ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ದೈಹಿಕ ಶಿಕ್ಷಣ ಅವಶ್ಯ-ನಾಯ್ಕ

| Published : Feb 25 2025, 12:49 AM IST

ಸಾರಾಂಶ

ದೈಹಿಕ ಶಿಕ್ಷಣವು ಚಟುವಟಿಕೆ ಆಧಾರಿತ ಶಿಕ್ಷಣವಾಗಿ ಮಗುವಿನ ಹಾಗೂ ಶಿಕ್ಷಕರ ಕಲಿಕೆಗೆ ಪೂರಕವಾಗಿದೆ. ಮಕ್ಕಳ ವಯಸ್ಸಿಗೆ ಅನುಗುಣವಾದ ಶಿಕ್ಷಣವು ಎಷ್ಟು ಅವಶ್ಯಕವೋ ಅವರ ಸಾಮರ್ಥ್ಯಕ್ಕೆ ಅನುಗುಣವಾದ ದೈಹಿಕ ಶಿಕ್ಷಣವು ಅಷ್ಟೇ ಅವಶ್ಯಕ ಎಂದು ಬಿಇಓ ಎಚ್.ಎನ್. ನಾಯ್ಕ ಹೇಳಿದರು.

ಲಕ್ಷ್ಮೇಶ್ವರ: ದೈಹಿಕ ಶಿಕ್ಷಣವು ಚಟುವಟಿಕೆ ಆಧಾರಿತ ಶಿಕ್ಷಣವಾಗಿ ಮಗುವಿನ ಹಾಗೂ ಶಿಕ್ಷಕರ ಕಲಿಕೆಗೆ ಪೂರಕವಾಗಿದೆ. ಮಕ್ಕಳ ವಯಸ್ಸಿಗೆ ಅನುಗುಣವಾದ ಶಿಕ್ಷಣವು ಎಷ್ಟು ಅವಶ್ಯಕವೋ ಅವರ ಸಾಮರ್ಥ್ಯಕ್ಕೆ ಅನುಗುಣವಾದ ದೈಹಿಕ ಶಿಕ್ಷಣವು ಅಷ್ಟೇ ಅವಶ್ಯಕ ಎಂದು ಬಿಇಓ ಎಚ್.ಎನ್. ನಾಯ್ಕ ಹೇಳಿದರು.

ಸೋಮವಾರ ಲಕ್ಷ್ಮೇಶ್ವರ ಸಮೀಪದ ಅಡರಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಯೋಗ, ರಾಷ್ಟ್ರಗೀತೆ ಮತ್ತು ನಾಡಗೀತೆಯ ಕುರಿತು ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರದಲ್ಲಿ ಅವರು ಹೇಳಿದರು.

ಮಗುವಿಗೆ ಗುಣಾತ್ಮಕ ಶಿಕ್ಷಣದೊಂದಿಗೆ ಸಮಗ್ರ ಬೆಳವಣಿಗೆಗೆ ಪ್ರಾಧಾನ್ಯತೆ ನೀಡುವುದು. ಶಿಕ್ಷಣ ಎಂದರೆ ಮನುಷ್ಯನ ಸರ್ವತೋಮುಖ ಬೆಳವಣಿಗೆ. ಆರೋಗ್ಯವಂತ ದೇಹದೊಳಗೆ ಆರೋಗ್ಯವಂತ ಮನಸ್ಸು ಎನ್ನುವ ನಾಣ್ಣುಡಿಯಂತೆ ಮಗುವಿನ ಸರ್ವಾಂಗೀಣ ಬೆಳವಣಿಗೆ ಮಾಡುವುದೇ ಶಿಕ್ಷಣದ ಗುರಿ. ಶಾರೀರಿಕ, ಬೌದ್ಧಿಕ, ಸಾಮಾಜಿಕ, ನೈತಿಕ ವಿಕಾಸವನ್ನುಂಟು ಮಾಡುವಲ್ಲಿ ದೈಹಿಕ ಹಾಗೂ ಆರೋಗ್ಯ ಶಿಕ್ಷಣ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದಲೇ ದೈಹಿಕ ಶಿಕ್ಷಣ ಕ್ಷೇತ್ರ, ಶಿಕ್ಷಣದ ಅವಿಭಾಜ್ಯ ಅಂಗ ಎಂಬುದಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ ಎಂದು ತಾಲೂಕು ದೈಹಿಕ ಪರಿವೀಕ್ಷಕ ಎಂ.ಎಂ. ಹವಳದ ಹೇಳಿದರು.

ಈ ವೇಳೆ ಕಾರ್ಯಾಗಾರ ಉದ್ದೇಶಿಸಿ, ಕ ರಾ ಸ ನೌ ಸಂಘದ ಅಧ್ಯಕ್ಷ ಜಿ.ಡಿ. ಹವಳದ, ಪ್ರಧಾನ ಕಾರ್ಯದರ್ಶಿ ಎಮ್.ಎ.ನದಾಫ, ಕ ರಾ ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪೂರ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನೇಕಾರ, ಶಿರಹಟ್ಟಿ ತಾಲೂಕಿನ ಪ್ರಾ ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಫ್. ಮಠದ, ಎಸ್‌ಡಿಎಂಸಿ ಅಧ್ಯಕ್ಷೆ ಜಯಶ್ರೀ ಭಂಗಿ, ಬಿಆರ್‌ಪಿ ಬಿ.ಎಮ್.ಯರಗುಪ್ಪಿ ಮಾತನಾಡಿದರು.ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಎಸ್.ಎಮ್. ಬುರಡಿ ಮತ್ತು ಚೇತನ ಚುಂಚಾ ಅವರು ಮಾರ್ಗದರ್ಶನ ಮಾಡಿದರು. ಎಸ್.ಸಿ. ಗೋಲಪ್ಪನವರ, ಬಿ.ಕೆ. ದ್ಯಾವನಗೌಡ್ರ, ಪ್ರಧಾನ ಗುರುಮಾತೆ ಎಸ್.ಎಚ್. ಉಮಚಗಿ, ಮಹಾಂತೇಶ ಹವಳದ, ಎ.ಎನ್. ಮುಳಗುಂದ, ಸಿ.ವಾಯ್. ಮೇಲಿನಮನೆ, ಎಮ್.ಡಿ. ತಳ್ಳಳ್ಳಿ, ಎಸ್.ಸಿ. ಹಿರೇಮಠ, ಕಿರಣ ಕಲಿವಾಳ, ಎಮ್.ಐ. ಕಣಕೆ, ಎಸ್.ಡಿ. ಲಮಾಣಿ, ಎ. ಎಮ್.ಗುತ್ತಲ, ಆರ್.ಎಚ್. ನೆರೆಗಲ್ಲ ಹಾಗೂ ತಾಲೂಕಿನ ಎಲ್ಲ ದೈಹಿಕ ಶಿಕ್ಷಕರು ಹಾಜರಿದ್ದರು.

ಕೆ.ಎಮ್. ಕೊಟ್ರಮ್ಮ, ಎಮ್.ವಾಯ್. ನೀಲನಾಯ್ಕರ, ಎಸ್.ಎಮ್. ಕೌಜಗೇರಿ ಪ್ರಾರ್ಥಿಸಿದರು. ಎಸ್.ಕೆ. ಅಮ್ಮಿನಬಾವಿ ಸ್ವಾಗತಿಸಿದರು. ಪಿ.ಬಿ. ಗುರುಮಠ ವಂದಿಸಿದರು. ಡಿ.ಡಿ. ಲಮಾಣಿ ಹಾಗೂ ಪಿ.ಸಿ. ಕಾಳಶೆಟ್ಟಿ ನಿರ್ವಹಿಸಿದರು.