ವ್ಯಾಯಾಮದಿಂದ ದೈಹಿಕ, ಮಾನಸಿಕ ಬೆಳವಣಿಗೆ: ಡಾ.ವಿಜಯ ಮಹಾಂತೇಶ

| Published : Feb 03 2024, 01:48 AM IST

ಸಾರಾಂಶ

ಆತ್ಮವಿಶ್ವಾಸದಿಂದ ಏನಾದರೂ ಸಾಧಿಸಬಹುದು. ಸಾಧನೆಗೆ ಸಾಕಷ್ಟು ಅವಕಾಶಗಳು ಇರುತ್ತವೆ ಎಂದು ವಿಶೇಷ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಡಾ.ವಿಜಯಮಹಾಂತೇಶ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ದಿನನಿತ್ಯ ದೈಹಿಕ ಕಸರತ್ತಿನಲ್ಲಿ ತೊಡಗಿಸಿಕೊಂಡರೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳವಣಿಗೆ ಹೊಂದುವದಲ್ಲದೇ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಇಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣದ ಅತಿಥಿ ಉಪನ್ಯಾಸಕ ಡಾ.ವಿಜಯ ಮಹಾಂತೇಶ ದೇವರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂ ಎಸಿ ಅಡಿಯಲ್ಲಿ ಗುರುವಾರ ನಡೆದ ವಿಶೇಷ ಉಪನ್ಯಾಸ ಸರಣಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ಅವರು, ಆತ್ಮವಿಶ್ವಾಸದಿಂದ ಏನಾದರೂ ಸಾಧಿಸಬಹುದು. ಸಾಧನೆಗೆ ಸಾಕಷ್ಟು ಅವಕಾಶಗಳು ಇರುತ್ತವೆ. ಅದರ ಸದುಪಯೋಗಪಡಿಸಿಕೊಂಡಾಗ ಮಾತ್ರ ಸಾಧನೆ ಸಾಧ್ಯ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ಸಂತೋಷ ಕಬಾಡೆ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ನೆಮ್ಮದಿಯಿಂದ ಬದುಕು ಸಾಧಿಸಬೇಕಾದರೇ ಸಾಕಷ್ಟು ಸ್ವಯಂ ಉದ್ಯೋಗಗಳಿವೆ ಕಡಿಮೆ ಬಂಡವಾಳದಿಂದ ನೆಮ್ಮದಿಯ ಜೀವನ ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕ ಡಾ. ಬಿ.ಎಂ.ಕೊರಬು ಮಾತನಾಡಿ, ಸಂವಿಧಾನದ ಮೌಲ್ಯಗಳ ಕುರಿತು ತಿಳಿಸಿದರು.

ಸ್ಥಳೀಯ ಕಾಲೇಜಿನ ಪ್ರಾಂಶುಪಾಲ ಪ್ರೊ.ಅಶೋಕ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ದೈಹಿಕ ಶಿಕ್ಷಣದ ನಿರ್ದೇಶಕರಾದ ಡಾ.ಅಶೋಕಕುಮಾರ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳ ಅನುಭವದ ಮಾತುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಿದ್ದು, ವಿಶೇಷವಾಗಿತ್ತು.

ಇದೇ ಸಂದರ್ಭದಲ್ಲಿ ಪ್ರೊ.ಪ್ರೇಮಕುಮಾರಿ, ಡಾ.ದ್ರಾಕ್ಷಿಯಣಮ್ಮ, ಡಾ.ಜ್ಯೋತಿ ಹೂಗಾರ, ಬಿ.ಎಸ್.ಬಿರಾದಾರ, ಡಾ.ಎಂ.ಎಸ್.ಶಿವಶರಣ, ಡಾ.ಬಸವರಾಜ ಹೊನಮಟ್ಟಿ, ಎನ್‌ಎಸ್ಎಸ್ ಸಂಯೋಜಕರಾದ ಅಕ್ರಂ ಪಾಷಾ, ಸುನೀತಾ ಪಾಟೀಲ, ಗೋಪಾಲ ಚಕ್ರಸಾಲಿ, ಯಾಸ್ಮಿನ್ ಗಿರಗಾಂವ, ವೈ.ಎ.ಇನಾಮದಾರ, ಪ್ರೊ.ಶಿವಕುಮಾರ ಹಿರೇಮಠ, ಅಬ್ದುಲ್ ಮಳಖೇಡ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರೂಪಣೆ ಡಾ.ವಿಜಯಲಕ್ಷ್ಮಿ, ಯಾಸ್ಮಿನ್ ನದಾಫ ಸ್ವಾಗತಿಸಿದರು. ಪ್ರೊ.ಶಿವಪುತ್ರ ಜಾಲವಾದಿ ವಂದಿಸಿದರು.