ಸಾಯಬಣ್ಣ ಮೇಟಿಗೌಡರ್, ಸಿದ್ದು ಮೇಲೇಶ್ವರ ಇತರರನ್ನು ಸಂಘದಿಂದ ಗೌರವಿಸಲಾಯಿತು.

ಸಂಘದ ತಾಲೂಕು ಘಟಕದ ಅಧ್ಯಕ್ಷ ಶ್ರೀಕಾಂತ ನಾಗರಾಳ ಅಧ್ಯಕ್ಷತೆವಹಿಸಿ ಮಾತನಾಡಿದರು. ಕೊಡೇಕಲ್ ಮಹಲಿಮಠದ ವೃಷಭೇಂದ್ರ ಅಪ್ಪನವರು, ಪಟ್ಟಣ ಪಂಚಾಯಿತಿ ಸದಸ್ಯ ಶರಣು ದಂಡಿನ್, ಹಿರಿಯರಾದ ಬಸವರಾಜ ಮಲಗಲದಿನ್ನಿ, ಬಸಣ್ಣ ದೇಸಾಯಿ, ಶಿವು ಮಲಗಲದಿನ್ನಿ, ಬಸವರಾಜ ಸಜ್ಜನ್, ಅಮರಯ್ಯಸ್ವಾಮಿ ಜಾಲಿಬೆಂಚಿ, ಪಟ್ಟಣ ಪಂಚಾಯಿತಿ ಸದಸ್ಯ ಕಾಶಿಂಸಾಬ ಟೊಣ್ಣುರು, ಅಂಬರೀಶ ನಾಯ್ಕೋಡಿ, ನಾಗರಾಜ ಆಲದಾರ್ತಿ, ಪರಶುರಾಮ ನಾಟೇಕಾರ ಇ್ತದ್ದರು. ನಾಗನಗೌಡ ಪಾಟೀಲ್ ನಿರೂಪಿಸಿದರು. ಶಂಕರಲಿಂಗ ಮುದನೂರು ಸ್ವಾಗತಿಸಿದರು. ಅಶೋಕ ಮೇಲ್ದಾಪೂರ ವಂದಿಸಿದರು.

-----

ಫೋಟೋ: 20ವೈಡಿಆರ್1: ಹುಣಸಗಿಯಲ್ಲಿ ಯುಕೆಪಿ ಕ್ಯಾಂಪಿನ ಕಲ್ಯಾಣ ಮಂಟಪದಲ್ಲಿ ವಿಶ್ವ ಛಾಯಾ ಗ್ರಾಹಕರ ದಿನಾಚಾರಣೆ ಕಾರ್ಯಕ್ರಮ ಜರುಗಿತು.

----