ಕ್ಯಾದಿಗುಪ್ಪ ಮನೆಯಂಗಳದಲ್ಲಿ ಅರಳಿದ ವಿಜ್ಞಾನದ ಚಿತ್ರಗಳು

| Published : Feb 29 2024, 02:02 AM IST

ಕ್ಯಾದಿಗುಪ್ಪ ಮನೆಯಂಗಳದಲ್ಲಿ ಅರಳಿದ ವಿಜ್ಞಾನದ ಚಿತ್ರಗಳು
Share this Article
  • FB
  • TW
  • Linkdin
  • Email

ಸಾರಾಂಶ

10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಮನೆಯಂಗಳದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳನ್ನು ರಂಗೋಲಿ ಬಿಡಿಸುವ ಮೂಲಕ ವಿಜ್ಞಾನದ ಆಸಕ್ತಿ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ.

ಕುಷ್ಟಗಿ: 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಮನೆಯಂಗಳದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳನ್ನು ರಂಗೋಲಿ ಬಿಡಿಸುವ ಮೂಲಕ ವಿಜ್ಞಾನದ ಆಸಕ್ತಿ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ.ತಾಲೂಕಿನ ಕ್ಯಾದಿಗುಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಂತೆ ತಮ್ಮ ಮನೆಯ ಅಂಗಳದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತಹ ಪ್ರಮುಖವಾದ ಚಿತ್ರಗಳನ್ನು ರಂಗೋಲಿ ಮೂಲಕ ಬಿಡಿಸಿ ತಮ್ಮಲ್ಲಿರುವ ಕೌಶಲ್ಯ ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಮುಂಬರುವ 10ನೇ ತರಗತಿ ವಾರ್ಷಿಕ ಪರೀಕ್ಷೆಗೆ ಅಣಿಯಾಗುತ್ತಿದ್ದಾರೆ. ಇಂತಹ ಪ್ರಯೋಗಗಳು 10ನೇ ತರಗತಿಯ ಮಕ್ಕಳ ಫಲಿತಾಂಶ ಸುಧಾರಣೆ ಕ್ರಮಗಳಲ್ಲಿ ವಿಜ್ಞಾನ ಚಿತ್ರಗಳ ರಂಗೋಲಿ ಬಿಡಿಸುವುದೂ ಒಂದು ಭಾಗವಾಗಿದೆ. ವಿಜ್ಞಾನ ವಿಷಯದಲ್ಲಿರುವ ಪಠ್ಯಗಳಲ್ಲಿ ಬರುವ ಚಿತ್ರಗಳು ಮಕ್ಕಳ ಮನಸಿನಲ್ಲಿ ಅಚ್ಚಳಿಯದೇ ಉಳಿಯಲು ಈ ರಂಗೋಲಿಯ ಮಾದರಿ ಅನೂಕೂಲವಾಗಲಿದೆ.ರಂಗೋಲಿ ಸ್ಪರ್ಧೆಯಲ್ಲಿ ಸುಮಾರು 15 ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಮನೆ ಮುಂದೆ ಹುರುಪಿನಿಂದಲೇ ರಂಗೋಲಿ ಬಿಡಿಸಿದರು. ಶಾಲಾ ಮಕ್ಕಳ ಬಿಡಿಸಿರುವ ರಂಗೋಲಿಗಳನ್ನು ವೀಕ್ಷಿಸಿದರು. ಸ್ಪರ್ಧೆಯಿಂದ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಂಬಂಧ ಬೆಳವಣಿಗೆ ಕಾರಣವಾಗಲಿದೆ.ವಿವಿಧ ಸ್ಪರ್ಧೆಗಳು:ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತು ಪ್ರದರ್ಶನ ಹೀಗೆ ಅನೇಕ ಚಟುವಟಿಕೆಗಳನ್ನು ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯೋಪಾಧ್ಯಾಯ ರಾಜೇಂದ್ರ ಸೀನ್ನೂರ, ಚಂದ್ರಶೇಖರ ಕಿರಗಿ, ಗೀತಾ ದೇವಾಂಗಮಠ, ಮಹಾಂತೇಶ ಹೊಸಮನಿ, ಹನುಮಂತಸಾ ರಾಯಭಾಗಿ. ಎಸ್.ಎಸ್. ಅಂಗಡಿ, ಗ್ರಾಮದ ಹಿರಿಯರು ಸಹಕಾರ ನೀಡಿದ್ದಾರೆ.

10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಚಿತ್ರಗಳನ್ನು ರಂಗೋಲಿ ಮೂಲಕ ಬಿಡಿಸಿದ್ದಾರೆ. ಇದರಿಂದ ಮುಂಬರುವ ಪರೀಕ್ಷೆ ಫಲಿತಾಂಶ ಹೆಚ್ಚಿಸಲು ಇಂತಹ ಕೌಶಲ್ಯಗಳು ಸಹಕಾರಿ ಆಗುತ್ತದೆ ಎನ್ನುತ್ತಾರೆ ರಾಜ್ಯ ಪ್ರಶಸ್ತಿ ಪುರಸ್ಕೃತ, ವಿಜ್ಞಾನ ವಿಷಯದ ಶಿಕ್ಷಕ ಬಸವರಾಜ ವಾಲಿಕಾರ.

ರಂಗೋಲಿಯಲ್ಲಿ ವಿಜ್ಞಾನ ಚಿತ್ರಗಳನ್ನು ಬಿಡಿಸುವುದರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಿತ್ರಗಳಿಗೆ ಅಂಕಗಳು ಮೀಸಲಾಗಿರುವುದರಿಂದ ವಿಜ್ಞಾನ ವಿಷಯದಲ್ಲಿ ಬರುವಂತಹ ಅಂಕಗಳನ್ನು ಪಡೆದುಕೊಳ್ಳಲು ಈ ಚಟುವಟಿಕೆಗಳು ಸಹಕಾರಿಯಾಗುತ್ತವೆ ಎನ್ನುತ್ತಾರೆ 10ನೇ ತರಗತಿ ವಿದ್ಯಾರ್ಥಿನಿ ಯಶೋದಾ ಭಜಂತ್ರಿ.