ಸಾರಾಂಶ
ಹರಪನಹಳ್ಳಿ: ಇಲ್ಲಿಯ ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್) ನ ಆಡಳಿತ ಮಂಡಳಿ ಚುನಾವಣೆಗೆ ಮೀಸಲಾತಿ ಕ್ಷೇತ್ರ ನಿಗದಿ ಪಡಿಸುವ ಬಗ್ಗೆ ಗುರುವಾರ ನಡೆದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಸೂಚಿಸಲಾಯಿತು.
ಮೀಸಲಾತಿ ವಿವರ:ಹರಪನಹಳ್ಳಿ -1 ಕ್ಷೇತ್ರ: ಹಿಂದುಳಿದ ಬ ವರ್ಗ, ಹರಪನಹಳ್ಳಿ -2: ಸಾಮಾನ್ಯ, ಬಾಗಳಿ -ಸಾಮಾನ್ಯ, ಚಿಗಟೇರಿ -ಹಿಂದುಳಿದ ಅ ವರ್ಗ, ಮತ್ತಿಹಳ್ಳಿ -ಪರಿಶಿಷ್ಟ ಪಂಗಡ, ತೊಗರಿಕಟ್ಟೆ -ಸಾಮಾನ್ಯ ಮಹಿಳೆ, ಹಲುವಾಗಲು -ಪರಿಶಿಷ್ಟ ಜಾತಿ, ತೆಲಿಗಿ -ಸಾಮಾನ್ಯ, ನೀಲಗುಂದ -ಸಾಮಾನ್ಯ, ಕಂಚಿಕೇರಿ -ಸಾಮಾನ್ಯ, ಅರಸಿಕೇರಿ -ಸಾಮಾನ್ಯ ಮಹಿಳೆ, ಉಚ್ಚಂಗಿದುರ್ಗ -ಸಾಮಾನ್ಯ. ಲಕ್ಷ್ಮಿಪುರ -ಸಾಮಾನ್ಯ, ಸಾಲಗಾರರಲ್ಲದ ಕ್ಷೇತ್ರ - ಸಾಮಾನ್ಯ.
ಹೀಗೆ ಮೀಸಲಾತಿ ನಿಗದಿ ಮಾಡಿ ಸರ್ವ ಸದಸ್ಯರ ಒಪ್ಪಿಗೆ ಪಡೆಯಲಾಯಿತು.ಈ ಮೀಸಲಾತಿ ನಿಗದಿ ವಿಚಾರದಲ್ಲಿ ಹಲುವಾಗಲು ಭಾಗದ ಡಿ. ಸೋಮಲಿಂಗಪ್ಪ, ವೀರಭದ್ರಪ್ಪ, ಎಚ್.ಟಿ. ಗಿರೀಶಪ್ಪ ಮುಂತಾದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಆಗ ಅಧ್ಯಕ್ಷ ಪಿ.ಬಿ. ಗೌಡ ಹಾಗೂ ನಿರ್ದೆಶಕ ಬೇಲೂರು ಸಿದ್ದೇಶ, ಪಿ.ಎಲ್. ಪೋಮ್ಯನಾಯ್ಕ, ಎಸ್. ಜಂಬಣ್ಣ, ಸರ್ಕಾರದ ಮಾರ್ಗಸೂಚಿ ಪ್ರಕಾರ ಮೀಸಲಾತಿ ನಿಗದಿ ಮಾಡಿದ್ದೇವೆ, ನಿಮ್ಮ ಆಕ್ಷೇಪವಿದ್ದರೆ ಸಲ್ಲಿಸಿ ಎಂದು ನುಡಿದರು.ಬಹಳ ಚರ್ಚೆಯ ಆನಂತರ ಮೀಸಲಾತಿ ಯಥಾಪ್ರಕಾರ ಅನುಮೋದನೆಗೊಂಡಿತು.
ಹಲುವಾಗಲು ಸೋಮಲಿಂಗಪ್ಪ ಎತ್ತಿದ ಇನ್ನಿತರ ಆಕ್ಷೇಪಣೆಗಳಿಗೆ ಮುತ್ತಿಗೆ ಜಂಬಣ್ಣ ಮತ್ತು ಲಾಟಿ ದಾದಾಪೀರ ಇತರರು ಸಮಜಾಯಿಸಿ ನೀಡಿದರು.2023-24ನೇ ಸಾಲಿನ ಲೆಕ್ಕ ಪರಿಶೋಧಿಸಿದ ಜಮಾ-ಖರ್ಚು, ಲಾಭ-ನಷ್ಟಗಳನ್ನು ಪರಿಶೀಲನೆ ನಡೆಸಲಾಯಿತು. 2024-25ನೇ ಸಾಲಿನ ಅಂದಾಜು ಆಯ-ವ್ಯಯ ಮಂಡಿಸಿ ಒಪ್ಪಿಗೆ ಸೂಚಿಸಲಾಯಿತು.ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಪಿ.ಬಿ. ಗೌಡ ವಹಿಸಿದ್ದರು. ಉಪಾಧ್ಯಕ್ಷ ಬಿ. ರಾಜಕುಮಾರ, ನಿರ್ದೇಶಕರಾದ ಬೇಲೂರು ಸಿದ್ದೇಶ, ಆರ್. ಶಾಂತಕುಮಾರ, ಎಸ್. ಜಂಬಣ್ಣ, ಟಿ.ಜಗದೀಶ, ಲಾಟಿ ದಾದಾಪೀರ, ಪಿ.ಕೆ. ಮಹಾದೇವಪ್ಪ, ಆರ್. ಶಿವಕುಮಾರಗೌಡ, ಎ. ಬಸವರಾಜಪ್ಪ, ಆರ್. ವೀರಪ್ಪ, ಎಚ್.ವಿಶಾಲಾಕ್ಷಮ್ಮ, ಎಚ್.ಸುಮಂಗಲ. ಎಚ್.ಭೀಮಪ್ಪ ಹಾಗೂ ಪ್ರಭಾರ ವ್ಯವಸ್ಥಾಪಕ ಎಂ.ಶಾಹೀದ್ ಇದ್ದರು.