ಸಾರಾಂಶ
ಶಿರಸಿ: ಲಕ್ಷಾಂತರ ರು. ಬೆಲೆಬಾಳುವ ಅಕೇಶಿಯಾ ಜಾತಿಯ ನಾಟಗಳನ್ನು ಸಾಗಿಸುತ್ತಿರುವ ಲಾರಿಯನ್ನು ವಶಕ್ಕೆ ಪಡೆದ, ಅರಣ್ಯ ಇಲಾಖೆಯ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.ಲಾರಿಯ ಚಾಲಕ ಮಹಾರಾಷ್ಟ್ರ ಕೊಲ್ಲಾಪುರದ ಚಿಕ್ಕಳ್ಳಿಯ ಮಾದೇವ ರಾಮಚಂದ್ರ ವಡ್ಡ(೩೪) ಹಾಗೂ ಶಿರಸಿಯ ಕೊಪ್ಪಳ ಕಾಲನಿಯ ಜಗದೀಶ ಮಾದೇವ ಗುಡಿಗಾರ(೪೬) ಬಂಧಿತ ವ್ಯಕ್ತಿಗಳು.ಇವರಿಬ್ಬರು ಶಿರಸಿ ವಲಯ ವ್ಯಾಪ್ತಿಯ ಚಂದನ್ ವುಡ್ ವಕ್ಸ್ ಆಂಡ್ ಫರ್ನಿಚರ್ ಹತ್ತಿರ ಜ. ೮ರಂದು ಸಂಜೆ ಸುಮಾರು ೪.೩೦ ಗಂಟೆಗೆ ೧೨ ಚಕ್ರದ ಲಾರಿಯ ಮೂಲಕ ಅನಧಿಕೃತವಾಗಿ ಅಕೇಶಿಯಾ ಜಾತಿಯ ೯೨ ನಾಟಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಶಿರಸಿ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಎ.ಎಚ್., ಶಿರಸಿ ವಲಯಾರಣ್ಯಾಧಿಕಾರಿ ಗಿರೀಶ ನಾಯ್ಕ, ಅರಣ್ಯ ಸಂಚಾರಿದಳದ ವಲಯಾರಣ್ಯಾಧಿಕಾರಿ ಶಿಲ್ಪಾ ನಾಯ್ಕ ನೇತೃತ್ವದಲ್ಲಿ ದಾಳಿ ನಡೆಸಿ, ನಾಟಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಲಾರಿಯನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜಿ.ಆರ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ನಿಂಗಾಣಿ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಧನಂಜಯ ನಾಯ್ಕ, ರಾಜೇಶ ಕೋಟಾರಕರ, ಅರಣ್ಯ ಸಂಚಾರಿದಳದ ಉಪವಲಯ ಅರಣ್ಯಾಧಿಕಾರಿಗಳಾದ ಶಶಿಧರ ಎಲ್.ಜಿ., ಯಶಸ್ವಿನಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಬೈಕ್‌ಗಳ ಡಿಕ್ಕಿ: ವ್ಯಕ್ತಿ ಸಾವು, ಮತ್ತೊಬ್ಬನಿಗೆ ಗಾಯ
ಮುಂಡಗೋಡ: ಬೈಕ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದು, ಮತ್ತೊರ್ವ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಟಿಬೇಟಿಯನ್ ಕಾಲನಿ ಬಳಿ ಗುರುವಾರ ನಡೆದಿದೆ.ಯಲ್ಲಾಪುರ ತಾಲೂಕಿನ ಕಿರವತ್ತಿಯ ಗುರುನಾಥ್ ಅಶೋಕ್ ಪವಾರ್(೩೫), ಸ್ಥಳದಲ್ಲೇ ಸಾವು ಕಂಡ ಬೈಕ್ ಸವಾರ. ಮತ್ತೊಂದು ಬೈಕಿನಲ್ಲಿದ್ದ ಮುಂಡಗೋಡ ಪಟ್ಟಣದ ಸುಭಾಸ್ ನಗರ ನಿವಾಸಿ ಆಶೀಫ್ ಗುಲಾಬ್ ಖಾನ್(೨೪) ಗಂಭೀರ ಗಾಯಗೊಂಡಿದ್ದು, ಈತನಿಗೆ ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ. ಮುಂಡಗೋಡ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.