ಸಾರಾಂಶ
ತೇರದಾಳ: ಶ್ರೀ ಬಾಹುಬಲಿ ವಿದ್ಯಾಪೀಠದ ಜೆ.ವಿ. ಮಂಡಳದ ಪಾಲಿಟೆಕ್ನಿಕ್‌ನಲ್ಲಿ ೨೦೨೩-೨೪ನೇ ವಾರ್ಷಿಕ ಕ್ರೀಡಾಕೂಟವನ್ನು ಜೆವಿ ಮಂಡಳ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಮೌನೇಶ ಬಡಿಗೇರ ಉದ್ಘಾಟಿಸಿ ಮಾತನಾಡಿ,ದೈಹಿಕ ಸದೃಢತೆ ಹೊಂದಿದ ವ್ಯಕ್ತಿತ್ವದಲ್ಲಿ ಸದೃಢ ಮನಸ್ಸು ಇರುತ್ತದೆ ಎಂದರು.
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಕ್ರೀಡೆಗಳು ವ್ಯಕ್ತಿತ್ವದ ಚಟುವಟಿಕೆಗೆ ಮೂಲವಾಗಿದ್ದು, ದೈಹಿಕ, ಮಾನಸಿಕ ಸಕ್ಷಮತೆ ಬೆಳೆಸಿಕೊಳ್ಳಲು ಸಹಕಾರಿಯಾಗಿವೆ ಎಂದು ಜೆವಿ ಮಂಡಳ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಮೌನೇಶ ಬಡಿಗೇರ ಹೇಳಿದರು.ಶ್ರೀ ಬಾಹುಬಲಿ ವಿದ್ಯಾಪೀಠದ ಜೆ.ವಿ. ಮಂಡಳದ ಪಾಲಿಟೆಕ್ನಿಕ್‌ನಲ್ಲಿ ೨೦೨೩-೨೪ನೇ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಸದೃಢತೆ ಹೊಂದಿದ ವ್ಯಕ್ತಿತ್ವದಲ್ಲಿ ಸದೃಢ ಮನಸ್ಸು ಇರುತ್ತದೆ. ಎಲ್ಲ ವಿದ್ಯಾರ್ಥಿಗಳು ಕ್ರೀಡೆಗಳತ್ತ ಆಸಕ್ತಿ ಬೆಳೆಸಿಕೊಂಡು ತಮ್ಮ ಕಲಿಕೆ ಮತ್ತು ಜೀವನದುದ್ದಕ್ಕೂ ಪ್ರಗತಿ ಹೊಂದಬೇಕೆಂದರು.
ಎಸ್.ಜೆ. ಹೆಣ್ಣುಮಕ್ಕಳ ಪ್ರೌಢಶಾಲೆಯ ದೈಹಿಕ ಶಿಕ್ಷಕ ಬಿ.ಆರ್. ಚೌಕಾ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಿವಿಲ್ ವಿಭಾಗದ ಮುಖ್ಯಸ್ಥ ಸಂತೋಷ ಬಸರಗಿ ವಾರ್ಷಿಕ ಕ್ರೀಡಾಕೂಟದ ಪ್ರತಿಜ್ಞಾವಿಧಿ ಬೋಧಿಸಿದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಆಕಾಶ ಕಿಲ್ಲೇದಾರ, ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಸಂತೋಷ ಜಾಧವ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಶೋಭಾ ಧನ್ನೂರೆ, ಉಪನ್ಯಾಸಕರಾದ ಶ್ರುತಿ ಚವಜ, ಸೌಂದರ್ಯ ಬಗಾಡೆ, ಕಿಶೋರ ನಂದಗಾಂವ, ಸಂಗೀತಾ ಸದಾನಂದೆ, ಭೀಮಪ್ಪ ಬಂಗೆನ್ನವರ, ಸುಷ್ಮಾ ಮುಕುಂದ, ವಿಜಯಲಕ್ಷ್ಮೀ ಮರೆಗುದ್ದಿ, ಅಪರ್ಣಾ ಮುಂಡಗನೂರ, ಪ್ರಕಾಶ ಅಮ್ಮಣಗಿ, ಅಕ್ಷತಾ ಮುಂಡಗನೂರ, ಎಲ್ಲಾ ವಿಭಾಗದ ಸಿಬ್ಬಂದಿ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))